ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿತ್ರ ವರದಿ : ಬೆಂಗಳೂರು ರಸ್ತೆ ಸುರಕ್ಷೆ ಸಪ್ತಾಹದ ಆ 7 ದಿನ

|
Google Oneindia Kannada News

ಬೆಂಗಳೂರು, ಫೆ. 4: ಬೆಂಗಳೂರು ಪೊಲೀಸ್ ಇಲಾಖೆ ಮತ್ತು ಆರ್ ಟಿಒ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ರಸ್ತೆ ಸಂಚಾರಿ ನಿಯಮಗಳನ್ನು ಮತ್ತೆ ತಿಳಿಸಿಕೊಟ್ಟಿತು.

ಬೆಂಗಳೂರು ನಗರದಾದ್ಯಂತ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಲಾಯಿತು. ಬೀದಿ ನಾಟಕಗಳು, ಸಿಗ್ನಲ್ ಗಳಲ್ಲಿ ಕರಪತ್ರ ಹಂಚಿಕೆ, ತಿಳಿವಳಿಕೆ ಕಾರ್ಯಕ್ರಮಗಳು ನಡೆದವು.

ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾವವಹಿಸಿದ್ದು ವಿಶೇಷ. ಬಸವನಗುಡಿಯ ಬ್ಯುಗಲ್ ರಾಕ್ ಉದ್ಯಾನದಲ್ಲಿ ನಡೆದ ನಾಟಕಗಳು ಗಮನ ಸೆಳೆದವು. ಪೊಲೀಸ್ ಇಲಾಖೆ ವಿದ್ಯಾರ್ಥಿಗಳಿಗೆ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಿದ್ದು ವಿಜೇತರಿಗೆ ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಟಿ ಹರ್ಷಿಕಾ ಪೂಣಚ್ಚ ಸೇರಿದಂತೆ ಸಾರಿಗೆ ಮತ್ತು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಜಾಗೃತಿ ಜಾಥಾ

ಜಾಗೃತಿ ಜಾಥಾ

ಜಯನಗರದ ಟ್ರಾಫಿಕ್ ಪೊಲೀಸರಿಂದ ಜಾಗೃತಿ ಜಾಥಾ.

ಸಮಾರೋಪ

ಸಮಾರೋಪ

ಸಪ್ತಾಹದ ಸಮಾರೋಪದಲ್ಲಿ ಪಾಲ್ಗೊಂಡಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಟಿ ಹರ್ಷಿಕಾ ಪುಣಚ್ಚ.

ವಿಭಿನ್ನ ತಂತ್ರ

ವಿಭಿನ್ನ ತಂತ್ರ

ರಸ್ತೆ ಸಂಚಾರಿ ನಿಯಮಗಳ ಜಾಗೃತಿ ಸಾರಿದ ಪಿಜ್ಜಾ ಬಾಯ್ ಗಳು

ಮಕ್ಕಳಿಗೆ ಮಾಹಿತಿ

ಮಕ್ಕಳಿಗೆ ಮಾಹಿತಿ

ರಸ್ತೆ ನಿಯಮಗಳ ಕುರಿತು ಮಕ್ಕಳಿಗೆ ಮಾಹಿತಿ.

ನಾಗರಿಕರು

ನಾಗರಿಕರು

ಸಮಾರೋಪ ಕಾರ್ಯಕ್ರಮದಲ್ಲಿ ಹಾಜರಿದ್ದು ಮಾಹಿತಿ ಪಡೆದುಕೊಂಡ ನಾಗರಿಕರು.

ನಾಟಕ

ನಾಟಕ

ಬೆಂಗಳೂರಿನ ಬಸವನಗುಡಿಯ ಬ್ಯುಗಲ್ ರಾಕ್ ಉದ್ಯಾನದಲ್ಲಿ ನಡೆದ ನಾಟಕಗಳು ಗಮನ ರಸ್ತೆ ಸಂಚಾರಿ ನಿಯಮಗಳನ್ನು ತಿಳಿಸಿಕೊಟ್ಟವು.

ಅಭಿನಯ

ಅಭಿನಯ

ನಾಟಕದ ಅಭಿನಯದಲ್ಲಿ ನಿರತ ವಿದ್ಯಾರ್ಥಿಗಳು.

ಸೈಕಲ್ ಸವಾರಿ

ಸೈಕಲ್ ಸವಾರಿ

ವಾಯು ಮಾಲಿನ್ಯ ತಡೆಗೆ ಸೈಕಲ್ ಸವಾರಿಯೇ ಉತ್ತಮ ಎಂದು ಸಾರಿದ ಪೊಲೀಸ್ ಸಿಬ್ಬಂದಿ

ಶಾಲಾ ಮಕ್ಕಳ ಆಸಕ್ತಿ

ಶಾಲಾ ಮಕ್ಕಳ ಆಸಕ್ತಿ

ರಸ್ತೆ ಸಂಚಾರಿ ನಿಯಮಗಳನ್ನು ಶೃದ್ಧೆಯಿಂದ ಆಲಿಸಿದ ವಿದ್ಯಾರ್ಥಿಗಳು

ನೃತ್ಯ ಜಾಗೃತಿ

ನೃತ್ಯ ಜಾಗೃತಿ

ನೃತ್ಯದ ಮೂಲಕ ಜಾಗೃತಿ ಮೂಡಿಸಿದ ವಿದ್ಯಾರ್ಥಿನಿಯರು.

ಚಿತ್ರಕಲಾ ಸ್ಪರ್ಧೆ

ಚಿತ್ರಕಲಾ ಸ್ಪರ್ಧೆ

ಚಿತ್ರಕಲಾ ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು

English summary
Bebguluru: 26th road safety week end in a positive note. Bengaluru Traffic Police and Department of Transport conducted number of programmes to students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X