ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾರಿ ಚಾಲಕನಿಂದ ಪೆಟ್ರೋಲ್ ಟ್ಯಾಂಕರ್ ಗಳ ಬೇಬಿ ಟ್ಯಾಂಕ್ ಸೀಕ್ರೇಟ್ ದಂಧೆ ಬಯಲಿಗೆ

|
Google Oneindia Kannada News

ಬೆಂಗಳೂರು, ಜು. 17: ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಸಂಗತಿಯನ್ನು ಲಾರಿ ಚಾಲಕನಿಂದ ಬಯಲಾಗಿದೆ. ಪೆಟ್ರೋಲ್ ಬಂಕ್ ಗಳಿಗೆ ಇಂಧನ ಪೂರೈಕೆ ಮಾಡುವ ಟ್ಯಾಂಕರ್ ಗಳಲ್ಲಿ ಬೇಬಿ ಟ್ಯಾಂಕರ್ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಕದ್ದು ಮಾರಾಟ ಮಾಡುವ ಬಹುದೊಡ್ಡ ದಂಧೆಯೊಂದು ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಈ ದಂಧೆ ಪೆಟ್ರೋಲ್ ಬಂಕ್ ಮಾಲೀಕರನ್ನೇ ನಿದ್ದೆಗೆಡಿಸಿದೆ.

ಲಾರಿ ಚಾಲಕನೊಬ್ಬ ಬಂಧನದ ವೇಳೆ ಬೇಬಿ ಟ್ಯಾಂಕರ್ ಭಯಾನಕ ದಂಧೆಯ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಲಾರಿ ಚಾಲಕ ನೀಡಿದ ಮಾಹಿತಿ ಮೇರೆಗೆ ಮೊದಲು ತಿಪಟೂರು ಪೊಲೀಸರು ಎಫ್ಐಆರ್ ದಾಖಲಿಸಿ ಹಾಸನ ಪೊಲೀಸರಿಗೆ ವರ್ಗಾವಣೆ ಮಾಡಿದ್ದಾರೆ. ಇದೀಗ ಹಾಸನದ ನಗರ ಠಾಣೆಯ ಪೊಲೀಸ್ ಪೇದೆ ಭಾಸ್ಕರ್ ಸೇರಿದಂತೆ ಐವರ ವಿರುದ್ಧ ಹಾಸನ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಪೊಲೀಸ್ ಪೇದೆ ಭಾಸ್ಕರ್ ಹದಿನೈದು ಟ್ಯಾಂಕರ್ ಇಟ್ಟುಕೊಂಡು ದಂಧೆ ನಡೆಸುತ್ತಿರುವುದು ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರು ಟ್ಯಾಂಕರ್ ವಶಪಡಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ತಿಪಟೂರಿನಿಂದ ಬಯಲಿಗೆ : ಹಾಸನದಿಂದ ತಿಪಟೂರಿನ ಪೆಟ್ರೋಲ್ ಬಂಕ್ ಗೆ ಬಾಸ್ಕರ್ ಮಾಲೀಕತ್ವದ ಟ್ಯಾಂಕರ್ ನಿಂದ ಬರುತ್ತಿತ್ತು. ಅನುಮಾನಗೊಂಡ ಬಂಕ್ ಮಾಲೀಕರು ತಪಾಸಣೆ ನಡೆಸಿದಾಗ ನೂರು ಲೀಟರ್ ಕಡಿಮೆ ಬಂದಿದೆ. ಅನುಮಾನಗೊಂಡ ಬಂಕ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದಾಗ ಟ್ಯಾಂಕರ್ ನಲ್ಲಿ ಬೇಬಿ ಟ್ಯಾಂಕರ್ ಇರುವ ಮಾಹಿತಿ ಬಾಯಿ ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಅಕ್ರಮ ಬಯಲಿಗೆ ಬಂದಿದೆ.

