ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕ್ರಿಸ್ಮಸ್, ಹೊಸ ವರ್ಷ, ಸಂಕ್ರಾಂತಿ ಹೆಚ್ಚುವರಿ ರೈಲು ಬೇಕು'

|
Google Oneindia Kannada News

ಬೆಂಗಳೂರು, ಡಿಸೆಂಬರ್ 19: ಕ್ರಿಸ್ಮಸ್, ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿ ಹಬ್ಬಗಳು ಬರುತ್ತಿದ್ದು, ಹೆಚ್ಚಿನ ರೈಲುಗಾಡಿಗಳನ್ನು ಬಿಡುವಂತೆ ನೈರುತ್ಯ ರೈಲ್ವೇ ವಲಯ ಪ್ರಯಾಣಿಕರ ಸಂಘವು ಮನವಿ ಮಾಡಿದೆ.

ನೈರುತ್ಯ ವಲಯದ ಜನರಲ್ ಮ್ಯಾನೇಜರ್ ಅವರಿಗೆ ಸಂಘವು ಪತ್ರ ಬರೆದಿದೆ. ಹಬ್ಬಕ್ಕೆಂದು ಹುಬ್ಬಳ್ಳಿ ಹಾಗೂ ಮೈಸೂರಿಗೆ ಪ್ರಯಾಣ ಬೆಳೆಸುವವರ ಸಂಖ್ಯೆ ಹೆಚ್ಚಾಗಿದ್ದು, ಹಾಲಿ ಸಂಚರಿಸುತ್ತಿರುವ ರೈಲು ಗಾಡಿಗಳಲ್ಲಿ ರಿಸರ್ವೇಷನ್ ಸಿಗುವುದು ಕಷ್ಟವಾಗಿದೆ.

Passengers demand extra train during Festive Season

ಕೂಡಲೇ ವಿಶೇಷ ರೈಲುಗಾಡಿಗಳನ್ನು ಓಡಿಸಲು ಹಾಗೂ ಹರಿಹರ-ಯಶವಂತಪುರ-ಹರಿಹರ ಇಂಟರ್ಸಿಟಿ ಎಕ್ಸ್ ಪ್ರೆಸ್ ರೈಲು ಗಾಡಿಯನ್ನು ಪ್ರಸ್ತುತ ಯಶವಂತಪುರದಿಂದ ಬೆಂಗಳೂರು ಮೂಲಕ ಕೆಂಗೇರಿ ಅಥವಾ ರಾಮನಗರದವರೆಗೆ ವಿಸ್ತರಿಸುವಂತೆ ಕೋರಲಾಗಿದೆ.

ಕ್ರಿಸ್‌ಮಸ್ ರಜೆ : ಕೆಎಸ್ಆರ್‌ಟಿಸಿಯಿಂದ 550 ಹೆಚ್ಚುವರಿ ಬಸ್ಕ್ರಿಸ್‌ಮಸ್ ರಜೆ : ಕೆಎಸ್ಆರ್‌ಟಿಸಿಯಿಂದ 550 ಹೆಚ್ಚುವರಿ ಬಸ್

ಶಿರಡಿಗೆ ವಿಶೇಷ ರೈಲು: ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಸಿಗುವ ಸಾಲು ಸಾಲು ರಜೆಗೆ ಸರಿ ಹೊಂದುವಂತೆ ಭಾರತೀಯ ರೈಲ್ವೆಯ ದಕ್ಷಿಣ ಕೇಂದ್ರ ವಿಭಾಗದಿಂದ ಶಿರಡಿಗೆ ಡಿಸೆಂಬರ್ 24ರಂದು ವಿಶೇಷ ರೈಲನ್ನು ಬಿಡಲಾಗುತ್ತಿದೆ.

ಟ್ರೈನ್ ನಂ (07713) ವಿಜಯವಾಡ-ನಾಗರ್ ಸೊಲ್ ವಿಶೇಷ ರೈಲು ವಿಜಯವಾಡದಿಂದ ಡಿಸೆಂಬರ್ 24ರಂದು ಹೊರಟು ನಾಂದೇಡ್, ಮರುದಿನ ನಾಗರಸೋಲ್ ತಲುಪಲಿದೆ.

ಬೆಂಗಳೂರಿನಿಂದ ಶಿರಡಿಗೆ ವಾರದ 6 ದಿನ ವಿಮಾನಯಾನಬೆಂಗಳೂರಿನಿಂದ ಶಿರಡಿಗೆ ವಾರದ 6 ದಿನ ವಿಮಾನಯಾನ

ರಿಟರ್ನ್ ಜರ್ನಿಯಲ್ಲಿ 07714 ಸಂಖ್ಯೆಯ ರೈಲು ನಾಗರಸೋಲ್ ನಿಂದ ಡಿಸೆಂಬರ್ 25ರಂದು ಹೊರಟು ಔರಂಗಬಾದ್, ನಾಂದೇಡ್ ಮಾರ್ಗವಾಗಿ ವಿಜಯವಾದವನ್ನು ಮಾರನೇ ದಿನ ತಲುಪಲಿದೆ.

ರಾಮೇಶ್ವರಂ ಓಖಾ ಎಕ್ಸ್ ಪ್ರೆಸ್ ತಾಂತ್ರಿಕ ತೊಂದರೆಯಿಂದ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಪಿಆರ್ ಒ ರಾಜೇಶ್ ಶಿಂಧೆ ಹೇಳಿದ್ದಾರೆ.

English summary
South West Railway Passenger Organisation has wrote a letter to SWR General Manager demanding to ply extra train during the Christmas, New Year and Makara Sankranti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X