ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಹಳಿ ದುರಸ್ತಿ: ವಾರಾಂತ್ಯಗಳಲ್ಲಿ ಸಂಚಾರ ಸ್ಥಗಿತ ಸಾಧ್ಯತೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 26 : ನಮ್ಮ ಮೆಟ್ರೋ ಹಳಿಗಳು ಸೇರಿದಂತೆ ಅನೇಕ ನಿರ್ವಹಣಾ ಕಾರ್ಯಗಳು ಇರುವ ಕಾರಣ ವಾರಾಂತ್ಯದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ಶನಿವಾರ ರಾತ್ರಿ 9 ರಿಂದ ಭಾನುವಾರ ಸಂಜೆ 7 ಗಂಟೆಯವರೆಗೆ ಮೂರು ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ರೈಲು ಹಳಿಗಳು ಮತ್ತಿತರೆ ವ್ಯವಸ್ಥೆಗಳ ನಿರ್ವಹಣೆ ಕಾಮಗಾರಿ ಕೈಗೊಳ್ಳಲು 42.3 ಕಿ.ಮೀ ಜಾಲ ಹೊಂದಿರುವ ಮೆಟ್ರೋ ರೈಲು ತಾತ್ಕಾಲಿಕವಾಗಿ ವಾರಾಂತ್ಯಗಳಲ್ಲಿ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ನಿರ್ವಹಣೆ ಕಾರ್ಯ ನಡೆಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೆಟ್ರೋ ನಿಗಮದ ಕಾರ್ಯನಿರ್ವಹಣಾಧಿಕಾರಿ ಆರ್. ಎಂ. ಧೋಕೆ ತಿಳಿಸಿದ್ದಾರೆ. ಈ ವಾರ ಆರ್ ವಿ ರಸ್ತೆ ಮತ್ತು ಯಲಚೇನಹಳ್ಳಿ ಮಧ್ಯೆ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಂತೆ ಮುಂದಿನ ವಾರಗಳಿಂದ ಒಂದೊಂದು ಕಡೆ ಸಂಚಾರ ಸ್ಥಗಿತಗೊಳಿಸಲಾಗುವುದು ಇದನ್ನು ಬೇರೆ ಮೆಟ್ರೋ ನಗರ ಮತ್ತು ಬೇರೆ ದೇಶಗಳಲ್ಲಿಯೂ ಕೂಡ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

Parts of Metro to shuts down on Weekends

ರೈಲು ಹಳಿಗಳು ಹಾಳಾಗಿವೆ ಎಂದು ಅತರರ್ಥವಲ್ಲ. ಮೆಟ್ರೋ ರೈಲು ಸಂಚಾರವಾಗದಿರುವ ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನಿರ್ವಹಣೆ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವು ಮಾರ್ಗಗಳಲ್ಲಿ ನಿರ್ವಹಣೆ ಕಾರ್ಯ ನಡೆಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಹೀಗೆ ಮೆಟ್ರೋ ರೈಲುಗಳ ಸಂಚಾರ ಪ್ರತಿ ಮೂರು ತಿಂಗಳಿಗೊಮ್ಮೆ ಅಥವಾ 6 ತಿಂಗಳಿಗೊಮ್ಮೆ ನಡೆಯಬಹುದು ಎಂದು ತಿಳಿಸಿದರು.

English summary
BMRCL plans to have weekend shutdowns on streches of the 42.3 km Metro network spread across 40 stations in the city to carry out maintainence works of rail tracks and other system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X