• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ಫೋಟೋ; ಎಂಟಿಬಿ ನಾಗರಾಜ್ ಮನೆಯಲ್ಲಿ ಆಯುಧ ಪೂಜೆ

|

ಬೆಂಗಳೂರು, ಅಕ್ಟೋಬರ್ 25 : ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮನೆಯಲ್ಲಿ ಆಯುಧ ಪೂಜೆ ನಡೆಸಿರುವ ಪೋಟೋಗಳು ವೈರಲ್ ಆಗಿವೆ. ರೋಲ್ಸ್ ರಾಯ್ಸ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಅವರು ಹೊಂದಿದ್ದಾರೆ.

ಭಾನುವಾರ ಮಹದೇವಪುರ ಬಳಿ ಇರುವ ಎಂಟಿಬಿ ನಾಗರಾಜ್‌ರ 'ಆಚಂದ್ರಾರ್ಕ ನಿಲಯ'ದಲ್ಲಿ ಆಯುಧ ಪೂಜೆಯನ್ನು ಮಾಡಲಾಯಿತು. ರೋಲ್ಸ್ ರಾಯ್ಸ್, ಫೆರಾರಿ ಕಾರುಗಳಿಗೆ ಪೂಜೆಯನ್ನು ಸಲ್ಲಿಸಲಾಯಿತು. ಈ ಫೋಟೋಗಳು ಈಗ ವೈರಲ್ ಆಗಿವೆ.

ವಿಶ್ವನಾಥ್, ಶಂಕರ್, ಎಂಟಿಬಿ ಸಚಿವರಾಗಲು ಕಾನೂನು ತೊಡಕು?

ಎಂಟಿಬಿ ನಾಗರಾಜ್ ಕುಟುಂಬ ಸದಸ್ಯರ ಜೊತೆ ಆಯುಧ ಪೂಜೆಯಲ್ಲಿ ಪಾಲ್ಗೊಂಡರು. ರೋಲ್ಸ್ ರಾಯ್ಸ್, ಫೆರಾರಿ, ಬೆಂಝ್, ಟೊಯೋಟಾ ಫಾರ್ಚುನರ್, ಇನ್ನೋವಾ ಸೇರಿದಂತೆ 8 ಐಷಾರಾಮಿ ಕಾರು, ತಮ್ಮ ಲೈಸೆನ್ಸ್ ಹೊಂದಿದ ಪಿಸ್ತೂಲ್‌ಗೆ ಸಹ ಎಂಟಿಬಿ ನಾಗರಾಜ್ ಪೂಜೆ ಸಲ್ಲಿಸಿದರು.

ನಾನು ಸಚಿವನಾಗುವುದು ಪಕ್ಕಾ ಎಂದ ಎಂಟಿಬಿ

ಕರ್ನಾಟಕದಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿರುವ ಜನಪ್ರತಿನಿಧಿಗಳಲ್ಲಿ ಎಂಟಿಬಿ ನಾಗರಾಜ್ ಸಹ ಒಬ್ಬರು. ಜೂನ್‌ನಲ್ಲಿ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಅವರು 1,224 ಕೋಟಿ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದರು.

ಬ್ರೇಕಿಂಗ್ ನ್ಯೂಸ್ ಕೊಟ್ಟ ರೋಲ್ಸ್ ರಾಯ್ ಮಾಲೀಕ ಎಂಟಿಬಿ ನಾಗರಾಜ್!

ಎಂಟಿಬಿ ನಾಗರಾಜ್ ಹೆಸರಿನಲ್ಲಿ 884 ಕೋಟಿ ಆಸ್ತಿ, ಪತ್ನಿ ಶಾಂತಕುಮಾರಿ ಹೆಸರಿನಲ್ಲಿ 331 ಕೋಟಿ ಆಸ್ತಿ ಇದೆ. ಎಂಟಿಬಿ ನಾಗರಾಜ್ 52.72 ಕೋಟಿ ಸಾಲ ಮಾಡಿದ್ದಾರೆ.

   Corona ಓಡಿಸೋ ಸಮಯ ದೂರ ಇಲ್ಲಾ | Corona Vaccine | Oneindia Kannada

   ರೋಲ್ಸ್‌ ರಾಯ್ ಫಾಂಟಮ್, ಲ್ಯಾಂಡ್ ರೋವರ್, ಮರ್ಸಿಡಿಸ್ ಬೆಂಜ್, ಫಾರ್ಚೂನರ್ ಸೇರಿದಂತೆ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ.

   English summary
   Ayudha pooja performed in BJP leader and former Hoskote MLA MTB Nagaraj house. Legislative council member owns Rolls Royce and Ferrari cars.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X