ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ರಸ್ತೆಯಲ್ಲಿ ಹೊಸ ರೀತಿಯ ಸೂಚನಾ ಫಲಕ ಕಂಡು ತಲೆ ಕೆಡಿಸಿಕೊಂಡ ವಾಹನ ಸವಾರರು

|
Google Oneindia Kannada News

ಬೆಂಗಳೂರು, ಆಗಸ್ಟ್ 3: ವಾಹನ ಸವಾರರಿಗೆ ಸೂಚನೆ ನೀಡಲು ರಸ್ತೆ ಬದಿಯಲ್ಲಿ ಸಾರಿಗೆ ಇಲಾಖೆ ಸೂಚನಾ ಫಲಕಗಳನ್ನು ಅಳವಡಿಸುತ್ತದೆ. ಸಾಮಾನ್ಯವಾಗಿ ಎಲ್ಲಾ ವಾಹನ ಸವಾರರಿಗೆ ಈ ಸೂಚನಾ ಫಲಕಗಳ ಚಿಹ್ನೆಯ ಬಗ್ಗೆ ಅರಿವು ಇರುತ್ತದೆ. ಆದರೆ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಪರೂಪದ ಸೂಚನಾ ಫಲಕವೊಂದನ್ನು ಅಳವಡಿಸಲಾಗಿದೆ. ಇದರ ಅರ್ಥ ಏನೆಂದು ಹಲವರು ತಲೆ ಕೆಡಿಸಿಕೊಂಡಿದ್ದಾರೆ.

ಬೆಂಗಳೂರಿನ ಪ್ರಯಾಣಿಕರೊಬ್ಬರಿಗೂ ಈ ಸೂಚನಾ ಫಲಕದ ಅರ್ಥ ಏನೆಂದು ಗೊತ್ತಾಗಿಲ್ಲ. ಸೂಚನಾ ಫಲಕದಲ್ಲಿರುವ ಚಿಹ್ನೆಯ ಅರ್ಥ ತಿಳಿದುಕೊಳ್ಳಲು ಅವರು ಆ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅನುಮಾನಗಳನ್ನು ನಿವಾರಿಸಲು ಟ್ರಾಫಿಕ್ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ಕುತೂಹಲಕಾರಿ ಪ್ರಯಾಣಿಕ ಅನಿರುದ್ಧ ಮುಖರ್ಜಿ ಅವರು ಬಿಳಿ ಹಿನ್ನೆಲೆಯಲ್ಲಿ ನಾಲ್ಕು ಕಪ್ಪು ಚುಕ್ಕೆಗಳನ್ನು ತೋರಿಸುವ ಚಿಹ್ನೆಯನ್ನು ಹೊಂದಿರುವ ಸೂಚನಾ ಫಲಕದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ, "ಇದು ಯಾವ ಟ್ರಾಫಿಕ್ ಚಿಹ್ನೆ? ಇದನ್ನು ಹೋಪ್‌ಫಾರ್ಮ್ ಸಿಗ್ನಲ್‌ಗೆ ಸ್ವಲ್ಪ ಮೊದಲು ಹಾಕಲಾಗಿದೆ!" ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪೊಲೀಸರು ಕೂಡ ಉತ್ತರ ನೀಡಿದ್ದಾರೆ.

ರಸ್ತೆಯಲ್ಲಿ ಅಂಧರು ಇರಬಹುದು ಎನ್ನುವ ಸೂಚನೆ

ಇದಕ್ಕೆ ವೈಟ್ ಫೀಲ್ಡ್ ವಲಯದ ಸಂಚಾರಿ ಪೊಲೀಸರು ಕ್ಷಿಪ್ರವಾಗಿ ಸ್ಪಂದಿಸಿದ್ದು, ಫಲಕ ಹಾಕಿದ್ದು ಏಕೆ ಎಂದು ವಿವರಿಸಿದರು. ಇದು "ಎಚ್ಚರಿಕೆಯ ಸೂಚನಾ ಫಲಕ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆಯಲ್ಲಿ ಅಂಧರು ಇರಬಹುದು ಎಂದು ಸೂಚನೆ ನೀಡಲು ಇದನ್ನು ಅಳವಡಿಸಲಾಗಿದೆ. ಆದ್ದರಿಂದ ಪ್ರಯಾಣಿಕರು ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

"ಆತ್ಮೀಯ ಸರ್, ಇದು ಎಚ್ಚರಿಕೆಯ ಫಲಕವಾಗಿದೆ, ಇದು ಅಂಧರು ರಸ್ತೆಯಲ್ಲಿರಬಹುದು, ಹಾಗಾಗಿ ನೀವು ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡುತ್ತದೆ. ಹೋಪ್ ಫಾರ್ಮ್ ಜಂಕ್ಷನ್‌ನಲ್ಲಿ ಅಂಧರಿಗಾಗಿ ಶಾಲೆ ಇದೆ, ಆದ ಕಾರಣ ಸೂಚನಾ ಫಲಕ ಹಾಕಲಾಗಿದೆ" ಎಂದು ಸಂಚಾರ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪೊಲೀಸರ ಕ್ರಮವನ್ನು ಶ್ಲಾಘಿಸಿದ ನೆಟ್ಟಿಗರು

ಟ್ರಾಫಿಕ್‌ ಪೊಲೀಸರ ಪ್ರತಿಕ್ರಿಯಯನ್ನು ನೋಡಿದ ನಂತರು, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪೊಲೀಸರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ವಾವ್! ಈ ಚಿಹ್ನೆಯ ಬಗ್ಗೆ ಎಂದಿಗೂ ತಿಳಿದಿರಲಿಲ್ಲ. ಧನ್ಯವಾದಗಳು," ಒಬ್ಬ ಬಳಕೆದಾರರು ಬರೆದಿದ್ದಾರೆ.

