• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕೊಡಗಿನ ಸಂತ್ರಸ್ತ ಕ್ರೀಡಾಪಟು ತಶ್ಮಾಗೆ ಉದ್ಯೋಗದ ಭರವಸೆ'

|

ಬೆಂಗಳೂರು, ನವೆಂಬರ್ 15: ಪೀಪಲ್ ಫಾರ್ ಪೀಪಲ್ ತಂಡ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆಸುತ್ತಿರುವ ಕೊಡಗಿಗಾಗಿ ರಂಗಸಪ್ತಾಹದ ನಾಲ್ಕನೇ ದಿನದ ಕಾರ್ಯಕ್ರಮದ ವರದಿ ಇಲ್ಲಿದೆ.

"ನಿರಾಶ್ರಿತರ 10 ಮಂದಿ ಮಕ್ಕಳನ್ನು ನನಗೆ ದತ್ತು ಕೊಡಿ. ನಾನು ಅವರ ವಿದ್ಯಾಭ್ಯಾಸಕ್ಕೆ ಅಗತ್ಯವಾದದ್ದೆಲ್ಲವನ್ನೂ ಮಾಡುತ್ತೇನೆ, ಅಲ್ಲದೇ, ಕೊಡಗಿನ ಸಂತ್ರಸ್ತ ಕುಟುಂಬದ ಯಾವ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಕಟ್ಟಲಾಗುವುದಿಲ್ಲವೋ ಅವರಿಗೂ ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ.

'ಕೊಡಗಿಗೆ ನಮ್ಮೆಲ್ಲರ ಋಣ ಇದೆ, ಪ್ರಕೃತಿ ಮಾತೆ ಮುನಿಸಿಕೊಂಡಿದ್ದಾಳೆ'

ರಾಜ್ಯ ಸರಕಾರದಿಂದಷ್ಟೇ ಅಲ್ಲದೆ, ಪ್ರಧಾನ ಮಂತ್ರಿಯವರಿಗೂ ಪತ್ರ ಬರೆದು ಕೇಂದ್ರ ಸರಕಾರದ ಸಹಾಯವನ್ನು ಕೇಳುತ್ತೇನೆ. ಕೊಡಗಿನ ಸಂಕಷ್ಟದಿಂದ ಸಮಸ್ಯೆಗೊಳಗಾಗಿರುವ ಅಂತರಾಷ್ಟ್ರೀಯ ಥ್ರೋಬಾಲ್ ಪ್ಲೇಯರ್ ತಶ್ಮಾ ಅವರಿಗೆ ಕೆಲಸ ಕೊಡಿಸುತ್ತೇನೆ" ಇದು ಕೊಡಗಿನ ನಿರಾಶ್ರಿತರಿಗಾಗಿ ಮಿಡಿದ ಸಂಸದ ಶಿವರಾಮೇಗೌಡರ ನುಡಿಗಳು.

ಪ್ರೇಕ್ಷಕರ ಮನಸೂರೆಗೊಂಡ ಕೊಡಗಿಗಾಗಿ ರಂಗಸಪ್ತಾಹ ಕಾರ್ಯಕ್ರಮ

ಇಂದಿನ ಕಾರ್ಯಕ್ರಮದಲ್ಲಿ (ನವೆಂಬರ್ 15), ಚಲನಚಿತ್ರ ಗಾಯಕಿ ಅನುರಾಧ ಭಟ್ ಅವರಿಂದ ಸುಗಮ ಸಂಗೀತ ಗಾಯನ ಹಾಗೂ ಸಾರ್ಕ್ ತಂಡದವರಿಂದ ರಂಗಭೂಮಿ ಕಲಾವಿದ, ನಟ ಅವಿನಾಶ್ ಷಟಮರ್ಶನ ನಿರ್ದೇಶನದ ನನ್ನೊಳು ನೀ ನಿನ್ನೊಳು ನಾ ನಾಟಕ ನಡೆಯಲಿದೆ.

ದುಡಿಯುವ ಹಣದಲ್ಲಿ ಶೇ.10ರಷ್ಟು ಮೀಸಲು

ದುಡಿಯುವ ಹಣದಲ್ಲಿ ಶೇ.10ರಷ್ಟು ಮೀಸಲು

"ಕೊಡಗಿನ ಜನತೆಗೆ ಕಣ್ಣಿನ ಚಿಕಿತ್ಸೆ, ಡಯಾಬಿಟೀಸ್, ಬಿಪಿ ಅಂತಹ ಸಮಸ್ಯೆಗಳಿದ್ದರೆ ಅಂಥವರಿಗೆ ಉಚಿತ ಚಿಕಿತ್ಸೆ ನೀಡುತ್ತೇನೆ. ಪ್ರತಿ ದಿನ ದುಡಿಯುವ ಹಣದಲ್ಲಿ ಶೇ.10ರಷ್ಟನ್ನು ಕೊಡಗಿನ ಅಭಿವೃದ್ಧಿಗೆ ಮೀಸಲಿಡುತ್ತೇನೆ" ಇದು ಡಾ.ರಾಘವೇಂದ್ರ ಅವರ ಮಾತುಗಳು.

ಚಿತ್ರದಲ್ಲಿ ಸಂಸದ ಶಿವರಾಮೇಗೌಡ

ಚಿತ್ರದಲ್ಲಿ ಸಂಸದ ಶಿವರಾಮೇಗೌಡ

ಕೊಡಗಿನಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ ಕುಟುಂಬಕ್ಕೆ ವಿಷ್ಣುವರ್ಧನ್ ಹೆಸರಿನಲ್ಲಿ 4 ಲಕ್ಷ ವೆಚ್ಚದಲ್ಲಿ ವಿಷ್ಣು ನಿಲಯ ಎನ್ನುವ ಮನೆ ಕಟ್ಟಿಕೊಡುವೆ. ಇದಕ್ಕಾಗಿ ಸ್ವಂತ ಹಣವನ್ನೇ ವ್ಯಯಿಸುವುದಾಗಿ ಹೇಳಿದವರು ವಿಷ್ಣುಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್.

