ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2ನೇ ಹಂತದ ಮೆಟ್ರೋ: ಪರಿಹಾರ ಮೊತ್ತ ಹೆಚ್ಚಳಕ್ಕೆ ಭೂಮಾಲಿಕರ ಒತ್ತಾಯ

|
Google Oneindia Kannada News

ಬೆಂಗಳೂರು, ಏ.25: ಎರಡನೇ ಹಂತದ ಮೆಟ್ರೋ ಕಾಮಗಾರಿ ಆರಂಭಗೊಂಡಿದೆ. ಬಿಎಂಆರ್‌ಸಿಎಲ್‌ಗೆ ಭೂಸ್ವಾಧೀನವೇ ದೊಡ್ಡ ತಲೆನೀವಾಗಿತ್ತು ಅಂತೂ ಈಗ ಸಮಸ್ಯೆ ಬಗೆಹರಿದಿದೆ.

ಆದರೆ ಪರಿಹಾರ ಮೊತ್ತ ಹೆಚ್ಚಳ ಮಾಡುವಂತೆ ಭೂಮಾಲಿಕರು ಒತ್ತಾಯಿಸುತ್ತಿದ್ದಾರೆ. ಭೂಸ್ವಾಧೀನ ಕಾಯ್ದೆ 2013ರ ಪ್ರಕಾರ ಎರಡನೇ ಹಂತದ ನಮ್ಮ ಮೆಟ್ರೋ ಯೋಜನೆಯಲ್ಲಿ ಸ್ವಾಧೀನಪಡಿಸಿಕೊಳ್ಳಲಾದ ಭೂಮಾಲೀಕರಿಗೆ ಹೆಚ್ಚಿನ ಪರಿಹಾರ ಮೊತ್ತವನ್ನು ಕೊಡಬೇಕು ಎಂದು ಮಾಡಲಾಗುತ್ತಿದೆ.

ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣಗಳು ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣಗಳು

ನಮ್ಮ ಮೆಟ್ರೋ ಮೊದಲ ಹಂತದಲ್ಲಿ ನೀಡಿರುವ ಪರಿಹಾರ ಮೊತ್ತವನ್ನು ನೋಡಿದರೆ ಈಗಿರುವ ಭೂಮಿಯ ದರದ ಶೇ.30ರಷ್ಟು ಮಾತ್ರ ಇದೆ. ಮೆಟ್ರೋ ಎರಡನೇ ಹಂತದಲ್ಲಿ 72.1 ಕಿ.ಮೀ ವ್ಯಾಪ್ತಿಯಲ್ಲಿ ಬಿಎಂಆರ್‌ಸಿಎಲ್ ಸುಮಾರು 300 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದೆ. ಅದಕ್ಕೆ 6,293 ಕೋಟಿ ರೂ ಪರಿಹಾರ ಮೊತ್ತವನ್ನೂ ಕೂಡ ನಿಗದಿಪಡಿಸಲಾಗಿದೆ.

Phase 2 Metro work land owners seek more compensation

ಕಂದಾಯ ಇಲಾಖೆಯ ಮಾಹಿತಿಯನ್ನೂ ಪಡೆದೇ ನಾವ ಪರಿಹಾರ ಮೊತ್ತ ನೀಡುತ್ತಿದ್ದೇವೆ ಪೂರ್ತಿ ಹಣ ನೀಡುವವರೆಗೂ ವಾರ್ಷಿಕ ಬಡ್ಡಿದರ ಶೇ.12ರಂತೆ ನಿಗದಿಪಡಿಸಲಾಗಿದೆ. ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾಸ್ ಡೆವಲಾಪ್‌ಮೆಂಟ್ ಬೋರ್ಡ್ ಮೂಲಕ ಪರಿಹಾರ ನೀಡಲಾಗುತ್ತಿದೆ.

ಏರ್‌ಪೋರ್ಟ್‌ ಮೆಟ್ರೋ ಮಾರ್ಗದ ಸರ್ವೇ ಆರಂಭ, ನಿಲ್ದಾಣಗಳೆಷ್ಟು?, ಸಮೀಕ್ಷೆ ಹೇಗೆ? ಏರ್‌ಪೋರ್ಟ್‌ ಮೆಟ್ರೋ ಮಾರ್ಗದ ಸರ್ವೇ ಆರಂಭ, ನಿಲ್ದಾಣಗಳೆಷ್ಟು?, ಸಮೀಕ್ಷೆ ಹೇಗೆ?

ಈಗ ಭೂಮಾಲೀಕರು ಪರಿಹಾರ ಮೊತ್ತವನ್ನು ಏರಿಸಲು ಒತ್ತಡ ಹೇರುತ್ತಿದ್ದಾರೆ ಎಂದು ಬಿಎಂಆರ್‌ಸಿಎಲ್ ಭೂಸ್ವಾಧೀನ ಇಲಾಖೆಯ ಪ್ರಧಾನ ವ್ಯವಸ್ಥಾಪಕರಾದ ಎಂಎಸ್ ಚನ್ನಪ್ಪ ಗೌಡರ್ ತಿಳಿಸಿದ್ದಾರೆ.

English summary
The whopping increase in compensation for properties handed over for the infrastructural work under the Land Acquisition Act 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X