ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಹೀಗೂ ಮಾಡಬಹುದು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 6: ಹಲವಾರು ತಿಂಗಳಿನಿಂದ ಮೆಟ್ರೋ ಪ್ರಯಾಣಿಕರ ಬೇಡಿಕೆ ಈಗ ಈಡೇರುವ ಕಾಲ ಬಂದಿದೆ.

ಇನ್ನುಮುಂದೆ ನಮ್ಮ ಮೆಟ್ರೋ ಪ್ರಯಾಣಿಕರು ತಮ್ಮ ಮೊಬೈಲ್ ಮೂಲಕವೇ ತಮ್ಮ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಹಸಿರು ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿಹಸಿರು ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ

ಇಷ್ಟು ದಿನ ಮೆಟ್ರೋದಲ್ಲಿ ಪ್ರಯಾಣಿಸಬೇಕಿದ್ದರೆ ಒಂದು ಟೋಕನ್ ತೆಗೆದುಕೊಳ್ಳಬೇಕಿತ್ತು ಇಲ್ಲವೇ ತಮ್ಮ ಸ್ಮಾರ್ಟ್ ಕಾರ್ಡ್‌ ಬಳಕೆ ಮಾಡಿ ತೆರಳಬೇಕಿತ್ತು. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸಹಾಯದಿಂದ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಕೊಳ್ಳಬಹುದಿತ್ತು.

Pay For Metro With Your Smart Phone

ಆದರೆ ಅದಕ್ಕೆ ಹೆಚ್ಚು ಸಮಯ ತಗುಲುತ್ತಿತ್ತು, ಕೆಲವೊಮ್ಮೆ ಯಂತ್ರ ಸರಿ ಇರುತ್ತಿರಲಿಲ್ಲ, ಇನ್ನೂ ಹಲವು ಬಾರಿ ನೂರಾರು ಮಂದಿ ಸರಿತಿಯಲ್ಲಿ ನಿಲ್ಲುತ್ತಿದ್ದರು, ಎಲ್ಲರಿಗೆ ಸೇರಿ ಒಂದೇ ಯಂತ್ರವಿರುತ್ತಿತ್ತು. ಇದೀಗ ಅದೆಲ್ಲಕ್ಕೂ ಪರಿಹಾರ ದೊರೆಯಲಿದೆ.

ಇದುವರೆಗೂ ಯಾವ ದೇಶದಲ್ಲಿಯೂ ಇಂತಹ ಒಂದು ಸೇವೆ ಇಲ್ಲ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಈ ಸೇವೆ ದೊರಿಕಿಸುತ್ತಿದೆ.ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಶೀಘ್ರವೇ ಇಂತಹದೊಂದು ವ್ಯವಸ್ಥೆ ಆರಂಭಿಸಲಿದೆ.

ಬೆಂಗಳೂರಿನವರೊಬ್ಬರು ಕೇಂದ್ರ ವಸತಿ ಸಚಿವಾಲಯಕ್ಕೆ ಆರ್‌ಟಿಐ ಮೂಲಕ ಮನವಿ ಮಾಡಿದ್ದರು. ಬೆಂಗಳೂರಿನಲ್ಲಿ ಮೆಟ್ರೋಗೆ ಸ್ಮಾರ್ಟ್ ಫೋನ್ ಮೂಲಕ ರೀಚಾರ್ಜ್ ಮಾಡುವ ಯಾವುದಾದರೂ ತಂತ್ರಜ್ಞಾನ ಇದೆಯೇ ಎಂದು ಕೇಳಿದ್ದರು.

ನ್ಯಾಷನಲ್ ಕಾಮನ್ ಮೊಬಿಲಿಟಿ ಯೋಜನೆಯಡಿಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

English summary
Several Metro commuters have been appealing to the government to make smartphone based payments available at the entry points of Metro stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X