ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣದ ಕನಸು ಮತ್ತಷ್ಟು ಮುಂದಕ್ಕೆ

|
Google Oneindia Kannada News

ಬೆಂಗಳೂರು, ಏ.5:ನಗರದಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸಲು ಪೆರಿಫೆರಲ್ ರಸ್ತೆ ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ರಾಜ್ಯ ಸರ್ಕಾರದ ಈ ಜನಪ್ರಿಯ ಯೋಜನೆ ಮತ್ತಷ್ಟು ಮುಂದಕ್ಕೆ ಹೋಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಾಮಗಾರಿಗೆ ಬಿಡಿಎ ಅಧಿಕಾರಿಗಳು ಸಿದ್ಧತೆ ಅಂತಿಮಗೊಳಿಸಿದ್ದಾರೆ. ರಸ್ತೆ ಮಾರ್ಗದ ಸಮೀಕ್ಷೆಯನ್ನು ಖಾಸಗಿ ಸಂಸ್ಥೆ ಫಾಲ್ಕನ್ ಅಂತಿಮಗೊಳಿಸಿ ವರದಿ ಸಲ್ಲಿಸಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಫೆಬ್ರವರಿ ಕೊನೇ ವಾರದಲ್ಲಿ ಕಾಮಗಾರಿಗಾಗಿ ಟೆಂಡರ್ ಕರೆಯಲು ಸಿದ್ಧತೆ ನಡೆಸಿತ್ತು. ಆದರೆ ತಾಂತ್ರಿಕ ಕಾರಣದಿಂದ ಮುಂದಕ್ಕೆ ಹೋಗಿದೆ. ಮಾರ್ಚ್‌ನಲ್ಲೂ ಸಾಧ್ಯವಾಗಿಲ್ಲ, ಹಾಗಾಗಿ ಚುನಾವಣೆ ಮುಗಿದ ಬಳಿಕೆ ಟೆಂಡರ್ ಕರೆಯಲಾಗುತ್ತದೆ.

ಬೆಂಗಳೂರು-ಮೈಸೂರು ದಶಪಥ ರಸ್ತೆ ವಿಸ್ತರಣೆ, ಎಲ್ಲಿಯವರೆಗೆ? ಬೆಂಗಳೂರು-ಮೈಸೂರು ದಶಪಥ ರಸ್ತೆ ವಿಸ್ತರಣೆ, ಎಲ್ಲಿಯವರೆಗೆ?

ಬೆಂಗಳೂರಿನ ಹೊರವಲಯಗಳನ್ನು ಸಂಪರ್ಕಿಸುವ ಪೆರಿಫೆರಲ್ ವರ್ತುಲ ರಸ್ತೆಗೆ ಅಂದಾಜು 17,061 ಕೋಟಿ ರೂ. ವೆಚ್ಚವಾಗಲಿದೆ. ಇದಕ್ಕಾಗಿ 1,810 ಎಕರೆ ಭೂಮಿ ಅವಶ್ಯಕವಾಗಿದೆ.

ಎಲೆಕ್ಟ್ರಾನಿಕ್ಸ್ ಸಿಟಿ, ಸರ್ಜಾಪುರ, ವೈಟ್‌ಫೀಲ್ಡ್, ಹೊಸಕೋಟೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ತುಮಕೂರು ರಸ್ತೆ ಇನ್ನಿತರೆ ರಸ್ತೆಗಳಿಗೆ ವರ್ತುಲ ರಸ್ತೆ ಸಂಪರ್ಕ ಕಲ್ಪಿಸಲಿದೆ. ತುಮಕೂರು ಹಾಗೂ ಹೊಸೂರು ರಸ್ತೆ ಬಳಿ ಅಂದಾಜು 90 ಎಕರೆ ಭೂಮಿ ಬೇಕಾಗಿದೆ.

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

peripheral ring road project tender process has been postponed

ಕಾಮಗಾರಿಗೆ ಸಾವಿರ ಕೋಟಿ ರೂ. ಮೀಸಲಿಡುತ್ತಿದ್ದಂತೆ ಸಿದ್ಧತೆಗಳು ವೇಗವಾಗಿ ನಡೆಯುತ್ತಿವೆ. ಯಲಹಂಕದ ವೆಂಕಟಾಲ, ಸೀಗೆಹಳ್ಳಿ ಮುಂತಾದೆಡೆ 2010ರಲ್ಲಿ ತಯಾರಿಸಿದ ಮಾರ್ಗದಲ್ಲಿ ರಸ್ತೆ ನಿರ್ಮಾಣಕ್ಕೆ ಸಮಸ್ಯೆ ಎದುರಾದ ಹಿನ್ನೆಲೆ 2017ರಲ್ಲಿ ತಯಾರಿಸಿದ ಮಾರ್ಗದಲ್ಲೇ ಕಾಮಗಾರಿ ಕೈಗೊಳ್ಳಲು ಮುಂದಾಗಿದೆ.

English summary
State Government decided to postpone the peripheral ring road project till parliament elections are over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X