ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯುತ್‌ ವ್ಯತ್ಯಯ ಉಂಟಾಗುವುದನ್ನ ಕಡಿಮೆ ಮಾಡಲು ಬೆಸ್ಕಾಂ ಯೋಜನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 15 : ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳು ಸುರಿದ ಧಾರಕಾರ ಮಳೆಯಿಂದಾಗಿ ರಾಜಾಜಿನಗರ, ಇಂದಿರಾನಗರ, ಹೆಬ್ಬಾಳ, ಆರ್ ಆರ್ ನಗರ, ಶಿವಾಜಿನಗರದ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಸದ್ಯ ಬೆಸ್ಕಾಂ ಈ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಇನ್ನು ಮುಂದೆ ನಿರಂತರವಾಗಿ ವಿದ್ಯುತ್‌ ಪೂರೈಕೆಯಾಗಲಿದೆ ಅಂತ ತಿಳಿಸಿದೆ.

ಓವರ್‌ಹೆಡ್ ಎಲೆಕ್ಟ್ರಿಕ್ ಲೈನ್‌ಗಳನ್ನು ಅಂಡರ್‌ಗ್ರೌಂಡ್ ಕೇಬಲ್‌ಗಳನ್ನಾಗಿ ಪರಿವರ್ತಿಸುವ ಯೋಜನೆಯ ಒಂದು ಮತ್ತು ಎರಡನೇ ಹಂತಗಳು ಪೂರ್ಣಗೊಳ್ಳುವ ಹಂತದಲ್ಲಿದೆ ಅಂತ ಬೆಸ್ಕಾಂ ತಿಳಿಸಿದೆ. ಇನ್ನು ಮೊದಲ ಎರಡು ಹಂತಗಳನ್ನ ಅಕ್ಟೋಬರ್ 2021 ರಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಆದ್ರೆ ರೋಡ್‌ ಕಟ್ಟಿಂಗ್ ಗೆ ಅನುಮತಿ ಸಿಗುವುದು ವಿಳಂಬವಾದ್ದರಿಂದ ಯೋಜನೆಯನ್ನ ಸ್ಥಗಿತಗೊಳಿಸಲಾಗಿತ್ತು. ಸದ್ಯ ಈಗ ಮತ್ತೆ ಆರಂಭವಾಗಿದ್ದು, ಮೊದಲ ಎರಡು ಹಂತಗಳು ಆದಷ್ಟು ಬೇಗ ಪೂರ್ಣಗೊಳ್ಳಲಿದೆ ಅಂತ ಬೆಸ್ಕಾಂ ಹಿರಿಯ ಅಧಿಕಾರಿ ಹೇಳಿದ್ದಾರೆ.

Parts of Bengaluru to get Uninterrupted Power Supply : BESCOM

"ಈ ಅವಧಿಯಲ್ಲಿ ಶಾಲಾ ಕಾಲೇಜುಗಳ ಪರೀಕ್ಷೆ ನಡೆಯುತ್ತಿವುದರಿಂದ ಕಾಮಗಾರಿಯನ್ನ ಸ್ಥಗಿತಗೊಳಿಸಲಾಗಿದೆ. ಈ ಅವಧಿಯಲ್ಲಿ ನಾವು ಹೆಚ್ಚಿನ ಸಮಯ ವಿದ್ಯುತ್ ಕಡಿತವನ್ನಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾವು ಕಾಮಗಾರಿಯ ಪ್ರಕ್ರಿಯೆಯನ್ನ ತಾತ್ಕಾಲಿಕವಾಗಿ ನಿಧಾನಗೊಳಿಸಿದ್ದೇವೆ. ಆದರೆ ಮೊದಲ ಎರಡು ಹಂತಗಳು ಒಂದು ತಿಂಗಳೊಳಗೆ ಪೂರ್ಣಗೊಳಿಸುವ ಭರವಸೆ ಇದೆ" ಅಂತ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಹೇಳಿದ್ದಾರೆ.

Parts of Bengaluru to get Uninterrupted Power Supply : BESCOM

Recommended Video

ಉಕ್ರೇನ್ ಪರಿಸ್ಥಿತಿ ತುಂಬಾ ಹದಗೆಡ್ತಿದೆ!! | Oneindia Kannada

English summary
Parts of Rajajinagar, Indiranagar, Hebbal, RR Nagar, Shivajinagar and Hebbal Reas may finally get an uninterrupted power supply. Phases I and II of Bescom’s project nearing completion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X