ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಾ.ರಾಜ್ -ಪಾರ್ವತಮ್ಮ ಸಾವಿನಲ್ಲೂ ಸಾರ್ಥಕತೆ, ಬುಧವಾರವೇ ಕಣ್ಮರೆ

ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರು ಸಾವನಲ್ಲೂ ಸಾರ್ಥಕತೆ ಮೆರೆದು ಕಣ್ಣುಗಳನ್ನು ದಾನ ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ, ಚಿತ್ರರಂಗದ ಆಧಾರ ಶಕ್ತಗಳಾಗಿದ್ದ ರಾಜ್, ಪಾರ್ವತಮ್ಮ, ವರದಪ್ಪ ಅವರು ಬುಧವಾರದಂದೇ ಕಣ್ಮರೆಯಾಗಿದ್ದು ವಿಶೇಷ.

By Mahesh
|
Google Oneindia Kannada News

ಬೆಂಗಳೂರು, ಮೇ 31: ವರನಟ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರ ದಾಂಪತ್ಯ, ಅನುಬಂಧ, ಜೀವನ ಎಲ್ಲರಿಗೂ ಆದರ್ಶಪ್ರಾಯ.

'ಪಾರ್ವತಮ್ಮ ನವರು ಹುಟ್ಟಿದ ತಕ್ಷಣವೇ ಮುತ್ತುರಾಜ್(ಡಾ. ರಾಜಕುಮಾರ್) ಗೆ ಕೊಡುತ್ತೇವೆ' ಎಂದು ಪಾರ್ವತಮ್ಮ ಅವರ ತಂದೆ ತಾಯಿ ಮಾತು ಕೊಟ್ಟಿದ್ದರಂತೆ, ಸಿಂಗನಲ್ಲೂರು ಪುಟ್ಟಸ್ವಾಮಯ್ಯ(ಡಾ.ರಾಜ್ ಅವರ ತಂದೆ) ಅವರು ತೊಟ್ಟಿಲಲ್ಲಿದ್ದ ಮಗು ಪಾರ್ವತಿಯನ್ನು ಕಂಡು ಇವಳೆ ನನ್ನ ಸೊಸೆ ಎಂದಿದ್ದಾರೆ. ಅಲ್ಲಿಗೆ ಡಾ. ರಾಜ್ ಹಾಗೂ ಪಾರ್ವತಮ್ಮನವರು ಜೋಡಿ ಜೀವ ಪಯಣ ಆರಂಭ.[ದಿ. ಪಾರ್ವತಮ್ಮ ರಾಜ್ ಕುಮಾರ್ ಅವರ ಮರೆಯಲಾರದ ಚಿತ್ರಗಳು]

ಈಗ ಈ ಆದರ್ಶ ದಂಪತಿಗಳು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಇಬ್ಬರು ನೇತ್ರದಾನ ಮಾಡಿದ್ದಾರೆ. ಇಬ್ಬರು ಬುಧವಾರದ ದಿನದಂದೇ ನಿಧನರಾಗಿರುವುದು ವಿಶೇಷ. ಅಷ್ಟೇ ಅಲ್ಲ, ಚಿತ್ರರಂಗ ಹಾಗೂ ಡಾ. ರಾಜ್ ಕುಟುಂಬದ ಸಿನಿಶಕ್ತಿಯಾಗಿದ್ದ ವರದಪ್ಪ(ಡಾ.ರಾಜ್ ಅವರ ಸೋದರ) ಅವರು ಕೂಡಾ ಬುಧವಾರದಂದೇ ವಿಧಿವಶರಾಗಿದ್ದು ಕಾಕತಾಳೀಯ.[ಕನ್ನಡ ಸಿನಿಮಾ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ]

ಮೈಸೂರು ಸಾಮ್ರಾಜ್ಯದ ಕೃಷ್ಣರಾಜನಗರ ತಾಲೂಕಿನ ಸಾಲಿಗ್ರಾಮದಲ್ಲಿ ಜನಿಸಿದ ಪಾರ್ವತಮ್ಮ ಅವರು ಸಿನಿರಂಗದ ನಂ. 1 ನಿರ್ಮಾಪಕಿಯಾಗಿ, ಉದ್ಯಮಿಯಾಗಿ ಬೆಳೆದಿದ್ದಲ್ಲದೆ, ಚಿತ್ರರಂಗದ ಒಗ್ಗೂಟ್ಟು ಉಳಿಯುವಂತೆ ಕಾಯ್ದವರು. ಎಲ್ಲಕ್ಕಿಂತ ಹೆಚ್ಚಾಗಿ ಡಾ. ರಾಜ್ ಅವರ ಪಾಲಿನ ದೇವತೆ.[ಪಾರ್ವತಮ್ಮ ಕನ್ನಡ ಚಿತ್ರರಂಗ ಶಕ್ತಿ : ಟ್ವಿಟ್ಟರಲ್ಲಿ ಕಂಬನಿ]

