ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಇಎಸ್‌ ಕ್ಯಾಂಪಸ್‌ ನೀರು ಖಾಲಿ, 21ರಿಂದ ತರಗತಿ

|
Google Oneindia Kannada News

ಬೆಂಗಳೂರು, ಆ.18 : ಎಲೆಕ್ಟ್ರಾನಿಕ್‌ ಸಿಟಿ ಪ್ರದೇಶದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನನಲ್ಲಿ ಗುರುವಾರದಿಂದ ತರಗತಿಗಳು ಪುನಃ ಆರಂಭವಾಗಲಿವೆ ಎಂದು ಕಾಲೇಜಿನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಕೆರೆ ಒಡೆದು ಕಾಲೇಜಿನ ಆವರಣದಲ್ಲಿ ತುಂಬಿಕೊಂಡಿದ್ದ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಲಾಗಿದೆ.

ಆ.15ರ ಶುಕ್ರವಾರ ರಾಯಸಂದ್ರ ಕರೆ ಒಡೆದ ಪರಿಣಾಮ ಅದರಲ್ಲಿ ಸಂಗ್ರಹವಾಗಿದ್ದ ಕೊಳಚೆ ನೀರು ಹರಿದು ಹೊರಬಂದಿತ್ತು. ಕೆರೆ ಪಕ್ಕದಲ್ಲೇ ಇರುವ ಪಿಇಎಸ್ ಕಾಲೇಜು ಸ್ವಲ್ಪ ತಗ್ಗು ಪ್ರದೇಶದಲ್ಲಿ ಇರುವುದರಿಂದ ಇಡೀ ಆವರಣದೊಳಗೆ ನೀರು ಸಂಗ್ರಹವಾಗಿತ್ತು.

PES

ಕಾಲೇಜಿನ ಪಾರ್ಕಿಂಗ್ ಪ್ರದೇಶ, ಕೆಳ ಮಹಡಿಯ ಕೆಲ ಕೊಠಡಿಗಳು, ಆವರಣದಲ್ಲಿ ನಿಂತಿದ್ದ ವಾಹನಗಳು ಸಂಪೂರ್ಣ ಜಲಾವೃತಗೊಂಡಿದ್ದವು. 30 ಪಂಪ್‌ ಸೆಟ್‌ಗಳ ಮುಖಾಂತರ ಮೂರು ದಿನ ನಿರಂತರ ಕಾರ್ಯಾಚರಣೆ ನಡೆಸಿ ನೀರನ್ನು ಹೊರಹಾಕಲಾಗಿದೆ.

ಕಾಲೇಜಿನ ಕ್ಯಾಂಪಸ್ ನಾಲ್ಕು ಬ್ಲಾಕ್‌ಗಳ ಆವರಣದಲ್ಲಿದ್ದ ನೀರನ್ನು ಹೊರಹಾಕಲಾಗಿದ್ದು, ಆ.21ರ ಗುರುವಾರದಿಂದ ತರಗತಿಗಳು ಆರಂಭವಾಗಲಿವೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ. ನೀರು ಹರಿದುಬಂದಿದ್ದರಿಂದ ಆವರಣದಲ್ಲಿ ತ್ಯಾಜ್ಯಗಳು ತುಂಬಿಹೋಗಿದ್ದವು. ಸದ್ಯ ಆವರಣವನ್ನು ಸ್ವಚ್ಛಗೊಳಿಸಿ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ.

ಕಾಲೇಜು ಅವರಣದಲ್ಲಿರುವ ವಸತಿ ನಿಲಯದಲ್ಲಿ 200 ವಿದ್ಯಾರ್ಥಿಗಳು ವಾಸವಾಗಿದ್ದರು. ಕಾಲೇಜು ಸಂಪೂರ್ಣ ಜಲಾವೃತಗೊಂಡಿದ್ದರಿಂದ ಆ ವಿದ್ಯಾರ್ಥಿಗಳನ್ನು ಬೋಟ್‌ಗಳ ಮೂಲಕ ಕಾಲೇಜು ಆವರಣದಿಂದ ಹೊರಗೆ ಕರೆತಂದು ಬನಶಂಕರಿ ರಿಂಗ್ ರಸ್ತೆಯಲ್ಲಿರುವ ಪಿಇಎಸ್‌ಐಟಿಗೆ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಗಿತ್ತು.

English summary
Classes at the PES Institute of Technology (PESIT) will resume on August 21 Thursday, with progress being made to drain water out of the Hosur Road campus. The institute’s website, on Sunday, posted recent images from the south campus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X