ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈನ್ಯ ಬಲಿಷ್ಠವಾಗಬೇಕಿದ್ದರೆ ಹೆಚ್ಚು ತೆರಿಗೆ ಕಟ್ಟಬೇಕು : ಎನ್ಆರ್‌ಎನ್

|
Google Oneindia Kannada News

ಬೆಂಗಳೂರು, ಮಾರ್ಚ್ 07 : ನಮ್ಮ ಸೈನಿಕರಿಗೆ ಉತ್ತಮ ಅಸ್ತ್ರ, ಹೆಚ್ಚಿ ಸಂಬಳ, ಪೌಷ್ಟಿಕಾಂಶವುಳ್ಳ ಆಹಾರ ಸಿಗಬೇಕಿದ್ದರೆ ಮತ್ತು ಅವರು ತಮ್ಮ ಕುಟುಂಬದ ಉತ್ತಮ ಆರೈಕೆ ಮಾಡಬೇಕಿದ್ದರೆ ನಾವು ನಾಗರಿಕರು ಹೆಚ್ಚಿನ ತೆರಿಗೆ ಕಟ್ಟಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್ ನಾರಾಯಣ ಮೂರ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಸೇನೆ ಎನ್‌ಕೌಂಟರ್‌ಗೆ ಹಂದ್ವಾರದಲ್ಲಿ ಓರ್ವ ಉಗ್ರ ಬಲಿ, ಮುಂದುವರೆದ ಶೋಧ ಸೇನೆ ಎನ್‌ಕೌಂಟರ್‌ಗೆ ಹಂದ್ವಾರದಲ್ಲಿ ಓರ್ವ ಉಗ್ರ ಬಲಿ, ಮುಂದುವರೆದ ಶೋಧ

ಈ ಮಾತನ್ನು ನಾನು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆದ ನಂತರ ಹೇಳುತ್ತಿಲ್ಲ, ಇದನ್ನು ನಾನು 2014ರಲ್ಲಿಯೂ ಹೇಳಿದ್ದೆ. ನಮ್ಮ ದೇಶ ಇನ್ನಷ್ಟು ಬಲಿಷ್ಠವಾಗಬೇಕಿದ್ದರೆ ದೇಶದ ಉದ್ಯಮ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ನಾರಾಯಣ ಮೂರ್ತಿ ಅವರು ಉಪದೇಶ ನೀಡಿದರು.

28 ವರ್ಷ ಸೇವೆ ಸಲ್ಲಿಸಿದ ಜಮಖಂಡಿ ಯೋಧನಿಗೆ ಗ್ರಾಮಸ್ಥರಿಂದ ಮೆರವಣಿಗೆ 28 ವರ್ಷ ಸೇವೆ ಸಲ್ಲಿಸಿದ ಜಮಖಂಡಿ ಯೋಧನಿಗೆ ಗ್ರಾಮಸ್ಥರಿಂದ ಮೆರವಣಿಗೆ

ಭಾರತಕ್ಕೆ ನೀಡಲಾಗಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ಅಮೆರಿಕ ಹಿಂತೆಗೆದುಕೊಂಡಿರುವುದರಿಂದ ಭಾರತ ಕಂಗೆಡಬಾರದು. ಈ ಪರಿಸ್ಥಿತಿಯ ಲಾಭ ಪಡೆದು ನಾವು ಪುಟೇದೇಳಬೇಕು, ಕಷ್ಟಪಟ್ಟು ದುಡಿದು ನಾವು ಇನ್ನಷ್ಟು ಬಲಿಷ್ಠರಾಗಬೇಕು ಎಂದು ನಾರಾಯಣ ಮೂರ್ತಿಯವರು ಸಲಹೆ ನೀಡಿದ್ದಾರೆ.

Pay more tax to make our soldiers strong : NR Narayana Murthy

ಭಾರತ ಇನ್ನಷ್ಟು ಕಷ್ಟಪಟ್ಟು ಮತ್ತು ಸ್ಮಾರ್ಟ್ ಆಗಿ ಕೆಲಸ ಮಾಡಬೇಕು. ನಾವು ಹೆಚ್ಚು ಶಿಸ್ತುಬದ್ಧರಾಗಿರಬೇಕು ಮತ್ತು ಸ್ಪರ್ಧಾತ್ಮಕವಾಗಿ ಕಾರ್ಯ ನಿರ್ವಹಿಸಬೇಕು. ನಾವು ಇನ್ನಷ್ಟು ಉತ್ತಮ ಸ್ಥಿತಿ ತಲುಪಲು ತುಡಿಯುತ್ತಿರಬೇಕೆ ವಿನಃ ಇತರರನ್ನು ದೂಷಿಸುತ್ತ ಕೂಡಬಾರದು ಎಂದು ನಾರಾಯಣ ಮೂರ್ತಿ ಅವರು ನುಡಿದರು.

ನಮ್ಮ ಸೇನೆ ಹೇಳಿದನ್ನೂ ನೀವು ನಂಬುವುದಿಲ್ಲವೇ? ಮೋದಿ ಪ್ರಶ್ನೆ ನಮ್ಮ ಸೇನೆ ಹೇಳಿದನ್ನೂ ನೀವು ನಂಬುವುದಿಲ್ಲವೇ? ಮೋದಿ ಪ್ರಶ್ನೆ

ಆದ್ಯತೆಯ ವಹಿವಾಟಿನ ಅಡಿಯಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ 5.6 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತೀಯ ವಸ್ತುಗಳ ಮೇಲಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ಅಮೆರಿಕ ವಾಪಸ್ ಪಡೆಯುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ. ಅಮೆರಿಕದ ವಿತ್ತೀಯ ಕೊರತೆ ನೀಗಿಸಲು ಡೊನಾಲ್ಡ್ ಟ್ರಂಪ್ ಈ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ.

English summary
NR Narayana Murthy, Infosys founder: Our industry should work hard to make ourselves stronger & pay more taxes so that our soldiers have better ammunition, better salaries, nutrition & they can take care of their families better, I said this in 2014 also, not after Pulwama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X