ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವೇಶ್ವರ ಬಸ್ ನಿಲ್ದಾಣ ಬಳಿ ಗಾಂಜಾ ವಶ, ಇಬ್ಬರು ವಶಕ್ಕೆ

|
Google Oneindia Kannada News

ಬೆಂಗಳೂರು, ಸೆ. 16: ಪೀಣ್ಯ ಪೊಲೀಸ್ ಠಾಣಾ ಸರಹದ್ದಿನ ಬಸವೇಶ್ವರ ಬಸ್ ನಿಲ್ದಾಣದ ಬಳಿ ಇಬ್ಬರು ಅಪರಿಚಿತ ಅಸಾಮಿಗಳು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಪೀಣ್ಯ ಪೊಲೀಸರಿಗೆ ಸುಳಿವು ಸಿಕ್ಕಿದೆ. ಖಚಿತ ವರ್ತಮಾನದ ಮೇರೆಗೆ ಮಫ್ತಿಯಲ್ಲಿ ತೆರಳಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಪೀಣ್ಯ ಪೊಲೀಸ್ ಠಾಣೆಯ ಪಿಎಸ್‍ಐ, ರೇವಣ್ಣ ಸಿದ್ದಪ್ಪ ಹೂಗಾರ್ ಮತ್ತು ಸಿಬ್ಬಂದಿಯವರುಗಳು ಗಸ್ತಿನಲ್ಲಿರುವಾಗ ಬೆಂಗಳೂರು ನಗರದ ಪೀಣ್ಯ ಪೊಲೀಸ್ ಠಾಣಾ ಸರಹದ್ದಿನ ಬಸವೇಶ್ವರ ಬಸ್ ನಿಲ್ದಾಣದ ಬಳಿ ಇಬ್ಬರು ಅಪರಿಚಿತ ಅಸಾಮಿಗಳು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಸುದ್ದಿ ಸಿಕ್ಕಿದೆ.

ಭಾರತದಲ್ಲಿ ಗಾಂಜಾ ಗಮ್ಮತ್ತು: ಅಳತೆ ಮೀರುತ್ತಿದೆ ಯುವಸಮೂಹಭಾರತದಲ್ಲಿ ಗಾಂಜಾ ಗಮ್ಮತ್ತು: ಅಳತೆ ಮೀರುತ್ತಿದೆ ಯುವಸಮೂಹ

ಖಚಿತ ವರ್ತಮಾನದ ಮೇರೆಗೆ ಪಿಎಸ್‍ಐ ಮತ್ತು ಸಿಬ್ಬಂದಿಯವರುಗಳು ಮಾರುವೇಷದಲ್ಲಿ ಸದರಿ ಸ್ಥಳಕ್ಕೆ ಹೋಗಿ ಗಾಂಜಾವನ್ನು ಖರೀದಿಸುವ ಉದ್ದೇಶದಿಂದ ಕೇಳಿದಾಗ, ಗಾಂಜಾ ಎಂಬ ಮಾದಕ ವಸ್ತುವನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದ ಆರೋಪಿಗಳು ಮಾರಾಟಕ್ಕೆ ಮುಂದಾದಾಗ ಮಾಲು ಸಮೇತ ಬಂಧಿಸಿದ್ದಾರೆ.

Peenya Police Arrested Two And Seized 2.3 Kg Ganja

ಆರೋಪಿಗಳನ್ನು ತಿರುವಣ್ಣಾಮಲೈ ಮೂಲದ ಬೆಂಗಳೂರು ನಗರದ ಎಂಎಸ್ ಪಾಳ್ಯದ ನಿವಾಸಿ ಸಂತೋಷ್ (22), ಬೆಂಗಳೂರಿನ ನೆಲಗದರನಹಳ್ಳಿ ನಿವಾಸಿ ಮಂಜುನಾಥ್ (24) ಎಂದು ಗುರುತಿಸಲಾಗಿದೆ. ಇವರ ವಶದಿಂದ 2.3 ಕೆ.ಜಿ. ತೂಕದ ಗಾಂಜಾ ಮಾದಕ ವಸ್ತು ಮತ್ತು 1,000/- ರೂ. ನಗದು ವಶಪಡಿಸಿಕೊಳ್ಳುವಲ್ಲಿ ಪೀಣ್ಯ ಪೊಲೀಸರು ಯಶಸ್ವಿಯಾಗಿರುತ್ತಾರೆ.

