ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕದ್ದು ನೋಡಿದ, ಜೈಲು ಸೇರಿದ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 18: ಮಾಲ್‌ಗಳು, ಅಂಗಡಿಗಳಲ್ಲಿ ಡ್ರೆಸ್ಸಿಂಗ್‌ ರೂಮ್ಗೆ ತೆರಳುವ ಮುನ್ನ ಎಚ್ಚರವಿರಲಿ. ಸುತ್ತಲೂ ಒಮ್ಮೆ ದೃಷ್ಟಿಹಾಯಿಸುವುದು ಒಳಿತು. ಯಾಕೆಂದರೆ ಬನ್ನೇರುಘಟ್ಟ ಕ್ರೀಡಾ ಸಾಮಗ್ರಿ ಮಾರಾಟ ಮಳಿಗೆಯ ಡ್ರೆಸ್ಸಿಂಗ್‌ ರೂಮಿನ ಕಿಂಡಿಯಲ್ಲಿ ಇಣುಕಿದ ವ್ಯಕ್ತಿಯೊಬ್ಬನನ್ನು ಪೊಲೀಸರ ಕೈಗೆ ಒಪ್ಪಿಸಿರುವ ಘಟನೆಯೊಂದು ನಡೆದಿದೆ.

ಕ್ರೀಡಾ ಸಾಮಗ್ರಿ ಮಾರಾಟ ಮಳಿಯಲ್ಲಿ ಡ್ರೆಸ್ಸಿಂಗ್‌ ರೂಂನ ಕಿಂಡಿಯಲ್ಲಿ ಇಣುಕಿದ ಮೆಕ್ಯಾನಿಕ್‌ ಒಬ್ಬ ವೈದ್ಯೆ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು ಇದೀಗ ಜೈಲು ಪಾಲಾಗಿದ್ದಾನೆ. ಸ್ವಾಂತಂತ್ರ್ಯ ದಿನಾಚರಣೆ ದಿನ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮಕ್ಕಳ ಅಶ್ಲೀಲ ಚಿತ್ರ ಸಂಗ್ರಹಿಸಿದ ಭಾರತೀಯ ವ್ಯಕ್ತಿಗೆ ಅಮೆರಿಕದಲ್ಲಿ 4 ವರ್ಷ ಜೈಲುಮಕ್ಕಳ ಅಶ್ಲೀಲ ಚಿತ್ರ ಸಂಗ್ರಹಿಸಿದ ಭಾರತೀಯ ವ್ಯಕ್ತಿಗೆ ಅಮೆರಿಕದಲ್ಲಿ 4 ವರ್ಷ ಜೈಲು

ದೊಡ್ಡಕಮ್ಮನಹಳ್ಳಿ ನಿವಾಸಿ ಶಿವಕುಮಾರ್‌(26)ಆರೋಪಿ. ಈತ ವೃತ್ತಿಯಲ್ಲಿ ಮೆಕ್ಯಾನಿಕ್‌, ಬಟ್ಟೆ ಬದಲಾಯಿಸುತ್ತಿದ್ದ ರೂಪಿಗೆ ಹೊಂದಿಕೊಂಡಿರುವ ಪಕ್ಕದ ರೂಮಿನಿಂದ ಇಣುಕಿದ್ದ ಎಂದು ವೈದ್ಯೆ ತಿಳಿಸಿದ್ದಾರೆ.

Peeer sent to behind the bar who peeped in sports shop

ಆದರೆ ಆರೋಪಿ ವೈದ್ಯೆ ಇದ್ದ ರೂಮಿನ ಬಾಗಿಲು ಮುಚ್ಚಿರಲಿಲ್ಲ ಆಕಸ್ಮಿಕವಾಗಿ ಅವರು ಬಟ್ಟೆ ಬದಲಾಯಿಸುತ್ತಿರುವುದು ನನ್ನ ಕಣ್ಣಿಗೆ ಬಿತ್ತು ಎಂದು ಆರೋಪಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಆ.15ರಂದು ರಾತ್ರಿ 8.50ರ ಸುಂಆರಿಗೆ ವೈದ್ಯೆ ಡ್ರೆಸ್ಸಿಂಗ್‌ ವಿಭಾಗಕ್ಕೆ ತೆರಳಿದ್ದರು.

ಛಿ, ಇದೆಂಥ ವಿಕೃತ ಮನಸ್ಸು? 'ಒನ್ ಇಂಡಿಯಾ' ಬಯಲಿಗೆಳೆದ ಸತ್ಯಕತೆ!ಛಿ, ಇದೆಂಥ ವಿಕೃತ ಮನಸ್ಸು? 'ಒನ್ ಇಂಡಿಯಾ' ಬಯಲಿಗೆಳೆದ ಸತ್ಯಕತೆ!

ಆ ಕೊಠಡಿಗೆ ಹೊಂದಿಕೊಂಡೇ ಇದ್ದ ಪಕ್ಕದ ಕೊಠಡಿಯ ನೆಲಕ್ಕೆ ತಲೆ ಒರಗಿಸಿ ಯಾರೋ ಇಣುಕಿ ನೋಡಿದಂತೆ ಕಾಣಿಸಿತು, ಮೊದಲಿಗೆ ಇಲಿ ಎಂದು ತಿಳಿದಿದ್ದೆ ಬಳಿಕ ಯಾರದ್ದೋ ನೆರಳಿರಬೇಕು ಅಂದುಕೊಂಡೆ ಸುಮ್ಮನಾದೆ ಕೆಲವು ಸಮಯದ ಬಳಿಕ ಅದೇ ಮತ್ತೆ ಅದೇ ರೀತಿ ಕಾಣಿಸಿದಾಗ ಬಟ್ಟೆ ಬದಲಿಸಿಕೊಂಡು ಹೊರಗೆ ಬಂದು ನೋಡಿದೆ ಆಗ ಆತ ಸಿಕ್ಕಿಬಿದ್ದಿದ್ದಾನೆ ಎಂದು ವೈದ್ಯೆ ಮಾಹಿತಿ ನೀಡಿದ್ದಾರೆ.

English summary
A doctor who complained about a peeper, Shivakumar, mechanic by profession has been sent to Parappana Agrahara jail who peeped in a sports shop dressing room on August 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X