ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್‌ಲೈನ್ ಟ್ರಾನ್ಸಾಕ್ಶನ್ ಮಾಡುವ ಮುನ್ನ ಎಚ್ಚರ!

By Vanitha
|
Google Oneindia Kannada News

ಬೆಂಗಳೂರು, ಆಗಸ್ಟ್, 05 : ಬ್ಯಾಂಕಿಂಗ್ ಕ್ಷೇತ್ರ ನಾಗರಿಕರಿಗೆ ಹಲವಾರು ಸೇವೆಗಳನ್ನು ಒದಗಿಸುತ್ತಾ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ. ಆದರೆ ಅದರ ಹಿಂದೆಯೇ ಹ್ಯಾಕಿಂಗ್, ಫಿಶ್ಶಿಂಗ್ ನಂತಹ ಹಲವಾರು ಸಮಸ್ಯೆಗಳಿಗೆ ಈಡಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದೆ.

ನಾಗರಿಕರು ಹ್ಯಾಕಿಂಗ್, ಫಿಶ್ಶಿಂಗ್ ಗೆ ಒಳಗಾಗಿ ಸಾಕಷ್ಟು ಹಣವನ್ನು ಕಳೆದುಕೊಂಡಿರುವ ಪ್ರಕರಣಗಳು ದಿನನಿತ್ಯ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದ ಬಳಿ ಮತ್ತೊಂದು ಘಟನೆ ಸಂಭವಿಸಿದ್ದು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಕೆನರಾ ಬ್ಯಾಂಕಿನಲ್ಲಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಿ]

Phishing: Rs. 46,000 stolen from savings bank account

ಕೆನರಾ ಬ್ಯಾಂಕ್‌ ನಲ್ಲಿ ಉಳಿತಾಯ ಖಾತೆ ಹೊಂದಿದ್ದ ನಾಗರಾಜಯ್ಯ ಅವರ ಖಾತೆಯಿಂದ ಸುಮಾರು 46,000 ರೂ ರಾತ್ರಿ ವೇಳೆ ಹಣ ಆನ್‌ಲೈನ್ ಮೂಲಕ ವಿತ್ ಡ್ರಾ ಆಗಿದೆ. ಹಣದ ಮೊತ್ತದ ಕುರಿತಾಗಿ ಅನುಮಾನ ಬಂದ ಇವರು ಬ್ಯಾಂಕಿಗೆ ತೆರಳಿ ಪಾಸ್‌ ಪುಸ್ತಕಕ್ಕೆ ಮೊತ್ತವನ್ನು ಎಂಟ್ರಿ ಮಾಡಿಸಿ ಪರಿಶೀಲಿಸಿದಾಗ ಈ ವಿಚಾರ ತಿಳಿದು ಆತಂಕಕ್ಕೆ ಒಳಗಾಗಿದ್ದಾರೆ.

ಬ್ಯಾಂಕಿನಲ್ಲಿರುವ ಹಣವನ್ನು ಸುಮಾರು 19 ಬಾರಿ ಆನ್‌ಲೈನ್ ಟ್ರಾನ್ಸಾಕ್ಶನ್ ಬಳಿಕ 46,000 ರೂ ಪಡೆದಿದ್ದಾರೆ. ವಿಷಯ ತಿಳಿದ ನಾಗರಾಜಯ್ಯ ತಕ್ಷಣವೇ ಕೆನರಾ ಬ್ಯಾಂಕ್ ಮ್ಯಾನೇಜರ್ ಬಳಿ ದೂರು ಸಲ್ಲಿಸಿದ್ದು. ದೊಡ್ಡ ಬಳ್ಳಾಪುರ ವ್ಯಾಪ್ತಿಯ ಕೆನರಾ ಬ್ಯಾಂಕ್ ಶಾಖೆಯ ಎಟಿಎಂನ್ನು ಮುಚ್ಚಲಾಗಿದೆ.

'ನಾನು ಕೆನರಾ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದು 5 ವರ್ಷಗಳು ಸಂದಿವೆ. ಯಾವಾಗಲೂ ಆನ್ ಲೈನ್ ಟ್ರಾನ್ಸಾಕ್ಶನ್ ಮಾಡುತ್ತಿದೆ. ಇತ್ತೀಚೆಗೆ ಕೆಲವು ಔಷಧಿಗಳನ್ನು ಖರೀದಿಸುವ ಸಲುವಾಗಿ ಆನ್ ಲೈನ್ ಟ್ರಾನ್ಸಾಕ್ಶನ್ ಮಾಡಿದ್ದೆ. ಆದರೆ ಇದೇ ಮೊದಲ ಬಾರಿಗೆ ಈ ರೀತಿ ಘಟನೆ ಸಂಭವಿಸಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಫಿಶ್ಶಿಂಗ್ ಎಂದರೇನು?

ಇದು ಇ-ಮೇಲ್ ವ್ಯವಸ್ಥೆಗೆ ಸಂಬಂಧಿಸಿದುದ್ದಾಗಿದ್ದು, ಈ ಮೂಲಕ ಆನ್ ಲೈನ್ ಟ್ರಾನ್ಸಾಕ್ಷನ್ ಮಾಡುವ ವ್ಯಕ್ತಿಯ ಯೂಸರ್ ನೇಮ್, ಪಾಸ್ ವರ್ಡ್, ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಕಾರ್ಯ ಸಾಧಿಸುವುದು.

English summary
Hacking, Phishing is the major problem of the banking field. A saving account was hacked and Rs. 46,000 on Doddaballapur town. Nagarajaiah is the victim of this incident. He have had the his saving account in the Canara Bank from 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X