ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂದುವರೆದ ಇಂಧನ ಬೆಲೆ ಇಳಿಕೆ: ಪೆಟ್ರೋಲ್ 40 ಪೈಸೆ ಇಳಿತ

|
Google Oneindia Kannada News

ಬೆಂಗಳೂರು, ನವೆಂಬರ್ 22: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮುಂದುವರೆದಿದ್ದು, ಇಂದು ಒಮ್ಮೆಲೆ ಪೆಟ್ರೋಲ್ ಬೆಲೆ ಲೀಟರ್‌ಗೆ 41 ಪೈಸೆ ಮತ್ತು ಡೀಸೆಲ್ ಲೀಟರ್‌ಗೆ 30 ಪೈಸೆ ಇಳಿದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸತತವಾಗಿ ಇಳಿಕೆ ಆಗುತ್ತಿರುವ ಪರಿಣಾಮ ಕಳೆದ 30 ದಿನಗಳಿಂದಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ ಆಗುತ್ತಿದೆ.

ಒಂದು ತಿಂಗಳಲ್ಲಿ 7.29 ರೂಪಾಯಿ ಇಳಿದ ಪೆಟ್ರೋಲ್ ಬೆಲೆಒಂದು ತಿಂಗಳಲ್ಲಿ 7.29 ರೂಪಾಯಿ ಇಳಿದ ಪೆಟ್ರೋಲ್ ಬೆಲೆ

ಕಳೆದ ಒಂದು ತಿಂಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ 7 ರೂಪಾಯಿಯಷ್ಟು ಇಳಿಸಿದ್ದರೆ ಡೀಸೆಲ್ ಬೆಲೆ ಲೀಟರ್‌ಗೆ 3.80 ರಷ್ಟು ಇಳಿದಿದೆ. ಇದು ಸಾರ್ವಜನಿಕರಲ್ಲಿ ಸ್ವಲ್ಪ ನೆಮ್ಮದಿ ತಂದಿದೆ.

Petrol price fall 40 paise, diesel price fall 30 paise

ಅಕ್ಟೋಬರ್‌ ಮಧ್ಯದಲ್ಲಿ ಪೆಟ್ರೋಲ್, ಡೀಸೆಲ್‌ ಬೆಲೆಗಳು ಗಗನಕ್ಕೇರಿದ್ದವು. ಇದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೆ ಇದೀಗ ತಿಂಗಳಿನಿಂದ ಇಂಧನ ಬೆಲೆ ತಹಬದಿಗೆ ಬರುತ್ತಿರುವುದು ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರುವ ಬಿಡಲು ಸಹಕಾರಿಯಾಗಿದೆ. ಆದರೆ ಎಲ್‌ಪಿಜಿ ದರ ಮಾತ್ರ ಏರುತ್ತಲೇ ಇರುವುದು ಆತಂಕ ತಂದಿದೆ.

ಪೆಟ್ರೋಲ್ ಬೆಲೆ 20 ಪೈಸೆ ಇಳಿಕೆ, ಇನ್ನಷ್ಟು ಕುಸಿತದ ನಿರೀಕ್ಷೆಪೆಟ್ರೋಲ್ ಬೆಲೆ 20 ಪೈಸೆ ಇಳಿಕೆ, ಇನ್ನಷ್ಟು ಕುಸಿತದ ನಿರೀಕ್ಷೆ

ಕಳೆದ ತಿಂಗಳಿನಿಂದ ಇಳಿಯುತ್ತಿರುವ ಪೆಟ್ರೋಲ್‌ ದರ, ಇಂದು ಮೊದಲ ಬಾರಿಗೆ ಭಾರಿ ಇಳಿತ ದಾಖಲಿಸಿದೆ. ಈ ಮುಂಚೆ ಕೆಲವೇ ಪೈಸೆಗಳಷ್ಟು ಇಳಿಯುತ್ತಿದ್ದ ದರ ಇಂದು 40 ಪೈಸೆ ಮತ್ತು ಡೀಸೆಲ್ 30 ಪೈಸೆ ಇಳಿದಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ ಇಂದು 76.57 ರೂಪಾಯಿ ಇದೆ. ಡೀಸೆಲ್ ಬೆಲೆ ಲೀಟರ್‌ಗೆ 71.35 ರೂಪಾಯಿ ಇದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 75.97 ರೂಪಾಯಿ ಪ್ರತಿ ಲೀಟರ್‌ಗೆ ಇದ್ದರೆ, ಡೀಸೆಲ್ ಬೆಲೆ 70.97 ರೂಪಾಯಿ ಇದೆ.

English summary
Petrol price fall 40 paise and Diesel price fall 30 paise on November 22. crude oil price dropping in international market since one month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X