ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೊಗಟ್ ಸೋದರಿಯರಿಂದ ಮಹಿಳೆಯರಿಗೆ ಸ್ವಯಂರಕ್ಷಣೆ ತರಬೇತಿ

ಫೆಬ್ರವರಿ 25 ಮತ್ತು 26 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈ ಕಾಸ್ವಯಂ ರಕ್ಷಣೆ ರ್ಯಾಗಾರದಲ್ಲಿ ಕುಸ್ತಿ ಚಾಂಪಿಯನ್ ಮತ್ತು ಒಲಿಂಪಿಯನ್ ಗಳಾದ ದಂಗಲ್ ಖ್ಯಾತಿಯ ಗೀತಾ ಫೋಗಟ್ ಮತ್ತು ಬಬಿತಾ ಕುಮಾರಿ ಅವರು ಪಾಲ್ಗೊಳ್ಳಲಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 23: ಡಾ.ಸುಧಾಕರ್ ನೇತೃತ್ವದ ಮಾತೃ ಟ್ರಸ್ಟ್, ಗ್ರಾಂಡ್ ಮಾಸ್ಟರ್ ಅಕ್ಷರ್ ಅವರ ಅಕ್ಷರ ಪವರ್ ಯೋಗ ಸಂಸ್ಥೆಯ ಸಹಯೋಗದೊಂದಿಗೆ, ಭಾ ರತದ ಅತಿ ದೊಡ್ಡ ಆತ್ಮ ರಕ್ಷಣೆ ಕುರಿತ ಕಾರ್ಯಾಗಾರವನ್ನು ಆಯೋಜಿಸುತ್ತಿದೆ.

ಫೆಬ್ರವರಿ 25 ಮತ್ತು 26 ರಂದು ನಡೆಯಲಿರುವ ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿರುವ 10,000 ಕ್ಕೂ ಅಧಿಕ ಮಹಿಳೆಯರಿಗೆ ಮಾರ್ಷಲ್ ಆರ್ಟ್ಸ, ಸ್ವಯಂ ರಕ್ಷಣೆ ಮತ್ತು ಯೋಗದ ಹಲವು ಪಟ್ಟುಗಳನ್ನು ಹೇಳಿಕೊಡಲಾಗುತ್ತಿದೆ.

ಕುಸ್ತಿ ಚಾಂಪಿಯನ್ ಮತ್ತು ಒಲಿಂಪಿಯನ್ ಗಳಾದ ದಂಗಲ್ ಖ್ಯಾತಿಯ ಗೀತಾ ಫೋಗಟ್ ಮತ್ತು ಬಬಿತಾ ಕುಮಾರಿ ಅವರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಹಿಳೆಯರು ಯಾವ ರೀತಿ ಆತ್ಮ ರಕ್ಷಣೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಮನನ ಮಾಡಿಕೊಡುವ ಮೂಲಕ ಪ್ರೇರಕ ಶಕ್ತಿಯಾಗಲಿದ್ದಾರೆ.

ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಈ ಎರಡು ದಿನಗಳ ಕಾರ್ಯಾಗಾರ ನಡೆಯಲಿದೆ. ಈ ಫೋಗಟ್ ಸಹೋದರಿಯರು ಹಿಂದಿ ಚಿತ್ರ ದಾಂಗಲ್ ಪ್ರೇರೇಪಣೆಯಾಗಿದ್ದು, ಮೊದಲ ದಿನವಾದ ಫೆಬ್ರವರಿ 25 ರ ಶನಿವಾರ ಬೆಳಗ್ಗೆ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಅವರೊಂದಿಗೆ ಸಂವಾದ ನಡೆಸಲಿದ್ದಾರೆ.

ಮಾತೃ ಟ್ರಸ್ಟ್‍ನ ಸಂಸ್ಥಾಪಕರಾದ ಡಾ.ಸುಧಾಕರ್

ಮಾತೃ ಟ್ರಸ್ಟ್‍ನ ಸಂಸ್ಥಾಪಕರಾದ ಡಾ.ಸುಧಾಕರ್

'ನಾವು ನಮ್ಮ ಜೀವನದಲ್ಲಿ ಪ್ರಮುಖವಾಗಿ ಮೂರು ಅಂಶಗಳಾದ ಆತ್ಮವಿಶ್ವಾಸ, ಆತ್ಮ ಗೌರವ ಮತ್ತು ಆತ್ಮ ರಕ್ಷಣೆಗಳನ್ನು ಅಳವಡಿಸಿಕೊಳ್ಳುವುದರತ್ತ ಗಮನ ಹರಿಸಬೇಕಿದೆ. ಕಠಿಣ ಸಂದರ್ಭಗಳಿಂದ ಸುಲಭವಾಗಿ ಪಾರಾಗಲು ಅಥವಾ ಅವುಗಳನ್ನು ಎದುರಿಸಲು ಮಹಿಳೆಯರಿಗೆ ಆತ್ಮ ರಕ್ಷಣೆ ತಂತ್ರಗಳು ನೆರವಾಗುತ್ತವೆ. ಈ ಕಾರ್ಯಾಗಾರವನ್ನು ನಾವು ಇಲ್ಲಿಗೇ ಮುಗಿಸುವುದಿಲ್ಲ. ಇದು ರಾಷ್ಟ್ರ ಮಟ್ಟದ ಆಂದೋಲನದ ಆರಂಭವಾಗಿದ್ದು, ಈ ಆಂದೋಲನವನ್ನು ಗಟ್ಟಿಗೊಳಿಸುವ ಉದ್ದೇಶ ಹೊಂದಿದ್ದೇವೆ' ಎಂದು ತಿಳಿಸಿದರು.

