ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಆಸ್ಪತ್ರೆಯ ಶೌಚಾಲಯದಲ್ಲಿ ರೋಗಿ ಆತ್ಮಹತ್ಯೆ, ಏನು ಕಾರಣ?

|
Google Oneindia Kannada News

ಬೆಂಗಳೂರು, ಜೂನ್ 29: ತನ್ನ ಕಾಯಿಲೆ ವಾಸಿಯಾಗುವುದಿಲ್ಲ ಎಂದು ತಿಳಿದು ಖಿನ್ನತೆಗೆ ಒಳಗಾಗಿ ರೋಗಿಯೊಬ್ಬ ಆಸ್ಪತ್ರೆ ಶೌಚಾಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ರಕ್ತ ಪರೀಕ್ಷೆ ಮಾಡಿಸಿದಾಗ ತನಗೆ ಗುಣವಾಗದ ಕಾಯಿಲೆ ಇದೆ ಎಂದು ತಿಳಿದ ಬಳಿಕ ವ್ಯಕ್ತಿಯೊಬ್ಬ ವಿಕ್ಟೋರಿಯಾ ಆಸ್ಪತ್ರೆ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೆಂಡತಿಯನ್ನು ಥಳಿಸಿ ಬಳಿಕ 15ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟ ಹೆಂಡತಿಯನ್ನು ಥಳಿಸಿ ಬಳಿಕ 15ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟ

ಬನ್ನೇರುಘಟ್ಟದ ನಿವಾಸಿ ರಾಘವೇಂದ್ರ ಆತ್ಮಹತ್ಯೆ ಮಾಡಿಕೊಂಡವರು. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ರಕ್ತ ಪರೀಕ್ಷೆ ವರದಿಯನ್ನು ಪಡೆಯಲು ಆಸ್ಪತ್ರೆಗೆ ಬಂದಿದ್ದರು. ವರದಿ ಕೈ ಸೇರಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Patient commits suicide at Hospital Toilet

ಅನಾರೋಗ್ಯದ ಕಾರಣಕ್ಕೆ ರಾಘವೇಂದ್ರ ಅವರು ವಾರದ ಹಿಂದೆ ಆಸ್ಪತ್ರೆಗೆ ಬಂದಿದ್ದರು. ಬಳಿಕ ವಿಕ್ಟೋರಿಯಾ ಆಸ್ಪತ್ರೆ ಟಿ ಬ್ಲಾಕ್‌ ಬಳಿ ಇರುವ ಶೌಚಾಲಯಕ್ಕೆ ತೆರಳಿ ನೇಣು ಹಾಕಿಕೊಂಡಿದ್ದಾರೆ. ಮಧ್ಯಾಹ್ನ ಈ ಘಟನೆ ನಡೆದಿದ್ದರೂ ರಾತ್ರಿಯ ವೇಳೆಗೆ ವಿಷಯ ಗೊತ್ತಾಗಿದೆ. ವಿವಿಪುರಂ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಅವರಿಗಿದ್ದ ಕಾಯಿಲೆ ಏನೆಮಬುದರ ಬಗ್ಗೆ ಮಾತ್ರ ಮಾಹಿತಿ ಲಭ್ಯವಾಗಿಲ್ಲ. ಆದರೆ ಒಂದೇ ಬಾರಿ ಪರೀಕ್ಷೆ ಮಾಡಿಸಿ, ಅದು ವಾಸಿಯಾಗುತ್ತಾ ಇಲ್ಲವೋ ಎಂಬುದರ ಬಗ್ಗೆ ಬೇರೆ ವೈದ್ಯರಿಂದ ಮಾಹಿತಿ ಪಡೆಯದೇ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

English summary
A patient committed suicide in Bengaluru's Victoria hospital Toilet on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X