"ಶಿಕ್ಷಣಕ್ಕಾಗಿ ಧನ್ಯವಾದಗಳು! ನಮ್ಮಲ್ಲಿ ಹೆಚ್ಚಿನವರಿಗೆ ಈ ರಸ್ತೆ ಚಿಹ್ನೆಗಳು ಮತ್ತು ಅವುಗಳ ಅರ್ಥದ ಬಗ್ಗೆ ತಿಳಿದಿಲ್ಲ!" ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಹೇಳಿದ್ದಾರೆ.

 ಹೆಚ್ಚಿನ ಮಾಹಿತಿ ನೀಡಲು ನೆಟ್ಟಿಗರ ಮನವಿ

ಹೆಚ್ಚಿನ ಮಾಹಿತಿ ನೀಡಲು ನೆಟ್ಟಿಗರ ಮನವಿ

"ಅದ್ಭುತವಾಗಿದೆ ಬೆಂಗಳೂರು ಸಂಚಾರ ಪೊಲೀಸರೆ, ಸಂಚಾರ ನಿಯಮಗಳ ಬಗ್ಗೆ ಪ್ರತಿದಿನ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಳ್ಳಲು ಸಮಯವಿದೆ ಎಂದು ನಾನು ಭಾವಿಸುತ್ತೇನೆ, ಇದು ನಮಗೆ ಮತ್ತಷ್ಟು ಶಿಕ್ಷಿತರಾಗಲು ಸಹಾಯ ಮಾಡುತ್ತದೆ." ಎಂದು ಹೇಳಿದ್ದಾರೆ.

ಮತ್ತೆ ಕೆಲವರು ರಸ್ತೆಯಲ್ಲಿ ಗುಂಡಿಗಳಿವೆ ಎಂದು ಸೂಚನೆ ನೀಡುವ ಫಲಕದಂತಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಟ್ವಿಟರ್ ಹ್ಯಾಂಡಲ್, ಸೂಚನಾ ಫಲಕಗಳ ಜಾಗೃತಿ ಅಭಿಯಾನ ನಡೆಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 ಈ ಮೊದಲು ವೈರಲ್ ಆಗಿದ್ದ ಸೂಚನಾ ಫಲಕ

ಈ ಮೊದಲು ವೈರಲ್ ಆಗಿದ್ದ ಸೂಚನಾ ಫಲಕ

ಬೆಂಗಳೂರಿನ ವಿಶಿಷ್ಟ ಸೈನ್ ಬೋರ್ಡ್ ವೈರಲ್ ಆಗಿರುವುದು ಇದೇ ಮೊದಲಲ್ಲ. ಕೆಲ ದಿನಗಳ ಹಿಂದೆ, ಟ್ವಿಟರ್ ಬಳಕೆದಾರರು ಕೋರಮಂಗಲದ ಮನೆಯೊಂದರ ಹೊರಗೆ ನೋ ಪಾರ್ಕಿಂಗ್ ಸೈನ್‌ಬೋರ್ಡ್‌ನ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ಬೋರ್ಡ್‌ಗಳಲ್ಲಿ ಒಂದು ಬೋರ್ಡ್‌ನಲ್ಲಿ "ಇಲ್ಲಿ ಪಾರ್ಕಿಂಗ್ ಮಾಡುವ ಬಗ್ಗೆ ಯೋಚನೆ ಕೂಡ ಮಾಡಬೇಡಿ" ಎಂದು ಬರೆದಿದ್ದರೆ, ಇನ್ನೊಂದು "5 ನಿಮಿಷ ಅಲ್ಲ, 30 ಸೆಕೆಂಡುಗಳಲ್ಲ, ಪಾರ್ಕಿಂಗ್ ಮಾಡುವಂತೆಯೇ ಇಲ್ಲ!" ಎಂದು ಬರೆಯಲಾಗಿತ್ತು.

ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಯಿತು, ಕೆಲವು ಇಂಟರ್ನೆಟ್ ಬಳಕೆದಾರರು ಈ ಕ್ರಮಕ್ಕೆ ಒಲವು ತೋರಿದರೆ ಇತರರು ಅದರ ವಿರುದ್ಧ ಟೀಕೆ ಮಾಡಿದ್ದರು.

English summary
Bengaluru Police Installed new traffic sign board near Hopefarm signal. The officials revealed that it is a "cautionary signboard" which indicates that a blind person can be present on the road and therefore commuters need to exercise caution while driving.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X