ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳ ದುಪ್ಪಟ್ಟು, ಮತ್ತಷ್ಟು...

By Srinivasa
|
Google Oneindia Kannada News

ಬೆಂಗಳೂರು, ಆಗಸ್ಟ್ 13: ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳ ದುಪ್ಪಟ್ಟು ಮಾಡಿದ್ದಕ್ಕೆ ರಾಜ್ಯ ಪೌರಕಾರ್ಮಿಕರ, ಗುತ್ತಿಗೆ ಪೌರಕಾರ್ಮಿಕರ ಹಾಗೂ ಮೇಸ್ತ್ರಿಗಳ ಸಂಘ ಸಂತಸ ವ್ಯಕ್ತಪಡಿಸಿವೆ.

ಅಂದಹಾಗೆ ಸಂಬಳ ಎಷ್ಟಾಗಿದೆ ಗೊತ್ತಾ? ಮಹಾನಗರ ಪಾಲಿಕೆಗಳಲ್ಲಿ 7,730 ರು. ಪಡೆಯುತ್ತಿದ್ದವರಿಗೆ 14,040, ನಗರ ಪಾಲಿಕೆಗಳಲ್ಲಿ 6,953ರಿಂದ 13,650, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ 6,166ರಿಂದ 12,740 ರು. ಗೆ ಹೆಚ್ಚಳವಾಗಿದೆ.

ಇದೇ ಖುಷಿಯಲ್ಲಿ ಆಗಸ್ಟ್ 17ನೇ ತಾರೀಖು ಬೆಳಗ್ಗೆ 11ಕ್ಕೆ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ವಿಜಯೋತ್ಸವ ಆಚರಿಸುವುದಕ್ಕೆ ಕೂಡ ಸಂಘ ನಿರ್ಧರಿಸಿದೆ.

Pay hike

ವರ್ಷಕ್ಕೆ 500 ಲೈಬ್ರರಿ ಸುಧಾರಣೆ:
ರಾಜ್ಯದಲ್ಲಿ 1700+ ಗ್ರಂಥಾಲಯಗಳಿದ್ದು, ಆ ಪೈಕಿ ವರ್ಷಕ್ಕೆ 500ರಂತೆ ಗ್ರಂಥಾಲಯ ಸುಧಾರಣೆ ಮಾಡಲಾಗುವುದು ಅಂತ ಗ್ರಂಥಾಲಯ ಸಚಿವರು ಹೇಳಿದ್ದಾರೆ.

ಮಾಣೆಕ್ ಷಾ ಪರೇಡ್ ಮೈದಾನದ ಭದ್ರತೆ:
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಮಾಣೆಕ್ ಷಾ ಪರೇಡ್ ಮೈದಾನವನ್ನು ಸಿದ್ಧಗೊಳಿಸಲಾಗುತ್ತಿದೆ. ಈ ಸಲ ಭದ್ರತೆ ಹೆಚ್ಚಿಸಲಾಗಿದೆ. ಮೈದಾನ ಹಾಗೂ ಸುತ್ತ ಮುತ್ತ ಕಣ್ಣಿಡುವುದಕ್ಕೆ 40 ಸಿಸಿ ಟಿವಿ ಕ್ಯಾಮೆರಾ ಹಾಕುವುದಕ್ಕೆ ತೀರ್ಮಾನ ಮಾಡಿದ್ದೀವಿ ಎಂದು ಬೆಂಗಳೂರು ನಗರ ಕಮಿಷನರ್ ಎನ್.ಎಸ್.ಮೇಘರಿಕ್ ತಿಳಿಸಿದ್ದಾರೆ.

ರಾಜ್ಯದ ಐವರಿಗೆ ಯುವ ವಿಜ್ಞಾನಿ ಪ್ರಶಸ್ತಿ:
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ ಸಿ) ಐವರು ವಿಜ್ಞಾನಿಗಳು 'ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ'ಯ ಯುವ ವಿಜ್ಞಾನಿ ಪ್ರಶಸ್ತಿ ಪಡೆದಿದ್ದಾರೆ.

ಡಾ.ಪ್ರಬೀರ್ ಬಾರ್ ಪಂಡ, ಡಾ.ಸಾಯಿ ಶಿವ ಗೋರ್ಥಿ, ಡಾ.ಪ್ರವೀಣ್ ಕುಮಾರ್, ಡಾ.ಅನ್ಷು ಪಾಂಡೆ ಹಾಗೂ ಡಾ.ಚಂದನ್ ಸಹಾ ಪ್ರಶಸ್ತಿ ಪಡೆದವರು.

English summary
Two fold pay hike for civil workers welcomed by workers association. Aug 17, workers associations will celebrate decision at Bengaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X