ಹಲವು ಪ್ರತಿಭೆಗಳನ್ನು ಬೆಳೆಸಿದವರು

ಹಲವು ಪ್ರತಿಭೆಗಳನ್ನು ಬೆಳೆಸಿದವರು

ಪೂರ್ಣಿಮಾ ಎಂಟರ್ ಪ್ರೈಸರ್ ಮೂಲಕ ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಲ್ಲದೆ, ಸುಧಾರಾಣಿ, ಮಾಲಾಶ್ರೀ, ಪ್ರೇಮಾ, ರಕ್ಷಿತಾ, ರಮ್ಯಾ ಅವರನ್ನು ಚಿತ್ರರಂಗಕ್ಕೆ ಕರೆ ತಂದವರು. ಸರಿ ಸುಮಾರು 80ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಿಸಿದ್ದರು. ಡಾ. ರಾಜ್ ಅಭಿನಯದ ಹಾಲು ಜೇನು, ಕವಿರತ್ನ ಕಾಳಿದಾಸ, ಜೀವನ ಚೈತ್ರ , ಶಿವರಾಜ್ ಅಭಿನಯದ ಆನಂದ್, ಓಂ, ಜನುಮದ ಜೋಡಿ, ರಾಘವೇಂದ್ರ ರಾಜ್ ಕುಮಾರ್ ಅಭಿನಯದ ನಂಜುಂಡಿ ಕಲ್ಯಾಣ, ಪುನೀತ್ ಅಭಿನಯದ ಅಪ್ಪು, ಅಭಿ, ಹುಡುಗರು ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿದರು. 35ಕ್ಕೂ ಅಧಿಕ ಚಿತ್ರಗಳು ಸಿಲ್ವರ್ ಜ್ಯುಬಿಲಿ ಬಾರಿಸಿವೆ.[ಪಾರ್ವತಮ್ಮ ನಿಧನ: ಚಿತ್ರಮಂದಿರಗಳು ಬಂದ್, ಹಲವು ಶಾಲೆಗಳಿಗೆ ರಜೆ]

ಮೂವರು ಬುಧವಾರವೇ ನಿಧನ

ಮೂವರು ಬುಧವಾರವೇ ನಿಧನ

ಏಪ್ರಿಲ್ 12(ಬುಧವಾರ), 2006ರಲ್ಲಿ ಡಾ. ರಾಜ್ ಕುಮಾರ್ ಅವರು ನಿಧನರಾದರು. ಫೆಬ್ರವರಿ 8(ಬುಧವಾರ), 2006 ಡಾ ರಾಜ್ ಕುಮಾರ್ ಅವರ ಸೋದರ ಎಸ್. ಪಿ ವರದಪ್ಪ ಅವರು ಕಣ್ಮರೆಯಾದರು. ಮೇ 31, 2017ರಂದು ಪಾರ್ವತಮ್ಮ ರಾಜ್ ಕುಮಾರ್ ಅವರು ವಿಧಿವಶರಾಗಿದ್ದಾರೆ ಎಂದು ಚಿತ್ರಲೋಕ.ಕಾಂ ಟ್ವೀಟ್ ಮಾಡಿದೆ.[ಸಾಲಿಗ್ರಾಮದ ಪಾರ್ವತಿ ಕನ್ನಡ ಚಿತ್ರರಂಗದ ಅಮ್ಮನಾಗಿ...]

ಮೂವರು ಆಧಾರ ಶಕ್ತಿಗಳು

ಮೂವರು ಆಧಾರ ಶಕ್ತಿಗಳು

[ಹಲವು ಸಂಕಷ್ಟಗಳನ್ನು ಎದುರಿಸಿದ್ದ ಅಗಾಧ ಶಕ್ತಿ ಪಾರ್ವತಮ್ಮ][ಹಲವು ಸಂಕಷ್ಟಗಳನ್ನು ಎದುರಿಸಿದ್ದ ಅಗಾಧ ಶಕ್ತಿ ಪಾರ್ವತಮ್ಮ]

ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ

ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್ ಸಮಾಧಿ ಸಮೀಪದಲ್ಲೇ ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿ ನಿರ್ಮಾಣವಾಗುತ್ತಿದೆ. ಡಾ. ರಾಜ್ ಅವರಿಗೆ ಸರಿಯಾಗಿ ಅಂತಿಮ ಸಂಸ್ಕಾರ ನೆರವೇರಿಸಲು ಆಗಲಿಲ್ಲ. ಪಾರ್ವತಮ್ಮ ನವರಿಗೆ ಸರಿಯಾಗಿ ಸಂಸ್ಕಾರ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ. ಬುಧವಾರ(ಮೇ 31) ಸಂಜೆ ಅಂತಿಮ ವಿಧಿ ವಿಧಾನ ನಡೆಯಲಿದೆ.

English summary
On February 12 2006, Dr Rajkumar passed away. On 8 February 2006, Dr Rajkumar's brother S P Varadappa passed away. On May 31 2017, wife of Dr Rajkumar, Parvathamma passed away at Bengaluru. On April 12 2006, Dr Rajkumar passed away. On 8 February 2006, Dr Rajkumar's brother S P Varadappa passed away. On May 31 2017, wife of Dr Rajkumar, Parvathamma passed away at Bengaluru. What is strange and coincidental is that all these three dates fell on a Wednesday. This interesting bit of information What is strange and coincidental is that all these three dates fell on a Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X