ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರಾಪ್ ಕೊಡ್ತೀನಿ ಎಂದು ಅಪಹರಿಸಿದ್ರು, ವ್ಯಕ್ತಿ ಪಾರಾಗಿದ್ದು ಹೇಗೆ?

|
Google Oneindia Kannada News

ಬೆಂಗಳೂರು, ಮಾರ್ಚ್ 26: ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯನ್ನು ಅಪಹರಿಸಲು ಯತ್ನಿಸಿದ ದುಷ್ಕರ್ಮಿಗಳು ಚಿನ್ನಾಭರಣವನ್ನು ದೋಚಿದ್ದಾರೆ.

ಅಪಹರಣಕ್ಕೆ ಒಳಗಾಗಿದ್ದ ವ್ಯಕ್ತಿಯು ದುಷ್ಕರ್ಮಿಗಳು ಡೀಸೆಲ್ ಹಾಕಿಸಲು ಪೆಟ್ರೋಲ್ ಬಂಕ್ ಬಳಿ ಬಂದಾಗ ಎಚ್ಚೆತ್ತುಕೊಂಡು ಕಾರು ಚಾಲಕನನ್ನು ಕಾಲಿನಿಂದ ಒದ್ದು ಕಾರಿನಿಂದ ಹೊರಬಂದು ತಪ್ಪಿಸಿಕೊಂಡಿದ್ದಾನೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಕುರಿತು ರೇಗನ್ ಡ್ಯೂಕ್ ಅವರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದ್ದಾರೆ.

ಅಪಹರಣವಾಗಿದ್ದ ಬಾಲಕನನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಪೊಲೀಸರು ಅಪಹರಣವಾಗಿದ್ದ ಬಾಲಕನನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಪೊಲೀಸರು

ಖಾಸಗಿ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿರುವ ರೇಗನ್ ಕಾರ್ಯ ನಿಮಿತ್ತ ಕೇರಳದ ಕ್ಯಾಲಿಕಟ್‌ಗೆ ತೆರಳು ರಾತ್ರಿ ಮೈಸೂರಿನಿಂದ ಬಸ್‌ ನಲ್ಲಿ ಆಗಮಿಸಿದ್ದು ರಾತ್ರಿ 12.30ರ ಸುಮಾರಿಗೆ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಇಳಿದುಕೊಂಡಿದ್ದರು.

Passenger escaped from Kidnappers in fimy style

ಜೆಪಿನಗರದಲ್ಲಿರುವ ತಮ್ಮ ನಿವಾಸಕ್ಕೆ ತೆರಳಲು ಕಾರು ಬುಕ್ ಮಾಡಲು ರೇಗನ್ ರಸ್ತೆ ಬದಿ ನಿಂತುಕೊಂಡಿದ್ದರು. ಈ ವೇಳೆ ಕಾರು ನಿಲ್ಲಿಸಿದ ಚಾಲಕ ಬನಶಂಕರಿ ಕಡೆ ಬರ್ತೀರಾ ಎಂದು ಕೇಳಿದ್ದಾರೆ. ಕಾರಿನಲ್ಲಿ ಚಾಲಕನ ಪಕ್ಕ ಒಬ್ಬರು ಹಾಗೂ ಹಿಂಬದಿ ಇಬ್ಬರು ಕುಳಿತುಕೊಂಡಿದ್ದರು.

ಬೆಂಗಳೂರಿಂದ ಉತ್ತರ ಪ್ರದೇಶಕ್ಕೆ ಹೊರಟಿದ್ದ ತಾಯಿ-ಮಗಳು ಕಿಡ್ನ್ಯಾಪ್ ಬೆಂಗಳೂರಿಂದ ಉತ್ತರ ಪ್ರದೇಶಕ್ಕೆ ಹೊರಟಿದ್ದ ತಾಯಿ-ಮಗಳು ಕಿಡ್ನ್ಯಾಪ್

ಬನಶಂಕರಿ ಮಾರ್ಗಕ್ಕೆ ತೆರಳುತ್ತಿದ್ದ ಕಾರಿನ ಚಾಲಕ ಹೊರವರ್ತುಲ ರಸ್ತೆಯಲ್ಲಿ ಮೈಸೂರು ರಸ್ತೆಗೆ ತಿರುಗಿಸಿದ್ದಾರೆ. ಸೀಟನ್ನು ಹಿಂದಕ್ಕೆ ನೂಕಿ ರೇಗನ್ ಅವರ ಕಾಲು ಸಿಕ್ಕಿಹಾಕಿಕೊಳ್ಳುವಂತೆ ಮಾಡಿದ್ದಾರೆ.

ಸುಮಾರು 45 ಸಾವಿರ ರೂ ಬೆಲೆ ಬಾಳುವ ಚಿನ್ನದ ಸರ, ಚಿನ್ನದ ಉಂಗುರ, ವಾಚ್ ಬ್ಯಾಗ್‌ನಲ್ಲಿದ್ದ ಡೆಬಿಟ್, ಕ್ರೆಡಿಟ್ ಕಾರ್ಡ್ ಕಿತ್ತುಕೊಂಡಿದ್ದಾರೆ. ಇದಾದ ಕೆಲವೇ ಹೊತ್ತಲ್ಲಿ ಕೆಂಗೇರಿಯಿಂದ ಸ್ವಲ್ಪ ದೂರದ ಪೆಟ್ರೋಲ್ ಪಂಕ್ ಗೆ ಡೀಸೆಲ್ ಹಾಕಿಸಲು ಬಂದಾಗ ಉದ್ಯೋಗಿ ಕಾರಿನಿಂದ ತಪ್ಪಿಸಿಕೊಂಡಿದ್ದಾರೆ.

English summary
A Passenger escaped from Kidnapers when they are putting diesel to car, he escaped from the car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X