ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆರೆಸ್ ಮೇಲೆ ನಿಂತು ಕೈ ಬೀಸಿ ಮೆಟ್ರೊ ರೈಲು ಸ್ವಾಗತಿಸಿದ ಜನ

ನಮ್ಮ ಮೆಟ್ರೋ ದ ಹಸಿರು ಮಾರ್ಗ ಉದ್ಘಾಟನೆ ವೇಳೆ, ಈ ಮಾರ್ಗದಲ್ಲಿ ಮೊದಲ ರೈಲು ಸಾಗುತ್ತಿದ್ದಾಗ ಜಯನಗರ ಮುಂದಾದೆಡೆ ಜನರು ತಮ್ಮ ಟೆರೆಸ್ ಮೇಲೆ ಬಂದು ಕೈ ಬೀಸಿ ರೈಲನ್ನು ಸ್ವಾಗತಿಸಿದರು. ಒಟ್ಟಾರೆಯಾಗಿ, ಜನರು ತುಂಬಾ ಖುಷಿಪಟ್ಟರು.

|
Google Oneindia Kannada News

ಬೆಂಗಳೂರು, ಜೂನ್ 17: ದಶಕಗಳಿಂದ ಜನರು ನಿರೀಕ್ಷಿಸುತ್ತಿದ್ದ ನಮ್ಮ ಮೆಟ್ರೋ ಯೋಜನೆಯ ಹಸಿರು ಮಾರ್ಗದ ಉದ್ಘಾಟನೆಯನ್ನು ಜನರು ಹರ್ಷದಿಂದ ಸ್ವಾಗತಿಸುತ್ತಿದ್ದರು.

ಶನಿವಾರ ಸಂಜೆ, ಮೆಟ್ರೋ ರೈಲು ಸಂಪಿಗೆ ರಸ್ತೆ ನಿಲ್ದಾಣದಿಂದ ಯಲಚೇನ ಹಳ್ಳಿ ಕಡೆಗೆ ಸಾಗುತ್ತಿದ್ದರೆ, ಜಯ ನಗರ, ಲಾಲ್ ಬಾಗ್ ಮುಂತಾದ ಕಡೆಗೆ ಜನರು ತಮ್ಮ ಮನೆಗಳ ಟೆರೆಸ್ ಮೇಲೆ ಬಂದು ಕಾಯುತ್ತಿದ್ದರು.

People welcomes Namma Metro in Jayanagar, Yelachenahalli

ಹಾಗೆ ಕಾಯುತ್ತಿದ್ದ ಜನರು ಉದ್ಘಾಟನಾ ರೈಲು ಬಂದ ಕೂಡಲೇ ಹರ್ಷದಿಂದ ಕುಣಿಯುತ್ತಾ ರೈಲಿನತ್ತ ಕೈ ಬೀಸಿ ಟಾಟಾ ಮಾಡುತ್ತಿದ್ದು ಆಪ್ಯಾಯಮಾನವಾಗಿತ್ತು.

ಬೆಂಗಳೂರಿನ ಹೆಮ್ಮೆಯ ಹಸಿರು ಲೈನಿಗೆ ಕೆಂಪು ಹಾಸುಬೆಂಗಳೂರಿನ ಹೆಮ್ಮೆಯ ಹಸಿರು ಲೈನಿಗೆ ಕೆಂಪು ಹಾಸು

ಮಾರ್ಗದ ಅಲ್ಲಲ್ಲಿ ಹೀಗೆ ಟೆರೆಸ್ ಗಳ ಮೇಲೆ ನಿಂತು ಕೈ ಬೀಸುತ್ತಿದ್ದ ಜನರು, ತಮ್ಮ ಮೊಬೈಲ್ ಗಳಿಂದ ಫೋಟೋ ಗಳನ್ನು ಕ್ಲಿಕ್ಕಿಸುತ್ತಿದ್ದುದು ಸಾಮಾನ್ಯವಾಗಿತ್ತು.

People welcomes Namma Metro in Jayanagar, Yelachenahalli

ಒಟ್ಟಾರೆಯಾಗಿ ಹೇಳಬೇಕೆಂದರೆ, ಜನರಿಗೆ ತಮ್ಮ ಮನೆಗಳ ಸೂರುಗಳ ಮೇಲೆ ಮೆಟ್ರೋ ಹಾದು ಹೋಗುತ್ತಿರುವುದು ಪುಳಕಿತನ್ನಾಗಿಸಿದ್ದು ಸುಳ್ಳಲ್ಲ.

(ಚಿತ್ರಗಳು: ಚೇತನ್ ಓ.ಆರ್)

ಪ್ರಮಾಣಿಕರ ಗಮನಕ್ಕೆ:

  • ನಾಗಸಂದ್ರದಿಂದ ಯಲಚೇನ ಹಳ್ಳಿವರೆಗೆ ಒಟ್ಟು ದೂರ - 24.2 ಕಿ.ಮೀ.
  • ಮಾರ್ಗದಲ್ಲಿ ಬರುವ ನಿಲ್ದಾಣಗಳ ಸಂಖ್ಯೆ -24
  • ಮಾರ್ಗದಲ್ಲಿ ಬರುವ ಸುರಂಗ - 1
  • ಸುರಂಗದ ಉದ್ದ - 8.82 ಕಿ.ಮೀ.
  • ದರಗಳು ಗರಿಷ್ಠ 55 ರು. (ನಿಲ್ದಾಣವಾರು ದರ ಪ್ರಕಟಗೊಂಡಿಲ್ಲ)
English summary
When inaugural train journey headed towards Yelachenahalli from Sampige road station, people in Jayanagar and Yelachenahalli welcomed it with the celebrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X