Petrol Tank Drivers Cheats Petrol Bunk owners in Stake

ಏನಿದು ಬೇಬಿ ಟ್ಯಾಂಕರ್ ದಂಧೆ: ರಾಜ್ಯದಲ್ಲಿ 12681 ಪೆಟ್ರೋಲ್ ಬಂಕ್ ಗಳಿವೆ. ಒಂದು ಬಂಕ್ ದಿನಕ್ಕೆ ಪ್ರತಿ ಬಂಕ್ ನಲ್ಲಿ 20 ರಿಂದ 30 ಸಾವಿರ ಲೀಟರ್ ವಹಿವಾಟು ನಡೆಯುತ್ತಿದೆ. ಬೆಂಗಳೂರು ಭಾಗದಲ್ಲಿರುವ ಪೆಟ್ರೋಲ್ ಬಂಕ್ ಗಳಿಗೆ ಮಾಲೂರಿನಲ್ಲಿರುವ ಐಓಸಿಯಿಂದ ಇಂಧನ ಪೂರೈಕೆ ಮಾಡುತ್ತದೆ. ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ ಸುತ್ತ ಮುತ್ತ ಬಂಕ್ ಗಳಿಗೆ ಹಾಸನದ ಸಮೀಪದ ಐಓಸಿಯಿಂದ ಇಂಧನ ಪೂರೈಕೆ ಆಗುತ್ತದೆ. ಆದರೆ, ಬಹುತೇಕ ಬಂಕ್ ಮಾಲೀಕರು ಸ್ವಂತ ವಾಹನ ಇಟ್ಟುಕೊಂಡಿಲ್ಲ. ಬದಲಿಗೆ ಬಾಡಿಗೆ ಟ್ಯಾಂಕರ್ ಗಳನ್ನೇ ಅವಲಂಬಿಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಟ್ಯಾಂಕರ್ ಮಾಲೀಕರು ಹೊಸ ದಂಧೆಯನ್ನೇ ವರ್ಷಗಳ ಹಿಂದೆ ಹುಟ್ಟು ಹಾಕಿದ್ದಾರೆ.

ಒಂದು ಟ್ಯಾಂಕರ್ ನಲ್ಲಿ ಮೂರು ಕಂಪಾರ್ಟ್ ಮೆಂಟ್ ಇರುತ್ತವೆ. ಪ್ರತಿ ಕಂಪಾರ್ಟ್ ಮೆಂಟ್ ನಲ್ಲಿ ತಲಾ ಐದು ಸಾವಿರ ಲೀಟರ್ ತುಂಬಲು ಅವಕಾಶ ವಿರುತ್ತದೆ. ಪ್ರತಿ ಲಾರಿಯೂ ಸುಮಾರು ಹನ್ನೆರಡರಿಂದ ಹದಿನೈದು ಸಾವಿರ ಲೀಟರ್ ಹೊಂದುವ ಸಾಮರ್ಥ್ಯವಿದೆ. ಆದರೆ ಈ ಟ್ಯಾಂಕರ್ ನ ಕೊನೆ ಭಾಗದಲ್ಲಿ ಹಾಗೂ ಆರಂಭದ ಎರಡು ಕಂಪಾರ್ಟ್ ಮೆಂಟ್ ನಲ್ಲಿ ತಲಾ ಐವತ್ತರಿಂದ ನೂರು ಲೀಟರ್ ಸಾಮರ್ಥ್ಯದ ಬೇಬಿ ಟ್ಯಾಂಕ್ ರಹಸ್ಯವಾಗಿ ಅಳವಡಿಸಿರುತ್ತಾರೆ. ಐಓಸಿಯಲ್ಲಿ ಹಾಕುವ ಲಾಕ್ ಗಳಿಗೆ ನಾಮ ಹಾಕಿರುವ ಟ್ಯಾಂಕರ್ ಮಾಲೀಕರು ಬೇಬಿ ಟ್ಯಾಂಕ್ ಗಳಿಗೆ ಮಿನಿ ಲಾಕ್ ಇಟ್ಟು ಪೆಟ್ರೋಲ್ ಕದಿಯುವ ದಂಧೆ ಮಾಡುತ್ತಾರೆ.

