ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌ಡಿಕೆ ಫೋನ್ ಕದ್ದಾಲಿಕೆ ಮಾಡಿರುವುದು ಮೇಲ್ನೋಟಕ್ಕೆ ಧೃಡ: ಶೆಟ್ಟರ್

|
Google Oneindia Kannada News

ಬೆಂಗಳೂರು, ಆಗಸ್ಟ್ 19: ಮಾಜಿ ಸಿಎಂ ಕುಮಾರಸ್ವಾಮಿ ಫೋನ್ ಟ್ಯಾಪಿಂಗ್ ಮಾಡಿರುವುದು ಮೇಲ್ನೋಟಕ್ಕೆ ಧೃಡವಾಗಿದೆ ಎಂದು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಟೆಲಿಗ್ರಾಫ್ ಕಾಯ್ದೆಯ ಪ್ರಕಾರ ಫೊನ್ ಕದ್ದಾಲಿಕೆ ಮಾಡುವಂತಿಲ್ಲ, ಅದು ಕಾನೂನಿಗೆ ವಿರುದ್ಧವಾದುದು, ಶಿಕ್ಷಾರ್ಹ ಅಪರಾಧ ಎಂದ ಅವರು, ಕುಮಾರಸ್ವಾಮಿ ಅವರು ಫೋನ್ ಕದ್ದಾಲಿಕೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಹೇಳಿದ್ದಾರೆ.

"ಏನ್ ಘನಂಧಾರಿ ಕೆಲಸ ಮಾಡಿದ್ದೀರ ಅಂತ ಟ್ಯಾಪ್ ಮಾಡ್ಬೇಕು?"; ಗುಡುಗಿದ ಎಚ್ ಡಿಕೆ

ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವ ಯಡಿಯೂರಪ್ಪ ಕ್ರಮವನ್ನು ಸ್ವಾಗತಿಸಿರುವ ಜಗದೀಶ್ ಶೆಟ್ಟರ್ ಅವರು, ತನಿಖೆಯಿಂದ ಪೂರ್ಣ ನಿಜಾಂಶ ಹೊರಗೆ ಬರಲಿದೆ ಎಂದರು.

Phone tapping case handed over to CBI. Jagadish Shettar well come the decision

ಕುಮಾರಸ್ವಾಮಿ ಅವರು ಟೆಲಿಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಮತ್ತು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಅದರಂತೆ ಈ ತನಿಖೆಯನ್ನು ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ವಹಿಸಿದ್ದಾರೆ.

ಕಾಂಗ್ರೆಸ್ ಡಿಲೀಟ್ ಮಾಡಿದ ಟ್ವೀಟ್ ನಲ್ಲಿ ಬಿಎಸ್ವೈ ಬಗ್ಗೆ ಏನಿದು ಪದಪ್ರಯೋಗ?ಕಾಂಗ್ರೆಸ್ ಡಿಲೀಟ್ ಮಾಡಿದ ಟ್ವೀಟ್ ನಲ್ಲಿ ಬಿಎಸ್ವೈ ಬಗ್ಗೆ ಏನಿದು ಪದಪ್ರಯೋಗ?

ಕುಮಾರಸ್ವಾಮಿ ಅವರು ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್‌ನ ಕೆಲವು ನಾಯಕರು, ಸ್ವ ಪಕ್ಷದ ಶಾಸಕರು, ಐಪಿಎಸ್ ಅಧಿಕಾರಿಗಳು ಹಾಗೂ ಕೆಲವು ಪತ್ರಕರ್ತರ ಫೋನ್ ಟ್ಯಾಪಿಂಗ್ ನಡೆಸಿದ್ದರು ಎಂದು ಆರೋಪಿಸಲಾಗಿದೆ.

English summary
Phone tapping case handed over to CBI. BJP leader Jagadish Shettar said welcome decision by Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X