ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸೇರಿ ರಾಜ್ಯಾದ್ಯಂತ ಬಂದ್ ಬಹುತೇಕ ಯಶಸ್ವಿ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ಕಾಂಗ್ರೆಸ್ ಸೇರಿದಂತೆ ಮಿತ್ರ ಪಕ್ಷಗಳು ಸೇರಿ ಸೋಮವಾರ ಕರೆ ನೀಡಿದ್ದ ಬಂದ್ ಗೆ ಕರ್ನಾಟಕಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹೊರತುಪಡಿಸಿ ಉಳಿದೆಲ್ಲಾ ಸಾರಿಗೆ ಸೇವೆಗಳು ಸ್ಥಗಿತಗೊಂಡಿದ್ದವು.

ಕೆಎಸ್ ಆರ್ ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ನೈಋತ್ಯ ಸಾರಿಗೆ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ತಮ್ಮ ಸೇವೆಯನ್ನು ಸಂಜೆ 5ರವರೆಗೆ ಸ್ಥಗಿತಗೊಳಿಸಿದ್ದವು. ಸಂಜೆಯ ನಂತರ ಬಸ್ ಸಂಚಾರ ಯಥಾ ಸ್ಥಿತಿಗೆ ಮರಳಿತು. ಬೆಂಗಳೂರಿನಲ್ಲಿ ಓಲಾ, ಊಬರ್ ಸೇರಿದಂತೆ ಅಪ್ಲಿಕೇಷನ್ ಆಧಾರಿತ ಎಲ್ಲಾ ಕ್ಯಾಬ್ ಸೇವೆಗಳು ಬೆಳಗ್ಗೆಯಿಂದಲೇ ಸ್ಥಗಿತಗೊಂಡಿದ್ದವು.

ಭಾರತ್ ಬಂದ್ LIVE: ಬೆಂಗಳೂರಿನಲ್ಲಿ ಬಸ್ ಸಂಚಾರ ಆರಂಭ, ಸಹಜ ಸ್ಥಿತಿಯತ್ತ ರಾಜಧಾನಿಭಾರತ್ ಬಂದ್ LIVE: ಬೆಂಗಳೂರಿನಲ್ಲಿ ಬಸ್ ಸಂಚಾರ ಆರಂಭ, ಸಹಜ ಸ್ಥಿತಿಯತ್ತ ರಾಜಧಾನಿ

ಇನ್ನೂ ಆಟೋ ರಿಕ್ಷಾಗಳು ಸಂಚರಿಸುತ್ತಿದ್ದವು. ವಿಧಾನಸೌಧ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳು ತೆರೆದಿದ್ದರೂ ನೌಕರರ ಸಂಖ್ಯೆ ವಿರಳವಾಗಿತ್ತು. ಖಾಸಗಿ ಸಂಸ್ಥೆಗಳಿಗೆ ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದರಿಂದ ನೌಕರರ ಸಂಖ್ಯೆ ಕಡಿಮೆ ಇತ್ತು. ಕೆಲವು ಹೋಟೆಲ್ ಗಳು ಮಾತ್ರ ತೆರೆದಿದ್ದವು.

Peaceful and successful bandh in Bengaluru opposing fuel price hike

ಬಿಎಂಟಿಸಿ, ಕೆಎಸ್ ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್ ಟಿಸಿ, ಎನ್‌ಇಕೆಆರ್ ಟಿಸಿ ಗಳು ಬೆಂಬಲ ನೀಡಿದ್ದವು. ಓಲಾ, ಟ್ಯಾಕ್ಸಿ ಫಾರ್ ಶೋರ್, ಊಬರ್ ಟ್ಯಾಕ್ಸಿ ಅಧ್ಯಕ್ಷ ತನ್ವೀರ್ ಪಾಷಾ ಮಾತನಾಡಿ, ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ನಾವೇ ಪ್ರತಿಭಟನೆ ಮಾಡಲು ನಿರ್ದರಿಸಿದ್ದೆವು.ಹಾಗಾಗಿ ಸೋಮವಾರ ನಡೆದ ಬಂದ್ ಗೆ ಕಾಂಗ್ರೆಸ್ ನೊಂದಿಗೆ ಕೈಜೋಡಿಸಿರುವುದಾಗಿ ತಿಳಿಸಿದರು.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ತಟ್ಟಲಿಲ್ಲ ಭಾರತ್ ಬಂದ್ ಬಿಸಿ!ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ತಟ್ಟಲಿಲ್ಲ ಭಾರತ್ ಬಂದ್ ಬಿಸಿ!

ಆಟೋ ರಿಕ್ಷಾಗಳು ಹಾಗೂ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿಗಳು ನಗರದಲ್ಲಿ ಕಡಿಮೆ ಇದೆ. ಭಾನುವಾರವೇ ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಇನ್ನು ಆಟೋವನ್ನು ಗಮನಿಸುವುದಾದರೆ ಸಾಕಷ್ಟು ಕಡೆಗಳಲ್ಲಿ ಆಟೋಗಳು ಎಂದಿನಂತೆ ಸಂಚರಿಸಿದೆ.

ಭಾರತ್ ಬಂದ್: ಕರಾವಳಿಯಲ್ಲಿ ತಟ್ಟಿದ ಪ್ರತಿಭಟನೆಯ ಬಿಸಿ ಭಾರತ್ ಬಂದ್: ಕರಾವಳಿಯಲ್ಲಿ ತಟ್ಟಿದ ಪ್ರತಿಭಟನೆಯ ಬಿಸಿ

ಬಂದ್ ಹಿನ್ನೆಲೆಯಲ್ಲಿ ನಾಲ್ಕು ಕೆಎಸ್ ಆರ್ ಟಿಸಿ ನಿಗಮಗಳಿಗೆ ನಷ್ಟ ಉಂಟಾಗಿದೆ. ಕೆಎಸ್ ಆರ್ ಟಿಸಿ ಗೆ 8.50 ಕೋಟಿ, ಬಿಎಂಟಿಸಿಗೆ 4.50 ಕೋಟಿ ರೂ. ನಷ್ಟವಾಗಿದೆ. ಒಂದು ದಿನಕ್ಕೆ ಸಾರಿಗೆ ನಿಗಮಗಳಿಗೆ 21.5ರಿಂದ 22 ಕೋಟಿಯಷ್ಟು ನಷ್ಟ ಉಂಟಾಗಿದೆ. ರಾಮನಗರ, ದಾವಣಗೆರೆ, ಚಾಮರಾಜನಗರ, ಕೋಲಾರ, ಕೆಜಿಎಫ್ ಬಸ್‌ ನಿಲ್ದಾಣದಿಂದ ಕೂಡ ಬಸ್ ಸಂಚಾರ ಆರಂಭವಾಗಿದೆ.

English summary
Except namma metro services BMTC, KSRTC and other public transportation was hit following Bharat bundh called by Congress and alliance parties on Monday in Karnataka. Meanwhile train service was uninterrupted almost in the state as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X