ಹೀಗೆ ಪೀಪಲ್ ಫಾರ್ ಪೀಪಲ್ ಸಂಸ್ಥೆ ನಡೆಸುತ್ತಿರುವ ಕೊಡಗಿಗಾಗಿ ರಂಗ ಸಪ್ತಾಹ ಕಾರ್ಯಕ್ರಮದಲ್ಲಿ ಕೊಡಗಿನ ಜನರಿಗೆ ಮಿಡಿಯುತ್ತಿರುವ ಹೃದಯಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಐದು ಮಕ್ಕಳನ್ನು ದತ್ತು ತೆಗೆದುಕೊಂಡು ವಿದ್ಯಾಭ್ಯಾಸ

ಐದು ಮಕ್ಕಳನ್ನು ದತ್ತು ತೆಗೆದುಕೊಂಡು ವಿದ್ಯಾಭ್ಯಾಸ

ರಂಗ ಸಪ್ತಾಹದ 4ನೇ ದಿನದಂದು ಸಮಾರಂಭದಲ್ಲಿ ಹಾಜರಿದ್ದ ಕಾಂಗ್ರೆಸ್ ಮುಖಂಡರಾದ ಮಿಲಿಂದ್ ಧರ್ಮಸೇನಾ ಅವರು ವೈಯಕ್ತಿವಾಗಿ ಐದು ಮಕ್ಕಳನ್ನು ದತ್ತು ತೆಗೆದುಕೊಂಡು ವಿದ್ಯಾಭ್ಯಾಸ ಕೊಡಿಸುವುದಾಗಿ ಹೇಳಿದರು. ಜೀವವೊಂದನ್ನು ಬಿಟ್ಚು ಉಳಿದೆಲ್ಲವನ್ನೂ ಕಳೆದುಕೊಂಡಿದ್ದೇವೆ ಎಂದು ಕೊಡಗಿನ ನಿರಾಶ್ರಿತರಾದ ಆ್ಯಂಟೋನಿ ಹೇಳುತ್ತಿದ್ದಂತೆ ಅಲ್ಲಿದ್ದವರ ಕಣ್ಣಾಲಿಗಳು ತುಂಬಿ ಬಂದಿದ್ದವು.

ವಿದ್ಯಾಭ್ಯಾಸದ ಹೊಣೆಯನ್ನು ವಹಿಸಿಕೊಳ್ಳುತ್ತೇನೆ

ವಿದ್ಯಾಭ್ಯಾಸದ ಹೊಣೆಯನ್ನು ವಹಿಸಿಕೊಳ್ಳುತ್ತೇನೆ

ಸಮಾರಂಭದಲ್ಲಿ ಹಾಜರಿದ್ದ ಚಲನಚಿತ್ರ ನಟರಾದ ವಿಜಯ ರಾಘವೇಂದ್ರ, ಅನಿರುದ್ಧ್ ಅವರು ಕೊಡಗಿಗೆ ಅಗತ್ಯವಿರುವ ಸಹಕಾರವನ್ನು ನೀಡುವುದಾಗಿ ಹೇಳಿದರು. ಖ್ಯಾತ ಚಿತ್ರ ಸಾಹಿತಿ ಡಾ.ನಾಗೇಂದ್ರಪ್ರಸಾದ್ ಅವರು ಕೊಡಗಿನ ಕೆಲವು ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸದ ಹೊಣೆಯನ್ನು ವಹಿಸಿಕೊಳ್ಳುತ್ತೇನೆ ಎಂದರು.

ಶರೀಫ ನಾಟಕ ನೆರೆದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು

ಶರೀಫ ನಾಟಕ ನೆರೆದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು

ಜೆಡಿಎಸ್ ಮುಖಂಡರೂ ಹಾಗೂ ಶಿಕ್ಷಣ ತಜ್ಞರಾದ ರಾಘವೇಂದ್ರ ಅವರು ಒಂದು ಮಗುವನ್ನು ದತ್ತು ತೆಗೆದುಕೊಂಡು ವಿದ್ಯಾಭ್ಯಾಸವನ್ನು ಕೊಡಿಸುವುದಾಗಿ ಭರವಸೆ ನೀಡಿದರು. ವಿನುತಾ ವಿಶ್ವನಾಥ್ ನಿರೂಪಿಸಿದ ಕಾರ್ಯಕ್ರಮದಲ್ಲಿ, ಚಕ್ರವರ್ತಿ ಚಂದ್ರಚೂಡ್ ಪ್ರಸ್ತಾವನೆ ಸಲ್ಲಿಸಿದರು.

ಪ್ರದೀಪ್ ಮತ್ತು ಪ್ರವೀಣ್ ಸಹೋದರರಿಂದ ಅವತರಿಸು ಬಾ ಭಾವಗುಚ್ಛ ಕಾರ್ಯಕ್ರಮ ಕೇಳುಗರ ಮನಸೂರೆಗೊಂಡಿತು. ಮಂಜುನಾಥ್ ಬೆಳಕೆರೆ ರಚನೆಯ ರಾಜ್ ಗುರು ಹೊಸಕೋಟೆ ವಿನ್ಯಾಸ ಮತ್ತು ನಿರ್ದೇಶನದ ಶರೀಫ ನಾಟಕ ನೆರೆದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

English summary
People for People main and important motto also concern is to provide education and well being of around 719 deprived children of Kodagu. MP Shivarame Gowda gave assurance to adopt 10 Children and help Throw ball player Tashma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more