ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10 ವರ್ಷಗಳ ಬಳಿಕ ಕಾರ್ಯರೂಪಕ್ಕೆ ಬಂದ ಪೆರಿಫೆರಲ್ ರಸ್ತೆ ಯೋಜನೆ

|
Google Oneindia Kannada News

ಬೆಂಗಳೂರು, ಜೂನ್ 25: ಹತ್ತು ವರ್ಷಗಳ ಬಳಿಕ ಪೆರಿಫೆರಲ್ ರಸ್ತೆ ಯೋಜನೆ ಅಂತೂ ಕಾರ್ಯರೂಪಕ್ಕೆ ಬಂದಿದೆ. ಪೆರಿಫೆರಲ್ ರಸ್ತೆ ಭೂಸ್ವಾಧೀನಕ್ಕೆ 4500 ಕೋಟಿ ರೂ ಸರ್ಕಾರ ಅನುದಾನ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ.

2006ರಲ್ಲಿ ಎಚ್‌ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಹೊರವರ್ತುಲ ರಸ್ತೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭ ಮಾಡಲಾಗಿತ್ತು. ಆದರೆ ಕೆಲವೇ ತಿಂಗಳುಗಳಲ್ಲಿ ಸರ್ಕಾರ ಪತನವಾಗಿತ್ತು.

ಪೆರಿಫೆರಲ್ ರಿಂಗ್ ರಸ್ತೆ ನೈಸ್‌ ರಸ್ತೆಗೆ ಸೇರಲು 300 ಎಕರೆ ಭೂಮಿ ಬೇಕು ಪೆರಿಫೆರಲ್ ರಿಂಗ್ ರಸ್ತೆ ನೈಸ್‌ ರಸ್ತೆಗೆ ಸೇರಲು 300 ಎಕರೆ ಭೂಮಿ ಬೇಕು

10 ವರ್ಷಗಳಲ್ಲಿ ಪೆರಿಫೆರಲ್ ರಸ್ತೆ ಮಾಡಲು ಯಾರ ಕೈಯಿಂದಲೂ ಸಾಧ್ಯವಾಗಿಲ್ಲ ಅಂದು ಕೇವಲ 3,700 ಕೋಟಿ ಯೋಜನೆ ಅದಾಗಿದ್ದು, 17 ಸಾವಿರ ಕೋಟಿಗಳಾಗಿವೆ. ಭೂಸ್ವಾಧೀನ ಪ್ರಕ್ರಿಯೆಗಾಗಿ ಕಳೆದ ಸರ್ಕಾರ 4500 ಕೋಟಿಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟಿತ್ತು. ಆದರೆ ಕೇಂದ್ರ ನೆರವು ನೀಡಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

Peripheral ring road project started finally

ಆದರೆ ರಾಜ್ಯದ ಮೈತ್ರಿ ಸರ್ಕಾರದಲ್ಲಿ 4500 ಸಾವಿರ ಕೋಟಿ ಭೂಸ್ವಾಧೀನ ಕೊಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ ಎಂದರು. ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ನೀಡಿದ್ದ ಪರಿಸರ ಅನುಮತಿ ಪತ್ರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ತಡೆಯಾಜ್ಞೆ ನೀಡಿತ್ತು.

2015ರಲ್ಲಿ ಎನ್‌ಜಿಟಿ ಈ ಯೋಜನೆಗೆ ತಡೆ ನೀಡಿತ್ತು. ಆದರೆ ಎನ್‌ಜಿಟಿ ತಡೆ ನೀಡಿರುವ ವಿಚಾರ ಅಧಿಕಾರಿಗಳಿಗೆ ತಿಳಿದಿರಲೇ ಇಲ್ಲ.ಯೋಜನೆ ಕುರಿತು ನಡೆದ ಪರಿಶೀಲನೆಯಲ್ಲಿ ಈ ವಿಚಾರ ಬಹಿರಂಗವಾಗಿತ್ತು.

ಬೆಂಗಳೂರು-ಮೈಸೂರು ದಶಪಥ ರಸ್ತೆ ವಿಸ್ತರಣೆ, ಎಲ್ಲಿಯವರೆಗೆ?ಬೆಂಗಳೂರು-ಮೈಸೂರು ದಶಪಥ ರಸ್ತೆ ವಿಸ್ತರಣೆ, ಎಲ್ಲಿಯವರೆಗೆ?

ಜೊತೆಗೆ ಬೆಂಗಳೂರಿನಲ್ಲಿ 102 ಕಿ.ಮೀ ಎಲಿವೇಟೆಡ್ ಕಾರಿಡಾರ್‌ಗೂ ವಿರೋಧವಿದೆ. 26 ಸಾವಿರ ಕೋಟಿಗಳು ಈ ಯೋಜನೆಗೆ ವೆಚ್ಚವಾಗಲಿದೆ. ಆದರೆ ಅದಕ್ಕೂ ವಿರೋಧವಿದೆ. ಯೋಜನೆ ವಿರೋಧಿಸುವವರು ಟ್ರಾಫಿಕ್ ನಿರ್ವಹಣೆಗೆ ಬೇರೇನಾದರೂ ಪರಿಹಾರವಿದೆಯೇ ಎಂದು ಮಾಹಿತಿ ನೀಡಿದರೆ ಅದರಂತೆಯೇ ಕ್ರಮ ಕೈಗೊಳ್ಳುತ್ತೇವೆ ಎಂದರು.

English summary
Chief minister HD kumaraswamy said that Coalition government is ready to give 4, 500 crores to land acquisition for the Peripheral ringroad project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X