ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನು ಮೇಲೆ ರಾಜ್ಯ ಹೆದ್ದಾರಿಗೂ ಸುಂಕದ ಬಿಸಿ!

ಸಚಿವ ಸಂಪುಟದಲ್ಲಿ ತೆಗೆದುಕೊಂಡ ಈ ನಿರ್ಧಾರವನ್ನು ಹಲವು ಮಂತ್ರಿಗಳು ವಿರೋಧಿಸಿದರೂ, ರಸ್ತೆಯ ಗುಣಮಟ್ಟ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಸುಂಕ ಸಂಗ್ರಹಿಸುವುದು ಅಗತ್ಯ ಎಂದು ಲೋಕೋಪಯೋಗಿ ಸಚಿವ ಎಚ್.ಸಿ,ಮಹದೇವಪ್ಪ ಸಮರ್ಥಿಸಿಕೊಂಡರು.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್ 18: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಸಂಸ್ಥೆಗಳಿಂದ ಅಭಿವೃದ್ಧಿ ಪಡಿಸಿರುವ 1530 ಕಿ.ಮೀ. ಉದ್ದದ ರಸ್ತೆಯಲ್ಲಿ ಪ್ರಯಾಣಿಸುವವರು ಇನ್ನು ಮೇಲೆ ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ!

ರಾಜ್ಯ ಸಚಿವ ಸಂಪುಟ ಮಾರ್ಚ್ 17 ರಂದು ತೆಗೆದುಕೊಂಡ ಕರ್ನಾಟಕದ ಪ್ರಮುಖ 19 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಸಂಗ್ರಹಿಸುವ ನಿರ್ಧಾರದಿಂದಾಗಿ ಪ್ರಯಾಣಿಕರ ಮೇಲೆ ಭಾರ ಹೆಚ್ಚಲಿದೆ.[ವಸತಿ ಪ್ರದೇಶ ವಾಣಿಜ್ಯೀಕರಣ, ಎಚ್ಎಎಲ್ ನಿವಾಸಿಗಳಿಂದ ಮತ್ತೆ ಪ್ರತಿಭಟನೆ]

ಸಚಿವ ಸಂಪುಟದಲ್ಲಿ ತೆಗೆದುಕೊಂಡ ಈ ನಿರ್ಧಾರವನ್ನು ಹಲವು ಮಂತ್ರಿಗಳು ವಿರೋಧಿಸಿದರೂ, ರಸ್ತೆಯ ಗುಣಮಟ್ಟ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಸುಂಕ ಸಂಗ್ರಹಿಸುವುದು ಅಗತ್ಯ ಎಂದು ಲೋಕೋಪಯೋಗಿ ಸಚಿವ ಎಚ್.ಸಿ,ಮಹದೇವಪ್ಪ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಜುಲೈ ವೇಳೆಗೆ ಟೋಲ್ ಸಂಗ್ರಹಕ್ಕೆ ಪೂರಕ ವ್ಯವಸ್ಥೆಯಾಗಲಿದೆ ಎಂದು ಲೋಕೋಪಯೋಗಿ ಇಲಾಖೆಯ ಮೂಲಗಳು ತಿಳಿಸಿವೆ.[ಬಿಡಿಎ ಸೈಟು, ನಲ್ಲಿಯಲ್ಲಿ ನೀರು, ಬಿಟಿಎಂಸಿ ಬಸ್ ಬಜೆಟ್ ನಲ್ಲಿ ಗಿಟ್ಟಿದ್ದೇನು?]

ಟೋಲ್ ಸಂಗ್ರಹ ಮತ್ತು ರಸ್ತೆ ನಿರ್ವಹಣೆಯ ಹೊಣೆ

ಟೋಲ್ ಸಂಗ್ರಹ ಮತ್ತು ರಸ್ತೆ ನಿರ್ವಹಣೆಯ ಹೊಣೆ

ಟೋಲ್ ಸಂಗ್ರಹ ಮತ್ತು ರಸ್ತೆ ನಿರ್ವಹಣೆಯ ಜವಾಬ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾದರಿಯಲ್ಲಿ ಟೆಂಡರ್ ಕರೆದು ಖಾಸಗಿ ಸಂಸ್ಥೆಗಳಿಗೆ ನೀಡಲಾಗುತ್ತದೆ.

ವಿನಾಯಿತಿ ಯಾರಿಗೆ?

ವಿನಾಯಿತಿ ಯಾರಿಗೆ?

ಟೋಲ್ ಸಂಗ್ರಹದಿಂದ ಸ್ಥಳೀಯರು ಮತ್ತು ಕೃಷಿ ಬಳಕೆ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಈಗಾಗಲೇ ಸಂಪೂರ್ಣ ಅಭಿವೃದ್ಧಿ ಹೊಂದಿರುವ ರಸ್ತೆಗಳಲ್ಲಿ ಮಾತ್ರತಕ್ಷಣವೇ ಈ ಟೋಲ್ ಸಂಗ್ರಹ ಆರಂಭವಾಗಲಿದೆ.

