ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ವೇಗ ಪಡೆದ ಮನೆಗೆ ಪಿಎನ್‌ಜಿ ಸಂಪರ್ಕಿಸುವ ಯೋಜನೆ

|
Google Oneindia Kannada News

ಬೆಂಗಳೂರು, ಮೇ 15: ಬೆಂಗಳೂರು ನಗರದ ಮನೆಗಳಿಗೆ ಪೈಪ್ ಮೂಲಕ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಸರಬರಾಜು ಮಾಡುವ ಯೋಜನೆಯು ಪ್ರಾರಂಭವಾಗಿ 7 ವರ್ಷಗಳಾಗಿದ್ದು, ಹಲವು ಪ್ರಯತ್ನಗಳ ನಂತರ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗಿದೆ.

ರಾಜ್ಯದ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಮಂಗಳೂರಿನಲ್ಲಿ ಪಿಎನ್‌ಜಿ ಸರಬರಾಜು ಮಾಡುವ ನಗರ ಅನಿಲ ಸರಬರಾಜು (ಸಿಜಿಡಿ) ಗುತ್ತಿಗೆಯನ್ನು 2015ರಲ್ಲಿ ಗೇಲ್‌ ಇಂಡಿಯಾ ಲಿಮಿಟೆಡ್‌ ಪಡೆದುಕೊಂಡಿತು.

ಮಹಾರಾಷ್ಟ್ರದ ದಾಭೋಲ್‌ನಿಂದ ರಾಮನಗರ ಜಿಲ್ಲೆಯ ಬಿಡದಿವರೆಗೆ ಭೂಗತವಾಗಿ 1200 ಕಿ. ಮೀ. ಉದ್ದದ ಮುಖ್ಯ ಮಾರ್ಗದಿಂದ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಅನಿಲ ಪೂರೈಕೆ ಪಡೆಯುತ್ತವೆ. ಕೊಚ್ಚಿಯಿಂದ ಮಂಗಳೂರಿಗೆ ಅನಿಲ ಪೂರೈಕೆಯಾಗುತ್ತದೆ.

Bengaluru People To Wait For Supply Of PNG To Their Homes

ಗೇಲ್‌ ಇಂಡಿಯಾ ಲಿಮಿಟೆಡ್‌ ಕಂಪನಿಯು ಬಿಡದಿಯಿಂದ ಹೊರ ವರ್ತುಲ ರಸ್ತೆ (ಒಆರ್‌ಆರ್‌)ಗೆ ಸಂಪರ್ಕಿಸುವ 23 ಕಿ. ಮೀ. ಉದ್ದದ ಸಬ್‌ಲೈನ್‌ ಅನ್ನು ಹಾಕಿದೆ. ಅಲ್ಲದೇ ಒಆರ್‌ಆರ್‌ ನಿಂದ ನಗರದಾದ್ಯಂತ 73 ಕಿ. ಮೀ. ಪೈಪ್‌ಲೈನ್‌ ಅಳವಡಿಸಿದೆ.

ನಂತರ, ಜಿಲ್ಲಾ ನಿಯಂತ್ರಣಾ ಕೇಂದ್ರ(ಡಿಆರ್‌ಎಸ್‌)ಗಳನ್ನು ಸ್ಥಾಪಿಸುವುದು ಮುಂದಿನ ಹಂತವಾಗಿದೆ. ಡಿಆರ್‌ಎಸ್‌ನಿಂದ ಕಡಿಮೆ ಒತ್ತಡದಲ್ಲಿ ವಿವಿಧ ಪ್ರದೇಶಗಳಿಗೆ ಅನಿಲ ಸರಬರಾಜಾಗುತ್ತದೆ. ಒಂದು ಡಿಆರ್‌ಎಸ್‌ ಒಂದು ಲಕ್ಷ ಜನರಿಗೆ ಅನಿಲ ಪೂರೈಸುತ್ತದೆ.

ಇದುವರೆಗೆ 25 ಡಿಆರ್‌ಎಸ್‌ಗಳನ್ನು ಗೇಲ್‌ ಇಂಡಿಯಾ ಲಿಮಿಟೆಡ್‌ ಸ್ಥಾಪಿಸಿದೆ. ಕಂಪನಿಯು ಪ್ರಸ್ತುತ ದಿನಕ್ಕೆ ನಾಲ್ಕು ಲಕ್ಷ ಸ್ಟ್ಯಾಂಡರ್ಡ್ ಕ್ಯಾಬಿಕ್‌ ಮೀಟರ್‌ ಪಿಎನ್‌ಜಿ ಅನ್ನು ಪೂರೈಸುತ್ತದೆ. ಎಲ್‌ಪಿಜಿ ಗಿಂತಲೂ ಪಿಎನ್‌ಜಿ ಹೆಚ್ಚು ಸುರಕ್ಷಿತ ಮತ್ತು ಅಗ್ಗವಾಗಿದೆ. ಪಿಎನ್‌ಜಿ ಗಾಳಿಗಿಂತ ಹಗುರವಾಗಿರುವುದರಿಂದ ಅದು ಸರಕ್ಷಿತವಾಗಿದೆ. ಮತ್ತು ಇದನ್ನು ಕದಿಯಲು ಆಗುವುದಿಲ್ಲ.