ಮಹಿಳಾ ಪೀಡಕರಿಂದ ರಕ್ಷಣೆ ಹೇಗೆ?

ಮಹಿಳಾ ಪೀಡಕರಿಂದ ರಕ್ಷಣೆ ಹೇಗೆ?

ಪ್ರಸ್ತುತ ನಗರಗಳು ಮಹಿಳೆಯರಿಗೆ ಸುರಕ್ಷಿತವಲ್ಲ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಪೀಡಕರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು ಎಂಬುದನ್ನು ಹೇಳಿ ಕೊಡುವುದರ ಬಗ್ಗೆ ಕಾರ್ಯಾಗಾರ ಬೆಳಕು ಚೆಲ್ಲಲಿದೆ. ಈ ಬಗ್ಗೆ ಮಾತೃ ಟ್ರಸ್ಟ್ ನ ಸಂಸ್ಥಾಪಕ ಡಾ.ಸುಧಾಕರ್ ಅವರು ಟ್ರಸ್ಟ್ ನ ವಿವರ ನೀಡಿದ್ದಾರೆ.

ಮಹಿಳೆಯರಿಗೆ ತರಬೇತಿ ನೀಡುವ ಕಾರ್ಯಕ್ರಮ

ಮಹಿಳೆಯರಿಗೆ ತರಬೇತಿ ನೀಡುವ ಕಾರ್ಯಕ್ರಮ

ಆತ್ಮ ರಕ್ಷಣೆ ಕೌಶಲ್ಯಗಳನ್ನು ಕಲಿತಿರುವ ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳುವುದರ ಜತೆಗೆ ಇತರರ ರಕ್ಷಣೆಯನ್ನೂ ಮಾಡಬಹುದಾಗಿದೆ. ಈ ಕಾರ್ಯಾಗಾರದಲ್ಲಿ ತರಬೇತಿ ಪಡೆಯುವ 10,000 ಕ್ಕೂ ಹೆಚ್ಚು ಮಹಿಳೆಯರು ಆತ್ಮ ರಕ್ಷಣೆಯ ಕಲೆಗಳನ್ನು ಕಲಿತರೆ, ಅವರಿಂದ ಮತ್ತಷ್ಟು ಸಾವಿರ ಮಹಿಳೆಯರಿಗೆ ಈ ಕಲೆಗಳನ್ನು ಕಲಿತುಕೊಳ್ಳಬಹುದಾಗಿದೆ

ಆತ್ಮ ರಕ್ಷಣೆಯಲ್ಲದೇ, ಕೌಶಲ್ಯ ತರಬೇತಿ, ಶಿಕ್ಷಣ, ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಮುಂಬರುವ ದಿನಗಳಲ್ಲಿ ಜಾರಿಗೊಳಿಸಲಿದೆ.

ನೋಂದಾಯಿಸಿ,ಪಾಲ್ಗೊಳ್ಳಿ

ನೋಂದಾಯಿಸಿ,ಪಾಲ್ಗೊಳ್ಳಿ

ಈ ಎರಡು ದಿನಗಳ ಬೃಹತ್ ಆತ್ಮ ರಕ್ಷಣೆ ಮತ್ತು ಯೋಗ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಇದರಲ್ಲಿ ಪಾಲ್ಗೊಳ್ಳಲು ಬಯಸುವವರು ದೂರವಾಣಿ ಸಂಖ್ಯೆ 9986121226/080-40952324 ಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಕಾರ್ಯಾಗಾರ ನಡೆಯುವ ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಬಳ್ಳಾರಿ ರಸ್ತೆ.
ದಿನಾಂಕ: ಫೆಬ್ರವರಿ 25 ರಿಂದ 26 ರವರೆಗೆ.
ಸಮಯ: ಬೆಳಗ್ಗೆ 6 ರಿಂದ 9 ರವರೆಗೆ.

English summary
India’s Biggest SELF DEFENCE workshop for Women organized by Matru Trust headed by Dr Sudhakar and Grand Master Akshar will see over 10,000 inspired women will undertake Martial Arts , Self Defense and Yoga sessions on 25th and 26th February. Champion Wrestlers and Olympians Geeta Phogat and Babita Kumari will inspire the women participants on the need to protect themselves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X