ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾರ್ವತಮ್ಮ ಸ್ಥಿತಿ ಗಂಭೀರ, ಆದರೂ ಆತಂಕ ಪಡಬೇಕಾಗಿಲ್ಲ

ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ನೀಡಲಾಗಿದೆ ಎಂದು ಎಂಎಸ್ ರಾಮಯ್ಯ ವೈದ್ಯರು.

|
Google Oneindia Kannada News

ಬೆಂಗಳೂರು, ಮೇ 18: ಅನಾರೋಗ್ಯದಿಂದಾಗಿ ಕಳೆದ ಮೂರು ದಿನಗಳಿಂದ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾರ್ವತಮ್ಮ ರಾಜ್ ಕುಮಾರ್ ಅವರ ಆರೋಗ್ಯ ಗಂಭೀರವಾಗಿದ್ದರೂ, ಆತಂಕ ಪಡುವ ಅಗತ್ಯವೇನಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ನರೇಶ್, ''ನೆನ್ನೆ (ಮೇ 17) ರಾತ್ರಿ ಸ್ವಲ್ಪ ಉಸಿರಾಟದ ಸಮಸ್ಯೆ ಕಾಡಿತ್ತು. ಹಾಗಾಗಿ, ಅವರನ್ನು ಕೃತಕ ಉಸಿರಾಟದ ವ್ಯವಸ್ಥೆಗೆ ಒಳಪಡಿಸಲಾಗಿದೆ. ಏತನ್ಮಧ್ಯೆ, ಕಿಡ್ನಿಯಲ್ಲೂ ಸ್ವಲ್ಪ ತೊಂದರೆ ಕಾಣಿಸಿಕೊಂಡಿದ್ದು, ಅಗತ್ಯ ಬಿದ್ದರೆ ಅವರಿಗೆ ಡಯಾಲಿಸಿಸ್ ಒದಗಿಸಲಾಗುತ್ತದೆ'' ಎಂದರು.

Parvathamma Rajkumar

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ''ಸಾಮಾನ್ಯವಾಗಿ ಐಸಿಯುನಲ್ಲಿದ್ದಾಗ ಗಾಬರಿಯಾಗುತ್ತದೆ. ಹಾಗಾಗಿ, ನಾವು ಕುಟುಂಬ ಸದಸ್ಯರೆಲ್ಲರೂ ಗಾಬರಿಯಿಂದ ಇದ್ದೇವೆ. ಆತಂಕ ಪಡುವಂಥದ್ದೇನೂ ಇಲ್ಲ ವೈದ್ಯರು ತಿಳಿಸಿದ್ದಾರೆ'' ಎಂದು ತಿಳಿಸಿದರು.

English summary
The health condition of film producer Parvathamma Rajkumar became critical but need not to worry says the doctors who are looking after her in M.S. Ramaiah hospital, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X