ಯಾವ ವಾಹನಕ್ಕೆ ಎಷ್ಟು?

ಯಾವ ವಾಹನಕ್ಕೆ ಎಷ್ಟು?

ಕಾರು, ಜೀಪು, ವ್ಯಾನು ಇನ್ನಿತರ ಲೈಟ್ ಮೋಟಾರ್ ವೆಹಿಕಲ್ ಗಳಿಗೆ ಕಿ.ಮೀ.ಗೆ 0.58 ರೂ., ಕಡಿಮೆ ಭಾರ ಹೊರುವ ವಾಹನಕ್ಕಾದರೆ ಕಿ.ಮೀ.ಗೆ 0.86, ಮಲ್ಟಿ ಎಕ್ಸೆಲ್ ವಾಹನಗಳಿಗೆ ಕಿ.ಮೀ.ಗೆ 2.57 ರೂ. ಬಹಳ ಭಾರವಿರುವ ವಾಹನ ಅಥವಾ 7 ಎಕ್ಸೆಲ್ ಗೂ ಅಧಿಕ ಭಾರದ ವಾಹನವಾದರೆ ಕಿ.ಮೀ.ಗೆ 3.45 ರೂ. ನಿಗದಿಯಾಗಿದೆ.

ಟೋಲ್ ಎಲ್ಲೆಲ್ಲಿ ಕಡ್ಡಾಯ?

ಟೋಲ್ ಎಲ್ಲೆಲ್ಲಿ ಕಡ್ಡಾಯ?

ರಾಜ್ಯ ಹೆದ್ದಾರಿಗಳಾದ ಎಸ್ ಎಚ್ -29 ಮುದಗಲ್ ಗಂಗಾವತಿಯ 74 ಕಿ.ಮೀ. ದೂರ, ಎಸ್.ಎಚ್- 1 ಪಡುಬಿದ್ರೆ ಕಾರ್ಕಳ (28 ಕಿ.ಮೀ.), ಎಸ್.ಎಚ್- 2 ಹಾವೇರಿ - ಹಾನ್ ಗಲ್(33 ಕಿ.ಮೀ.), ಎಸ್.ಎಚ್-34 ಧಾರವಾಡ- ಸವದತ್ತಿ (36 ಕಿ.ಮೀ.), ಎಸ್.ಎಚ್- 82 ಹೊಸಕೋಟೆ ಚಿಂತಾಮಣಿ (52 ಕಿ.ಮೀ.), ಎಸ್.ಎಚ್-61, 15 ತಿಂತಿಣಿ-ಕಲ್ಮಲಾ (74 ಕಿ.ಮೀ.), ಎಸ್.ಎಚ್- 3 ಮಾಗಡಿ- ಕಬ್ದೂರು (91 ಕಿ.ಮೀ.), ಎಸ್.ಎಚ್- 57 ನವಲಗುಂದ-ಮುಂಡರಗಿ (80 ಕಿ.ಮೀ.), ಎಸ್.ಎಚ್-84 ಶಿರಾ ಯಡಿಯೂರು (49 ಕಿ.ಮೀ.), ಎಸ್.ಎಚ್- 84 ಯಡಿಯೂರು-ಮಂಡ್ಯ (60 ಕಿ.ಮೀ.), ಎಸ್.ಎಚ್- 76 ದಾವಣಗೆರೆ-ಬೀರೂರು (149 ಕಿ.ಮೀ.), ಎಸ್.ಎಚ್- 34, 14, 44 ಸವದತ್ತಿ-ಕಮತಗಿ (130 ಕಿ.ಮೀ.), ಎಸ್.ಎಚ್- 1 ಹಾನಗಲ್- ತಡಸ್ (144 ಕಿ.ಮೀ.), ಎಸ್.ಎಚ್- 1, 148, 69 ಶಿವಮೊಗ್ಗ-ಹಾನಗಲ್ (128 ಕಿ.ಮೀ.), ಎಸ್.ಎಚ್- 3, 33 ಮಳವಳ್ಳಿ-ಕೊರಟಗೆರೆ (150 ಕಿ.ಮೀ.), ಎಸ್.ಎಚ್- 18 ಮುಧೋಳ-ನಿಪ್ಪಾಣಿ (108 ಕಿ.ಮೀ.), ಎಸ್.ಎಚ್- 30 ಸಿಂಧನೂರು-ಕುಷ್ಟಗಿ (75 ಕಿ.ಮೀ.), ಎಸ್.ಎಚ್- 73 ಹುಬ್ಬಳ್ಳಿ-ಲಕ್ಷ್ಮೇಶ್ವರ (43 ಕಿ.ಮೀ.), ಎಸ್.ಎಚ್- 132 ಬಳ್ಳಾರಿ ಮೋಕಾ (26 ಕಿ.ಮೀ.)

English summary
The state cabinet has decided to put toll charges to all the vehicles travelling in state highways. ರಾಜ್ಯ ಹೆದ್ದಾರಿಗೂ ಸುಂಕದ ಬಿಸಿ!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X