ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಂತಿ ಸಂದೇಶ ಸಾರಲಿದೆ Peace auto

|
Google Oneindia Kannada News

Peace auto
ಬೆಂಗಳೂರು, ಅ.2 : ಆಟೋ ಚಾಲಕರು ಕರೆದ ಕಡೆ ಬರೋಲ್ಲ, ಮೀಟರ್ ಮೇಲೆ ಹೆಚ್ಚಿನ ಹಣ ಕೇಳುತ್ತಾರೆ ಮುಂತಾದ ಆರೋಪಗಳು ಸಹಜ. ಇದರಿಂದಾಗಿಯೇ ಪ್ರಯಾಣಿಕ ಮತ್ತು ಆಟೋ ಡ್ರೈವರ್ ನಡುವೆ ಜಟಾಪಟಿ ನಡೆಯುತ್ತದೆ. ಆದರೆ, ಇದಕ್ಕೆ ಬ್ರೇಕ್ ಹಾಕಲು ಸ್ವಯಂ ಸೇವಾ ಸಂಸ್ಥೆಯೊಂದು ಸಿದ್ಧವಾಗಿದೆ.

ವಲ್ಡ್ ಪೀಸ್ ಕೀಪರ್ಸ್ ಎಂಬ ಸ್ವಯಂ ಸೇವಾ ಸಂಸ್ಥೆಯೊಂದು ಗಾಂಧಿ ಜಯಂತಿಯಂದು ಆಟೋ ಚಾಲಕರು ಮತ್ತು ಪ್ರಯಾಣಕರ ನಡುವಿನ ಗುದ್ದಾಟಕ್ಕೆ ತೆರೆ ಎಳೆದು, ಬೆಂಗಳೂರನ್ನು ಶಾಂತಿಯ ನಗರವಾಗಿ ಪರಿವರ್ತಿಸಲು ಸಿದ್ಧವಾಗಿದೆ.

ವಿಶ್ವಶಾಂತಿ ಸಾರಲು peace auto ಎಂಬ ಅಭಿಯಾನವನ್ನು ಈ ಸ್ವಯಂಸೇವಾ ಸಂಸ್ಥೆ ಕೋರಮಂಗಲದಲ್ಲಿ ಪ್ರಾರಂಭಿಸಿದೆ. ಗಾಂಧಿ ಜಯಂತಿಯಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಏನಿದು peace auto : ಆಟೋ ಚಾಲಕರನ್ನು ಸೇರಿಸಿಕೊಂಡು ಮಾಡಿಕೊಂಡಿರುವ ಅಭಿಯಾನಕ್ಕೆ peace auto ಎಂದು ಹೆಸರಿಡಲಾಗಿದೆ. ಕೋರಮಂಗಲದಲ್ಲಿ ಈ ಅಭಿಯಾನ ಪ್ರಾರಂಭವಾಗಲಿದೆ.

ಈ ಅಭಿಯಾನದಲ್ಲಿ ಪಾಲ್ಗೊಂಡ ಆಟೋ ಚಾಲಕರು ಹಾಫ್ ಕೋಟ್ ಧರಿಸಿರುತ್ತಾರೆ. ಪ್ರಯಾಣಿಕರನ್ನು ನಗುಮೊಗದಿಂದ ಸ್ವಾಗತಿಸುತ್ತಾರೆ. ಆಟೋ ಮೇಲೆ peace auto ಎಂಬ ಬರಹವಿರುತ್ತದೆ. ಇದನ್ನು ನೋಡಿ ನೀವು ಇದು ಶಾಂತಿ ಸಂದೇಶ ಸಾರುವ ಆಟೋ ಎಂದು ತಿಳಿಯಬಹುದು.

ಆಟೋದಲ್ಲಿ ಪ್ರಯಾಣಿಕರು ದೇವರು ಎಂಬ ಬರಹ ಅವರನ್ನು ನಿಮ್ಮನ್ನು ಸ್ವಾಗತಿಸುತ್ತದೆ. ಈ ಆಟೋದಲ್ಲಿ ಪ್ರಯಾಣಿಕರೊಂದಿಗೆ ಜಗಳವಾಡುವುದಿಲ್ಲ. ಮೀಟರ್ ಮೇಲೆ ಡಬಲ್ ಚಾರ್ಜ್ ವಸೂಲಿ ಮಾಡುವುದಿಲ್ಲ.

ಆಟೋ ಚಾಲಕರನ್ನು ಈ ಅಭಿಯಾನಕ್ಕೆ ಸೇರಿಸಿಕೊಂಡು ನಗರದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಮುಂದಾಗಿದೆ. ಒಮ್ಮೆ peace autoದಲ್ಲಿ ಪ್ರಯಾಣಿಸಿ ನಂತರ ನಿಮ್ಮ ಅನುಭವ ಹೇಳಿ.

English summary
To spread the message of peace, The World Peace keepers Movement have chosen the ubiquitous Auto rickshaw drivers in Bangalore. A selected few auto drivers from across the city will spread the message of peace within their fraternity as well as the passengers who catch the auto to travel to different destinations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X