Petrol Tank Drivers Cheats Petrol Bunk owners in Stake

ಅನೇಕ ವರ್ಷಗಳಿಂದ ಈ ದಂಧೆ ನಡೆಯುತ್ತಿದೆ. ಅಳತೆ ಮತ್ತು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳಿಗೆ ದಂಧೆ ಗೊತ್ತಿತ್ತು. ಕೆಳ ಹಂತದ ಅಧಿಕಾರಿಗಳು ಈ ಬಗ್ಗೆ ವರದಿ ನೀಡಿದ್ದರು. ಆದರೆ ಮೇಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿರಲಿಲ್ಲ. ಹೀಗಾಗಿ ವರ್ಷಗಳಿಂದ ಈ ಬೇಬಿ ಟ್ಯಾಂಕರ್ ಪೆಟ್ರೋಲ್ ಕದಿಯುವ ದಂಧೆ ಮುಂದುವರೆಯುತ್ತಿದೆ. ಇದು ಕೇವಲ ಹಾಸನದ ನಾಲ್ಕು ಟ್ಯಾಂಕರ್ ಗೆ ಸೀಮಿವಾಗಿರುವ ದಂಧೆಯಲ್ಲ. ಬಾಡಿಗೆಗೆ ಇಂಧನ ಪೂರೈಸುವ ಪ್ರತಿ ಟ್ಯಾಂಕರ್ ನ ಕಥೆಯಿದು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

Recommended Video

Virat Kohli ಪ್ರಕಾರ ಈ ಬಾರಿ ವಿಶ್ವಕಪ್ ಗೆಲ್ಲೋದು ಇವರೇ | Team To Beat | Oneindia Kannada

ಐಓಸಿಗೆ ನಾಮ : ಸಾಮಾನ್ಯವಾಗಿ ಪೆಟ್ರೋಲ್ ಟ್ಯಾಂಕರ್ ಗೆ ಇಂಧನ ತುಂಬಿಸುವ ಐಓಸಿಯಲ್ಲಿ ಸರಿಯಾಗಿಯೇ ತುಂಬಿಸಲಾಗುತ್ತಿದೆ. ಅಲ್ಲಿ ಇಂಧನ ತುಂಬಿಸಿದ ಕೂಡಲೇ ಲಾಕ್ ಮಾಡಲಾಗುತ್ತದೆ. ಮತ್ತೊಂದು ಲಾಕ್ ಪೆಟ್ರೋಲ್ ಬಂಕ್ ಮಾಲೀಕರಿಗೆ ನೀಡಲಾಗಿರುತ್ತದೆ. ಹೀಗಾಗಿ ಬೇಬಿ ಟ್ಯಾಂಕ್ ಮೂಲಕ ದಂಧೆ ಮಾಡಲು ಸಾಧ್ಯವೇ ಇಲ್ಲ ಎಂಬುದು ಪೆಟ್ರೋಲಿಯಂ ಕರ್ಪೋರೇಷನ್ ಅಧಿಕಾರಿಗಳು ನೀಡಿದ ಸಬೂಬು. ಆದರೆ ವಾಸ್ತವದಲ್ಲಿ ಬೇಬಿ ಟ್ಯಾಂಕ್ ಗೆ ಪ್ರತ್ಯೇಕ ಲಾಕ್ ಮಾಡಿಸಲಾಗುತ್ತಿದೆ. ಅದು ಯಾರಿಗೂ ಕಾಣದಂತೆ ಎಂ. ಸೀಲ್ ಅಂಟಿಸಿರುತ್ತಾರೆ. ಐಓಸಿಯಿಂದ ಸಂಬಂಧಿತ ಪೆಟ್ರೋಲ್ ಬಂಕ್ ಗೆ ಟ್ಯಾಂಕರ್ ಡೆಲಿವರಿ ಮಾಡಿದ ಕೂಡಲೇ ಬೇಬಿ ಟ್ಯಾಂಕ್ ಲಾಕ್ ಓಪನ್ ಮಾಡಬಹುದು. ಅದನ್ನು ಓಪನ್ ಮಾಡಿದ ಕೂಡಲೇ ಒಂದು ಬೇಬಿ ಟ್ಯಾಂಕ್ ನಿಂದ ಕನಿಷ್ಠ 50 ಲೀಟರ್ ನಿಂದ 100 ಲೀಟರ್ ವರೆಗೂ ಉಳಿದಿದ್ದು ಅದನ್ನು ಪಡೆದ ಕೂಡಲ ಮತ್ತೆ ಬೇಬಿ ಟ್ಯಾಂಕ್ ಲಾಕ್ ಕಾಣದಂತೆ ಟ್ಯಾಂಕರ್ ಮೇಲೆ ಎಂ ಸೀಲ್ ಮಾಡಲಾಗುತ್ತದೆ ಎಂದು ಟ್ಯಾಂಕರ್ ಚಾಲಕನೊಬ್ಬ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

English summary
Petrol Tank Drivers Cheating Petrol bunk owners in stake. here is the inside story of Baby Tank scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X