ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಪೀಚರ್ ಮಚಾದೊ- ಹೊಸ ಆರ್ಚ್ ಬಿಷಪ್

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 21: ಕ್ಯಾಥೋಲಿಕ್‌ ಸಮುದಾಯ ಮಹಾ ಧರ್ಮಾಧ್ಯಕ್ಷ (ಆರ್ಚ್‌ ಬಿಷಪ್‌) ಆಗಿ ಪೀಟರ್ ಮಚಾದೊ ಅವರನ್ನು ಪೋಪ್‌ ಫ್ರಾನ್ಸಿಸ್ ನೇಮಿಸಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ಏಳನೇ ಆರ್ಚ್ ಬಿಷಪ್ ಆಗಿ ಮಚಾದೊ ಅವರು ಕಾರ್ಯ ನಿರ್ವಹಿಸಲಿದ್ದಾರೆ.

ಬರ್ನಾರ್ಡ್‌ ಮೊರಾಸ್ ಅವರು 14 ವರ್ಷಗಳಿಂದ ಬೆಂಗಳೂರಿನ ಮಹಾ ಧರ್ಮಾಧ್ಯಕ್ಷರಾಗಿದ್ದರು. ಮಚಾದೊ ಅವರು ಅಧಿಕಾರ ಸ್ವೀಕರಿಸುವವರೆಗೆ ಮೊರಾಸ್ ಅವರು ಆಡಳಿತಾಧಿಕಾರಿಯಾಗಿ ಮುಂದುವರೆಯಲಿದ್ದಾರೆ ಎಂದು ವ್ಯಾಟಿಕನ್ ನಿಂದ ಬಂದಿರುವ ಆದೇಶ ಪತ್ರದಲ್ಲಿ ಹೇಳಲಾಗಿದೆ.

Peter Machado is Bengaluru Archbishop

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಮಚಾದೊ ಅವರು 2006ರ ಫೆಬ್ರವರಿ 2ರಿಂದ ಬೆಳಗಾವಿಯ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

1954ರ ಮೇ 26ರಂದು ಹೊನ್ನಾವರದಲ್ಲಿ ಜನಿಸಿದ್ದ ಮಚಾದೊ ಅವರು, ಪುಣೆಯ ಪಾಪಲ್ ಸೆಮಿನರಿಯಲ್ಲಿ ತತ್ವಶಾಸ್ತ್ರ ಹಾಗೂ ದೇವತಾಶಾಸ್ತ್ರ ಅಭ್ಯಾಸ ಮಾಡಿದ್ದಾರೆ. 1978ರಲ್ಲಿ ಕಾರವಾರದಲ್ಲಿ ಪಾದ್ರಿಯಾಗಿ ದೀಕ್ಷೆ ಸ್ವೀಕರಿಸಿದ್ದರು. ರೋಮ್‌ನಲ್ಲಿ ಡಾಕ್ಟರೇಟ್ ಅಧ್ಯಯನ ಪಡೆದಿದ್ದಾರೆ.

ಇದಲ್ಲದೆ, ಕರ್ನಾಟಕ ಪ್ರಾದೇಶಿಕ ಕ್ಯಾಥೋಲಿಕ್ ಬಿಷಪ್ಸ್‌ ಕೌನ್ಸಿಲ್‌ನ ಸದಸ್ಯರು ಹಾಗೂ ಸೇಂಟ್ ಪೀಟರ್ಸ್‌ ಪೊಂಟಿಫಿಕಲ್ ಸೆಮಿನರಿ ಹಾಗೂ ಇನ್‌ಸ್ಟಿಟ್ಯೂಟ್‌ನ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದಾರೆ.

ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್‌ನ ಸದಸ್ಯ ಹಾಗೂ ಕರ್ನಾಟಕ ರೀಜನಲ್ ಬಿಷಪ್ಸ್‌ ಲೈಟಿ ಕಮಿಷನ್‌ನ ಅಧ್ಯಕ್ಷರಾಗಿರುವ ಅವರು ಕ್ಯಾಥೋಲಿಕ್ ಕೌನ್ಸಿಲ್ ಆಫ್ ಕರ್ನಾಟಕದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

English summary
Pope Francis has appointed Most Rev. Peter Machado as the Archbishop of Bengaluru. The appointment follows the resignation of Archbishop Most Rev. Bernard Moras, which was accepted on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X