ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿದ್ದವ ಸಿಕ್ಕಿದ್ದೆಲ್ಲಿ ಗೊತ್ತಾ?

By Nayana
|
Google Oneindia Kannada News

Recommended Video

ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕ ನಾಪತ್ತೆ | ನಂತರ ಏನಾಯ್ತು?

ಬೆಂಗಳೂರು, ಜು.18: ಮದ್ಯ ಸೇವಿಸಿದ್ದಾನೆ ಎಂದು ವಿಮಾನ ನಿಲ್ದಾಣದಿಂದ ವ್ಯಕ್ತಿಯೊಬ್ಬನನ್ನು ಅಧಿಕಾರಿಗಳು ಹೊರಗೆ ಕಳುಹಿಸಿದ್ದರು. ನಂತರ ಆತ ನಾಪತ್ತೆಯಾಗಿದ್ದ ಎನ್ನಲಾಗಿತ್ತು, ಈ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆತನನ್ನು ಪತ್ತೆ ಹಚ್ಚಿ ಮನೆಗೆ ಕಳುಹಿಸಿದ್ದಾರೆ.

ರಾಜಸ್ತಾನದ ಜೈಪುರ ಮೂಲದ ಕಾರ್ಮಿಕ ರಿಚ್ಬಾಲ್‌ ನಾಪತ್ತೆಯಾಗಿದ್ದ ಪ್ರಯಾಣಿಕ, ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಟೈಲ್ಸ್‌ ಕಂಪನಿಯಲ್ಲಿ ಕಾರ್ಮಿಕನಾಗಿದ್ದ ರಿಚ್ಬಾಲ್‌ ಕೆಲಸದ ವೇಳೆ ನಡೆದ ಅವಗಢದಲ್ಲಿ ಕಾಲಿನ ಮೂಳೆ ಮುರಿದುಕೊಂಡಿದ್ದ, ಚಿಕಿತ್ಸೆ ಕೊಡಿಸಿದ ಮಾಲೀಕರು ಆತನನ್ನು ಜೈಪುರಕ್ಕೆ ಕಳುಹಿಸಲು ಇಂಡಿಗೋ ವಿಮಾನದಲ್ಲಿ ಟಿಕೆಟ್‌ ಬುಕ್‌ ಮಾಡಿದ್ದರು.

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಇನ್ನು ರಾಜ್ಯ ಸರ್ಕಾರ ಹಣ ಹೂಡುವುದಿಲ್ಲಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಇನ್ನು ರಾಜ್ಯ ಸರ್ಕಾರ ಹಣ ಹೂಡುವುದಿಲ್ಲ

ಜು.10ರಂದು ಜೈಪುರಕ್ಕೆ ತೆರಳಲು ಸಹೋದ್ಯೋಗಿ ಮುಖೇಶ್‌ ಕಾರಿನಲ್ಲಿ ಬೆಳಗ್ಗೆ 9ಗಂಟೆಗೆ ಏರ್‌ಪೋರ್ಟ್‌ಗೆ ಕರೆತಂದು ವ್ಹೀಲ್‌ಚೇರ್‌ನಲ್ಲಿ ಕೂರಿಸಿ ಖರ್ಚಿಗೆ 300 ರೂ. ಕೊಟ್ಟಿದ್ದನು. ನಂತರ ರಿಚ್ಬಾಲ್‌ ಮನೆಯವರಿಗೆ ಕರೆ ಮಾಡಿ ಮಧ್ಯಾಹ್ನ 3 ಗಂಟೆಗೆ ವಿಮಾನ ಬರಲಿದೆ ಎಂದು ಮಾಹಿತಿ ಕೊಟ್ಟಿದ್ದ.

Passenger missing from airport found 10km away

ಅತಿಯಾದ ಮಧ್ಯ ಸೇವನೆ ಮಾಡಿದ್ದ ರಿಚ್ಬಾಲ್‌ಗೆ ವಿಮಾನ ಹತ್ತಲು ಅಧಿಕಾರಿಗಳು ಅವಕಾಶ ಕೊಡಲಿಲ್ಲ. ಆದ್ದರಿಂದ ರಿಚ್ಬಾಲ್‌ ಕುಟುಂತ್ತ ನಿರ್ಜನ ಪ್ರದೇಶಕ್ಕೆ ತೆರಳಿ ರಾತ್ರಿ ಅಲಲ್ಇಯೇ ಮಲಗಿ ಮರುದಿನ ಟೋಯಿಂಗ್‌ ಸಿಬ್ಬಂದಿ ಸಹಾಯದಿಂದ ವಿಮಾನ ನಿಲ್ದಾಣದಿಂದ ಹೊರಬಂದಿದ್ದ.

ಬೇರೊಂದು ವಾಹನದ ಮೂಲಕ ಕನ್ನಮಂಗಲಕ್ಕೆ ಬಂದು ರಸ್ತೆ ಬದಲಿ ಮಲಗಿದ್ದ, ತನ್ನ ಬಳಿ ಯಾರೊಬ್ಬರ ಮೊಬೈಲ್‌ ಸಂಖ್ಯೆ ಇಲ್ಲದಿದ್ದರಿಂದ ಸಂಬಂಧಿಕರನ್ನು ಸಂಪರ್ಕಿಸಲು ಸಾಧ್ಯವಾಗದೆ ವಾರ ಕಳೆದಿದ್ದ. ಜೈಪುರಕ್ಕೆ ಅವರು ಬಾರದ್ದನ್ನು ಅರಿತು ಭಯಗೊಂಡ ಸಂಬಂಧಿಕರು ಮುಖೇಶ್‌ಗೆ ಕಾಲ್‌ ಮಾಡಿದ್ದರು.ನಂತರ ಸಿಸಿಟಿವಿ ಕ್ಯಾಮರಾ ನೋಡಿದಾಗ ವಿಮಾನ ನಿಲ್ದಾಣದಿಂದ ಆತಮ ಹೊರಬಂದಿತ್ತು ಸೆರೆಯಾಗಿತ್ತು. ನಂತರ ಶೋಧ ನಡೆಸಿ ಆತನನ್ನು ಪತ್ತೆ ಹಚ್ಚಿದ ಪೊಲೀಸರು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

English summary
A week after having mysteriously gone missing from Kempegowda international Airport from where he was a take a flight to Jaipur pn July 10 to reach his native Debra village in Ajmer districts of Rajasthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X