ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಲಸಿಕೆ ಕೊರತೆ; ಜಿಲ್ಲೆಗಳತ್ತ ಮುಖ ಮಾಡಿದ ಜನರು

|
Google Oneindia Kannada News

ಬೆಂಗಳೂರು, ಮೇ 11; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಯೇ ಕೋವಿಡ್ ವಿರುದ್ಧದ ಲಸಿಕೆಯ ಕೊರತೆಯೂ ಕಾಡುತ್ತಿದೆ. ಇದರಿಂದಾಗಿ 18-44 ವರ್ಷದವರು ಲಸಿಕೆಗಾಗಿ ಅಕ್ಕ-ಪಕ್ಕದ ಜಿಲ್ಲೆಗಳತ್ತ ಮುಖ ಮಾಡಿದ್ದಾರೆ.

ಕರ್ನಾಟಕದಲ್ಲಿ ಮೇ 10ರಿಂದ 18-44 ವರ್ಷದವರು ಕೋವಿಡ್ ವಿರುದ್ಧದ ಲಸಿಕೆ ಪಡೆಯಲು ಅನುಮತಿ ನೀಡಿದೆ. ಆದರೆ ಬೆಂಗಳೂರು ನಗರದಲ್ಲಿ ಲಸಿಕೆ ಲಭ್ಯವಿಲ್ಲ. ನೋಂದಣಿ ಮಾಡಿಸಿಕೊಂಡರು ಮಾತ್ರ ಸಂಚಾರ ನಡೆಸಲು ಪೊಲೀಸರು ಅನುಮತಿ ನೀಡುತ್ತಿದ್ದಾರೆ.

ಕೊರೊನಾ ಲಸಿಕೆ ಕೊರತೆ: ಭಾರತದ ಇಂದಿನ ಸ್ಥಿತಿಗೆ ಅಂದಿನ ತಪ್ಪು ಕಾರಣ!? ಕೊರೊನಾ ಲಸಿಕೆ ಕೊರತೆ: ಭಾರತದ ಇಂದಿನ ಸ್ಥಿತಿಗೆ ಅಂದಿನ ತಪ್ಪು ಕಾರಣ!?

ಇದರಿಂದಾಗಿ ಯುವಕರು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ಲಸಿಕೆ ಪಡೆಯಲು ತೆರಳುತ್ತಿದ್ದಾರೆ. ಬೆಂಗಳೂರಿನ ಜನರು ಜಿಲ್ಲೆಗಳತ್ತ ತೆರಳುತ್ತಿದ್ದಾರೆ ಇದರಿಂದಾಗಿ ಸ್ಥಳೀಯ ಜನರಿಗೆ ಲಸಿಕೆ ಸಿಗುತ್ತಿಲ್ಲ.

ಕರ್ನಾಟಕವೇ ನಂ.1: ಲಸಿಕೆ, ಪರೀಕ್ಷೆಯಲ್ಲಿ ಇಳಿಕೆ, ಸೋಂಕು ಮತ್ತು ಸಾವಿನಲ್ಲಿ ಏರಿಕೆ!?ಕರ್ನಾಟಕವೇ ನಂ.1: ಲಸಿಕೆ, ಪರೀಕ್ಷೆಯಲ್ಲಿ ಇಳಿಕೆ, ಸೋಂಕು ಮತ್ತು ಸಾವಿನಲ್ಲಿ ಏರಿಕೆ!?

People Heading Bengaluru Nearby Districts For Vaccine

ಚಿಂತಾಮಣಿಯಲ್ಲಿ ಲಸಿಕೆ ಪಡೆದ ಸುಧೀರ್ ಶ್ರೀನಿವಾಸ್ ಈ ಕುರಿತು ಟ್ವೀಟ್ ಮಾಡಿದ್ದಾರೆ. 9.40ಕ್ಕೆ ತೆರಳಿದ್ದ ಅವರು 11.30ಕ್ಕೆ ಲಸಿಕೆಯನ್ನು ಪಡೆದರು. ಆದರೆ ಬೆಂಗಳೂರು ನಗರದಲ್ಲಿ ಎರಡು ದಿನ ಕಾದರೂ ಲಸಿಕೆ ಸಿಕ್ಕಿರಲಿಲ್ಲ.

ವಿದೇಶಗಳಿಂದ ಕೊರೊನಾ ಲಸಿಕೆ ಆಮದಿಗೆ 'ಮಹಾ' ಸರ್ಕಾರದ ಚಿಂತನೆ ವಿದೇಶಗಳಿಂದ ಕೊರೊನಾ ಲಸಿಕೆ ಆಮದಿಗೆ 'ಮಹಾ' ಸರ್ಕಾರದ ಚಿಂತನೆ

ಬೆಂಗಳೂರು ನಗರದಲ್ಲಿ ಮೂರು ದಿನಗಳ ಕಾಲ ಸ್ಲಾಟ್ ಬುಕ್ ಮಾಡಲು ಪ್ರಯತ್ನ ನಡೆಸಿದರೂ ಸಿಕ್ಕಿಲ್ಲ ಎಂದು ಗಿರೀಶ್ ಟ್ವೀಟ್ ಮಾಡಿದ್ದಾರೆ. ಆದರೆ ಅವರು ಮೈಸೂರಿನಲ್ಲಿ ಲಸಿಕೆ ಪಡೆಯಲು ಸ್ಲಾಟ್ ಬುಕ್ ಮಾಡಿದ್ದಾರೆ.

ಬೇರೆ ಜಿಲ್ಲೆಗಳಿಗೆ ಹೋಗಿ ಲಸಿಕೆ ಪಡೆಯುವುದರಲ್ಲಿ ಯಾವುದೇ ಅಪರಾಧವಿಲ್ಲ. ಆದರೆ ಇದರಿಂದಾಗಿ ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಲಸಿಕೆ ಸಿಗುವುದಿಲ್ಲ ಎಂಬುದು ದೂರು. ಗ್ರಾಮೀಣ ಪ್ರದೇಶದ ಜನರು ಲಸಿಕೆ ಪಡೆಯಲು ನಗರ ಪ್ರದೇಶಕ್ಕೆ ಬರಲು ಇಚ್ಛಿಸುವುದಿಲ್ಲ.

Recommended Video

Lockdown ನಿಯಮಗಳಲ್ಲಿ ಮೊದಲನೇ ದಿನವೇ ಬದಲಾವಣೆ | Oneindia Kannada

ಕೋವಿಡ್ ಪೋರ್ಟ್‌ಲ್‌ನಲ್ಲಿನ ಸೋಮವಾರದ ಮಾಹಿತಿಯಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 19.86 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ 3.02 ಲಕ್ಷ, ಮೈಸೂರಿನಲ್ಲಿ 7.9 ಲಕ್ಷ, ಬೆಂಗಳೂರು ಗ್ರಾಮಾಂತರದಲ್ಲಿ 1.82 ಲಕ್ಷ, ಕೋಲಾರ 2.36 ಲಕ್ಷ, ತುಮಕೂರು 4.29 ಲಕ್ಷ ಮತ್ತು ರಾಮನಗರದಲ್ಲಿ 2.29 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.

English summary
Bengaluru facing shortage of vaccine supply. People now heading to nearby districts for vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X