ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈಟ್‌ಫೀಲ್ಡ್ ರೈಲು ನಿಲ್ದಾಣದ ವಾಕ್ ವೇ ಬಂದ್: ತೀವ್ರ ಆಕ್ಷೇಪ

By Nayana
|
Google Oneindia Kannada News

ಬೆಂಗಳೂರು, ಜೂನ್ 6: ವೈಟ್‌ ಫೀಲ್ಡ್‌ ರೈಲ್ವೆ ನಿಲ್ದಾಣ ಪ್ರವೇಶಿಸುವ ವಾಕ್‌ ವೇನಲ್ಲಿ ರೈಲ್ವೆ ಅಧಿಕಾರಿಗಳು ಹಠಾತ್ ಬಂದ್ ಮಾಡಿರುವುದರಿಂದ ನೂರಾರು ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಆದರೆ ಇದೀಗ ಬ್ರಿಡ್ಜ್‌ ತೆರೆದಿದ್ದರೂ ಅದು ಸಂಪೂರ್ಣವಾಗಿ ಮಾರುಕಟ್ಟೆಯಾಗಿ ಪರಿವರ್ತನೆ ಹೊಂದಿರುವುದರಿಂದ ರೈಲ್ವೆ ನಿಲ್ದಾಣಕ್ಕೆ ತೆರಳಲು ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ರಾಮ್‌ ಎನ್‌ ರೆಡ್ಡಿ ಎನ್ನುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರೈಲ್ವೆ ಸಚಿವ ಪಿಯುಷ್ ಗೋಯಲ್ ಸೇರಿದಂತೆ ರೈಲ್ವೆ ಹಿರಿಯ ಅಧಿಕಾರಿಗಳಿಗೆ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕೂಡಲೇ ಸ್ಪಂದಿಸಿರುವ ರೈಲ್ವೆ ಇಲಾಖೆ ಈ ಕುರಿತು ರೈಲ್ವೆ ಸುರಕ್ಷಾ ದಳ, ಆರ್‌ಪಿಎಫ್‌ ಹಾಗೂ ರೈಲ್ವೆ ಎಂಜಿನಿಯರಿಂಗ್ ವಿಭಾಗಕ್ಕೆ ಸೂಚನೆ ನೀಡುವುದಾಗಿ ಸ್ಪಂದಿಸಿದ್ದಾರೆ.

Passengers oppose walk way close in white field station

ಮೆಟ್ರೋ-2 ಕಾಮಗಾರಿ: ನಿಗದಿತ ವೇಳೆಗೆ ಪೂರ್ಣ ನಿರೀಕ್ಷೆಮೆಟ್ರೋ-2 ಕಾಮಗಾರಿ: ನಿಗದಿತ ವೇಳೆಗೆ ಪೂರ್ಣ ನಿರೀಕ್ಷೆ

ದಿನನಿತ್ಯ ಈ ರೈಲ್ವೆ ನಿಲ್ದಾಣಕ್ಕೆ ಮುಖ್ಯರಸ್ತೆಯಿಂದ ಫೂಟ್‌ ಓವರ್ ಬ್ರಿಡ್ಜ್ ಮೂಲಕ ರೈಲ್ವೆ ನಿಲ್ದಾಣ ಪ್ರವೇಶಿಸುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ, ಈ ಕುರಿತಂತೆ ಹಲವಾರು ಭಾವಚಿತ್ರದ ಮೂಲಕ ರಾಮ್ ಎನ್‌ ರೆಡ್ಡಿಯವನ್ನುವವರು ಮಾಹಿತಿ ಹಂಚಿಕೊಂಡಿದ್ದರು ಇದಕ್ಕೆ ರೈಲ್ವೆ ಇಲಾಖೆ ಸ್ಪಂದಿಸಿದೆ.

English summary
Ram N. Reddy a citizen has gathered attention of railway minister Piyush Goyal and many senior officials about apathy in white field railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X