ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಘಾತದಲ್ಲಿ ನವಿಲು ಸಾವು: ಮುಂದೇನಾಯ್ತು ನೋಡಿ

By Nayana
|
Google Oneindia Kannada News

ಬೆಂಗಳೂರು, ಜು.4: ನಗರದ ರಸ್ತೆಯಲ್ಲಿ ಮನುಷ್ಯರು ಅಪಘಾತಕ್ಕೀಡಾಗುವುದು ಸರ್ವೇ ಸಾಮಾನ್ಯ, ಆದರೆ ಬುಧವಾರ ಸಂಭವಿಸಿದ ಅಪಘಾತವೊಂದು ಎಲ್ಲಾ ಅಪಘಾತಗಳಂತೆ ಇರಲಿಲ್ಲ. ಪೀಣ್ಯ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರಪಕ್ಷಿ ನವಿಲೊಂದು ಆಕಸ್ಮಿಕವಾಗಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿತು, ತಕ್ಷಣ ಮನುಷ್ಯರೇ ಉಳಿಯುವುದು ಕಷ್ಟ ಇನ್ನು ಪಕ್ಷಿ ಉಳಿದೀತೆ.

ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದೇ ಬಿಟ್ಟಿತು, ವಾಹನ ರಭಸಕ್ಕೆ ನವಿಲು ಪ್ರಾಣ ಬಿಟ್ಟಿತು. ಇಷ್ಟೇ ಆಗಿದ್ದರೆ ನವಿಲು ಸತ್ತಿರುವುದು ಯಾರ ಗಮನಕ್ಕೂ ಬರಲಿಲ್ಲ, ಇದನ್ನು ಗಮನಿಸಿದ ಸಾರ್ವಜನಿಕರು ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿಗಳು ಸಾವಿನ ರಹದಾರಿ, ವರ್ಷಕ್ಕೆ 3800 ಬಲಿ ರಾಷ್ಟ್ರೀಯ ಹೆದ್ದಾರಿಗಳು ಸಾವಿನ ರಹದಾರಿ, ವರ್ಷಕ್ಕೆ 3800 ಬಲಿ

ಸಂಚಾರ ಪೊಲೀಸರು ನವಿಲು ಸತ್ತಿದ್ದನ್ನು ಗಮನಿಸಿ ಅದರ ಮೃತ ದೇಹವನ್ನು ಬೇರೆಡೆಗೆ ಸಾಗಿಸಿದರು.ಅದಾದ ಬಳಿಕ ಇಂತಹ ಘಟನೆಗಳು ಮತ್ತೆ ಮರುಕಳಿಸದಿರಲೆಂದು ಎಚ್ಚರಿಕೆ ನೀಡಲು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿದ್ದಾರೆ.

Peacock dies in highway near Peeny: You know what happened next?

ಜೋಕನ್ನೆಲ್ಲ ಕೇಳಿ ನವಿಲುಗಳು ಅಳಲು ಪ್ರಾರಂಭಿಸಿದರೆ! ಜೋಕನ್ನೆಲ್ಲ ಕೇಳಿ ನವಿಲುಗಳು ಅಳಲು ಪ್ರಾರಂಭಿಸಿದರೆ!

ಪ್ರಕರಣ ದಾಖಲಿಸುವುದರಿಂದ ಪ್ರಾಣ ಕಳೆದುಕೊಂಡ ನವಿಲು ಮತ್ತೆ ಬಾರದು ಆದರೆ ರಸ್ತೆಗಳಲ್ಲೂ ಪ್ರಾಣಿಪಕ್ಷಿಗಳನ್ನು ದಯೆಯಿಂದ ಕಾಣಬೇಕು ಎಂಬ ಸಂದೇಶ ಸಾರಲು ಪೀಣ್ಯ ಸಂಚಾರಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ. ರಸ್ತೆಯ ಮೇಲೆ ನುಗ್ಗುವ ಮನುಷ್ಯ ಪ್ರಾಣಿ, ಪಕ್ಷಿಗಳ ಬಗೆಗೆ ಒಂದಿಷ್ಟು ದಯೆ ತೋರಲೆಂಬುದು ಪೊಲೀಸರ ಕಾಳಜಿಯಾಗಿದೆ. ಪೊಲೀಸರ ಈ ಕ್ರಮ ಪ್ರಾಣಿಪ್ರಿಯರ ಪ್ರಶಂಸೆಗೆ ಪಾತ್ರವಾಗಿದೆ.

English summary
Its so common that in Bangalore people hurt and even dies in road accidents everyday. But on Wednesday one life was lost in the accident near Peenya. You know who is that? Read this story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X