"ನಾವು ಕಳೆದ ಮೂರು ತಿಂಗಳಿನಿಂದ ಪಿಎನ್‌ಜಿ ಬಳಸುತ್ತಿದ್ದೇವೆ. ಎಲ್‌ಪಿಜಿ ಸಿಲಿಂಡರ್‌ ಒಂದಕ್ಕೆ ಸುಮಾರು 1000 ರೂ. ವೆಚ್ಚವಾಗುತ್ತದೆ. ಇದರಷ್ಟೇ ಪ್ರಮಾಣದ ಪಿಎನ್‌ಜಿ ಬಳಕೆಗೆ ನಮಗೆ 600 ರೂ. ತಗಲುತ್ತಿದೆ. ಎಲ್‌ಪಿಜಿಗೆ ಹೋಲಿಸಿದರೆ ಇದರಲ್ಲಿ ಶಾಖ ತೀವ್ರವಾಗಿರುತ್ತದೆ. ಹಾಗಾಗಿ ಅಡುಗೆ ಬೇಗ ಆಗುತ್ತದೆ'' ಎಂದು ಹೊರಮಾವು ನಿವಾಸಿ ಶ್ರೀಲತಾ ಶಂಕರ್‌ ಹೇಳಿದರು.

"ಉದ್ಯೋಗಿಗಳಿಗೆ ಪಿಎನ್‌ಜಿ ಅನುಕೂಲಕರ. ಸರಿಯಾದ ಸಮಯಕ್ಕೆ ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡಬೇಕಾಗುತ್ತದೆ. ಅಲ್ಲದೇ ಪತಿ, ಪತ್ನಿ ಇಬ್ಬರೂ ಉದ್ಯೋಗ ಮಾಡುತ್ತಿದ್ದರೆ, ಗ್ಯಾಸ್‌ ಸಿಲಿಂಡರ್‌ ಡೆಲಿವರಿ ಬಂದಾಗ ಸ್ವೀಕರಿಸುವುದು ಕೂಡ ಕಷ್ಟವಾಗುತ್ತದೆ. ಈ ದೃಷ್ಟಿಯಿಂದಲೂ ಕೂಡ ಪಿಎನ್‌ಜಿ ಉತ್ತಮ'' ಎಂದು ಹೊರಮಾವು ಮತ್ತೊಬ್ಬ ನಿವಾಸಿ ಶಾಂತಾ ಅಭಿಪ್ರಾಯಪಟ್ಟರು.

"ಕಳೆದ ಎರಡು ವರ್ಷಗಳಿಂದ ಪಿಎನ್‌ಜಿ ಸಂಪರ್ಕ ಪಡೆಯಲು ಪ್ರಯತ್ನಿಸಿದೆವು. ಅಂತಿಮವಾಗಿ ನಮಗೆ ಈ ವರ್ಷದ ಜನವರಿಯಲ್ಲಿ ಸಂಪರ್ಕ ದೊರೆಯಿತು'' ಎಂದು ಟ್ರಿನಿಟಿ ಎನ್‌ಕ್ಲೇವ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೋಚು ಶಂಕರ್‌ ಹೇಳಿದರು.

"ಈಗಾಗಲೇ ಶಾಂಪಿಂಗ್‌ ಮಾಲ್‌ಗಳು, ಹೋಟೆಲ್‌ಗಳು, ಸಾಫ್ಟ್‌ವೇರ್‌ ಕಂಪನಿಗಳು, ಔಷಧ ಕಂಪನಿಗಳು ಸೇರಿದಂತೆ ಅನೇಕ ವಾಣಿಜ್ಯ ಕಟ್ಟಡಗಳು ಮತ್ತು ಕೈಗಾರಿಕೆಗಳು ಪಿಎನ್‌ಜಿ ಸಂಪರ್ಕ ಪಡೆದುಕೊಂಡಿವೆ. ಅದೇ ರೀತಿ ಮನೆಗಳಿಂದಲೂ ಇದಕ್ಕೆ ಬೇಡಿಕೆ ಹೆಚ್ಚಿದೆ. ಪ್ರತಿನಿತ್ಯ ಸರಾಸರಿ 65 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ'' ಎಂದು ಗೇಲ್‌ ಇಂಡಿಯಾ ಲಿಮಿಟೆಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ವಿವೇಕ್‌ ವಾತೋಡ್ಕರ್‌ ತಿಳಿಸಿದರು.

"ಆದರೂ ನಮಗೆ ಬೇಡಿಕೆಗೆ ತಕ್ಕಂತ ಸಂಪರ್ಕಗಳು ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಮೊದಲು ಪೈಪ್‌ಲೈನ್‌ ಅಳವಡಿಸಲು ಅನೇಕ ಇಲಾಖೆಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಅಲ್ಲದೇ ಇತರ ಕಾರಣಗಳಿಗಾಗಿ ರಸ್ತೆ ಅಗೆಯುವಾಗ ಅನಿಲ ಪೈಪ್‌ಲೈನ್‌ಗೆ ಯಾವುದೇ ಹಾನಿಯಾಗದಂತೆ ನಿಗಾವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹಲವು ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ'' ಎಂದು ವಿವೇಕ್‌ ಹೇಳಿದರು.

Recommended Video

Thomas Cup: ಕ್ರಿಕೆಟ್ನಲ್ಲಿ ವಿಶ್ವಕಪ್ ನಷ್ಟೇ ಸ್ಪೆಷಲ್ ಈ ಥಾಮಸ್ ಕಪ್:ಯಾಕೆ ಗೊತ್ತಾ? | Oneindia Kannada

English summary
Bengaluru city people to wait for the supply of Piped Natural Gas (PNG) to their homes. The project began 7 years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X