ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗಲು 30 ರೂ.

|
Google Oneindia Kannada News

ಬೆಂಗಳೂರು, ಆಗಸ್ಟ್ 14 : ಶೀಘ್ರದಲ್ಲಿಯೇ ವಿಮಾನ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ಬೆಂಗಳೂರಿನ ಮೆಜೆಸ್ಟಿಕ್‌ ರೈಲು ನಿಲ್ದಾಣದಿಂದ ರೈಲಿನಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲಿನಲ್ಲಿ ಸಂಚಾರ ನಡೆಸಬಹುದು. ಅದು ಸಹ ಕೇವಲ 30 ರೂ.ಗಳಿಗೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ರೈಲು ನಿಲ್ದಾಣದ ಕಾಮಗಾರಿ ಅಂತಿಮ ಹಂತದಲ್ಲಿದೆ. ಆಗಸ್ಟ್ ಅಂತ್ಯದ ವೇಳೆಗೆ ಕಾಮಗಾರ ಮುಗಿಯಲಿದ್ದು, ನೈಋತ್ಯ ರೈಲ್ವೆ ಹೊಸ ನಿಲ್ದಾಣಕ್ಕೆ ರೈಲು ಸಂಪರ್ಕ ಕಲ್ಪಿಸಲಿದೆ.

ಕೆಐಎಎಲ್ ರೈಲು ನಿಲ್ದಾಣ ಸಿದ್ಧ; ರೈಲು ಸಂಚಾರ ಯಾವಾಗ? ಕೆಐಎಎಲ್ ರೈಲು ನಿಲ್ದಾಣ ಸಿದ್ಧ; ರೈಲು ಸಂಚಾರ ಯಾವಾಗ?

ಪೀಕ್ ಹವರ್‌ನಲ್ಲಿ ಮೆಜೆಸ್ಟಿಕ್‌ನಿಂದ ದೇವನಹಳ್ಳಿಗೆ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಉಳಿದ ಸಮಯದಲ್ಲಿ ಈ ಮಾರ್ಗದಲ್ಲಿ ಸಂಚಾರ ನಡೆಸುವ ರೈಲುಗಳು ದೇವನಹಳ್ಳಿಯಲ್ಲಿ ನಿಲುಗಡೆಗೊಳ್ಳಲಿವೆ.

ಕೇರಳ ವಿಮಾನ ದುರಂತ; ಡಿಸಿ ಸೇರಿ 600 ಜನರಿಗೆ ಕ್ವಾರಂಟೈನ್ ಕೇರಳ ವಿಮಾನ ದುರಂತ; ಡಿಸಿ ಸೇರಿ 600 ಜನರಿಗೆ ಕ್ವಾರಂಟೈನ್

Pay Just 30 Rs to Travel KIA From Majestic

ಯಶವಂತಪುರ ಮಾರ್ಗವಾಗಿ ರೈಲು ವಿಮಾನ ನಿಲ್ದಾಣ ತಲುಪಲಿದ್ದು ಸುಮಾರು 30 ನಿಮಿಷದ ಪ್ರಯಾಣ ಇದಾಗಿದೆ. ಪ್ರಸ್ತುತ ಮೆಜೆಸ್ಟಿಕ್‌ನಿಂದ ವಾಯುವಜ್ರ ಬಸ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗಲು ಪ್ರಯಾಣಿಕರು 235 ರೂ. ಪಾವತಿ ಮಾಡಬೇಕಿದೆ.

ದೇವನಹಳ್ಳಿ ಟೋಲ್‌ ದರ ಹೆಚ್ಚಳ, ಯಾವ ವಾಹನಗಳಿಗೆ ಎಷ್ಟೆಷ್ಟು? ದೇವನಹಳ್ಳಿ ಟೋಲ್‌ ದರ ಹೆಚ್ಚಳ, ಯಾವ ವಾಹನಗಳಿಗೆ ಎಷ್ಟೆಷ್ಟು?

ಯಲಹಂಕ-ಕೋಲಾರ ನಡುವೆ ಸಂಚಾರ ನಡೆಸುವ 6 ರೈಲುಗಳು ಈ ಹೊಸ ನಿಲ್ದಾಣದಲ್ಲಿ ನಿಲ್ಲಲಿವೆ. ಯಲಹಂಕದಿಂದ ದೇವನಹಳ್ಳಿಗೆ 10 ರೂ. ದರದಲ್ಲಿ ಸಂಚಾರ ನಡೆಸಬಹುದಾಗಿದೆ. ಸಾಮಾನ್ಯ ರೈಲುಗಳ ಸಂಚಾರ ಆರಂಭವಾದ ಬಳಿಕ ದೇವನಹಳ್ಳಿ ನಿಲ್ದಾಣ ಸೇವೆಗೆ ಲಭ್ಯವಾಗಲಿದೆ.

ದೇವನಹಳ್ಳಿ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ 10 ನಿಮಿಷದ ಪ್ರಯಾಣವಾಗಿದೆ. ಇದಕ್ಕಾಗಿ ಕೆಐಎಲ್ ರೈಲು ನಿಲ್ದಾಣದಿಂದ ಫೀಡರ್ ಬಸ್ ಸೇವೆ ಆರಂಭಿಸಲಿದೆ. ಬಿಎಂಟಿಸಿ ಸಹ ರೈಲು ಮತ್ತು ವಿಮಾನ ನಿಲ್ದಾಣ ಸಂಪರ್ಕಿಸಲು ಬಸ್ ಸೇವೆ ಒದಗಿಸಲಿದೆ.

English summary
Railway station near Kempegowda International Airport will ready by the end of August. People can travel from Majestic to KIA in just 30 Rs. Now 235 Rs for a ticket of BMTC Vayu Vajra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X