ವೈರಲ್ ವಿಡಿಯೋ: ಡ್ರೋನ್ ಮೂಲಕ ಗಾಂಜಾ ಡೆಲಿವರಿ..! ವೈರಲ್ ವಿಡಿಯೋ: ಡ್ರೋನ್ ಮೂಲಕ ಗಾಂಜಾ ಡೆಲಿವರಿ..!

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕೋಲಾರ ಜಿಲ್ಲೆ ಮಾಲೂರಿನ ಟಿವಿಎಸ್ ಫ್ಯಾಕ್ಟರಿ ಬಳಿ ಮೃತ್ಯುಂಜಯ ಎಂಬುವವನಿಂದ ತಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗಿ ತಿಳಿಸಿರುತ್ತಾರೆ. ಆರೋಪಿ ಸಂತೋಷ್ ಮತ್ತು ಮಂಜುನಾಥ್ ಎಂಬುವರುಗಳು ಕೊರೊನಾದಿಂದ ಕೆಲಸವಿಲ್ಲದಿದ್ದರಿಂದ ಹಣಕ್ಕಾಗಿ ಈ ಕೃತ್ಯವೆಸುತ್ತಿರುವುದಾಗಿ ತಿಳಿಸಿರುತ್ತಾರೆ.

ಮತ್ತೊಬ್ಬ ಆರೋಪಿ ಮೃತ್ಯುಂಜಯ ರವರ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿ ಈತನು ಚಾಳಿಬಿದ್ದ ಅಪರಾಧಿಯಾಗಿದ್ದು, ಈತನ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ 2017ನೇ ಸಾಲಿನಲ್ಲಿ ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಜೈಲಿ ಶಿಕ್ಷೆ ಅನುಭವಿಸಿ ಹೊರಬಂದು ಸಂತೋಷ್ ಮತ್ತು ಮಂಜುನಾಥ ರವರಿಗೆ ಸುಲಭವಾಗಿ ಹಣ ಮಾಡುವ ಆಸೆ ತೋರಿಸಿ, ಈ ಕೃತ್ಯ ಮಾಡಿಸುತ್ತಿರುವುದಾಗಿ ತಿಳಿಸಿರುತ್ತಾನೆ.

ಡ್ರಗ್ಸ್ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತೆ, ನಿಯಮಗಳೇನು? ಡ್ರಗ್ಸ್ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತೆ, ನಿಯಮಗಳೇನು?

Recommended Video

Corona ಸೋಂಕಿನ ಅನುಭವ ಹಂಚಿಕೊಂಡ Siddramaiah | Oneindia Kannada

ಈ ಪ್ರಕರಣದಲ್ಲಿ ಎನ್.ಟಿ. ಶ್ರೀನಿವಾಸರೆಡ್ಡಿ, ಯಶವಂತಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಮುದ್ದರಾಜ್.ವೈ, ಪೊಲೀಸ್ ಇನ್ಸ್ ಪೆಕ್ಟರ್, ಪೀಣ್ಯ ಪೋಲಿಸ್ ಠಾಣೆ ಮತ್ತು ಪೊಲೀಸ್ ಸಬ ಇನ್ಸ್ ಪೆಕ್ಟರ್ ರಘುಪ್ರಸಾದ್ ಎನ್. ಇಬ್ರಾಹಿಂ, ರೇವಣಸಿದ್ದಪ್ಪ ಹೂಗಾರ್, ಭಾನು ಪ್ರಕಾಶ್ ಹಾಗೂ ಸಿಬ್ಬಂದಿಯವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

English summary
Peenya Police arrested two and seized 2.3 KG Ganja near Basaveshwar Bus stop, Bengaluru. Accused Santosh is rowdy sheeter said Bengaluru police
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X