ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ವರದಿ ಕೇಳದೆ ರೋಗಿಗೆ ಚಿಕಿತ್ಸೆ ನೀಡಲು ಸೂಚನೆ

|
Google Oneindia Kannada News

ಬೆಂಗಳೂರು, ಜುಲೈ 15 : ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯ ಪರೀಕ್ಷಾ ವರದಿ ಬಂದಿಲ್ಲದಿದ್ದರೂ ಆಸ್ಪತ್ರೆಗೆ ಕೂಡಲೇ ದಾಖಲು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಕೋವಿಡ್ ವರದಿ ಬರುವ ತನಕ ಕಾಯುತ್ತಿರುವುದರಿಂದ ಚಿಕಿತ್ಸೆ ಸಿಗುವುದು ತಡವಾಗುತ್ತಿದೆ.

Recommended Video

Facebook ತ್ಯಜಿಸಿ ಇಲ್ಲ ಸೇನೆಯಿಂದ ಹೊರನಡೆಯಿರಿ | Oneindia Kannada

ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಈ ಕುರಿತು 108 ಆರೋಗ್ಯ ಕವಚ ಅಂಬ್ಯುಲೆನ್ಸ್ ಸೇವೆಯ ನೋಡೆಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಅವರು ಸುತ್ತೋಲೆಯನ್ನು ಸಹ ಬಿಡುಗಡೆ ಮಾಡಿದ್ದಾರೆ.

ಕೋವಿಡ್ ಭೀತಿ; ಬೆಂಗಳೂರಲ್ಲಿ ಲಭ್ಯವಿರುವ ಅಂಬ್ಯುಲೆನ್ಸ್‌ಗಳ ಲೆಕ್ಕ ಕೋವಿಡ್ ಭೀತಿ; ಬೆಂಗಳೂರಲ್ಲಿ ಲಭ್ಯವಿರುವ ಅಂಬ್ಯುಲೆನ್ಸ್‌ಗಳ ಲೆಕ್ಕ

ಉಸಿರಾಟದ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ಕೋವಿಡ್ - 19 ಸೋಂಕಿತರು ಎಂದು ಪರಿಗಣಿಸಿ ಆಸ್ಪತ್ರೆಗೆ ದಾಖಲು ಮಾಡಬೇಕು. ಪರೀಕ್ಷೆಯ ವರದಿ ಬರುವ ತನಕ ಐಸೊಲೇಷನ್ ವಾರ್ಡ್‌ನಲ್ಲಿ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಖಾಸಗಿ ಆಸ್ಪತ್ರೆ ಮುಖ್ಯಸ್ಥರ ಸಭೆ ಸಫಲ: ಸರ್ಕಾರದ ಬೇಡಿಕೆ ಒಪ್ಪಿಗೆ ಖಾಸಗಿ ಆಸ್ಪತ್ರೆ ಮುಖ್ಯಸ್ಥರ ಸಭೆ ಸಫಲ: ಸರ್ಕಾರದ ಬೇಡಿಕೆ ಒಪ್ಪಿಗೆ

Patients Should Treat Immediately Health Department

ವ್ಯಕ್ತಿಗೆ ಕೋವಿಡ್ - 19 ಸೋಂಕು ದೃಢಪಟ್ಟಲ್ಲಿ ಕೋವಿಡ್ ವಾರ್ಡ್‌ಗೆ ಸ್ಥಳಾಂತರ ಮಾಡಬೇಕು. ಸೋಂಕು ಇಲ್ಲದಿದ್ದಲ್ಲಿ ಅಲ್ಲಿಯೇ ಚಿಕಿತ್ಸೆ ಮುಂದುವರೆಸಬೇಕು. ಇಂತಹ ಪ್ರಕರಣಗಳಲ್ಲಿ ಬಿಬಿಎಂಪಿ ಅಧಿಕಾರಿಗಳ ಪತ್ರ ಅಗತ್ಯ ಇರುವುದಿಲ್ಲ. ರೋಗಿಗಳ ಸಂಖ್ಯೆ ನೀಡದಿದ್ದರೂ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಲಾಗಿದೆ.

ಬೆಂಗಳೂರಲ್ಲಿ ಕೋವಿಡ್ ಭೀತಿ; ಸಹಾಯವಾಣಿ ಸಂಖ್ಯೆಗಳು ಬೆಂಗಳೂರಲ್ಲಿ ಕೋವಿಡ್ ಭೀತಿ; ಸಹಾಯವಾಣಿ ಸಂಖ್ಯೆಗಳು

ರೋಗಿಗಳು ಬಂದ ತಕ್ಷಣ ದಾಖಲು ಮಾಡಿಕೊಳ್ಳದ ಆಸ್ಪತ್ರೆಗಳ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಬೇಕು. ಕೋವಿಡ್ ಪರೀಕ್ಷೆ ವರದಿ ಬರುವ ತನಕ ಸರ್ಕಾರ ನಿಗದಿ ಮಾಡಿದ ದರದಲ್ಲಿಯೇ ಚಿಕಿತ್ಸೆ ನೀಡಬೇಕು ಎಂದು ತಿಳಿಸಲಾಗಿದೆ.

English summary
When patients come to the hospital they should be treated immediately. Hospital can treat without waiting for the BBMP letter or COVID report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X