ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾರ್ಕ್ ವಿಹಾರಕ್ಕೆ 1 ಗಂಟೆ ಹೆಚ್ಚು ಸಮಯ ನೀಡಿದ ಸರ್ಕಾರ

|
Google Oneindia Kannada News

ಬೆಂಗಳೂರು, ಮೇ 25: ಕೊರೊನಾವೈರಸ್ ಲಾಕ್ಡೌನ್ 4.0 ನಡುವೆ ಪಾರ್ಕ್ ಗಳಲ್ಲಿ ವಿಹಾರ, ಜಾಗಿಂಗ್, ವಾಕಿಂಗ್ ಮಾಡಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಮೇ 19ರಂದು ಪಾರ್ಕ್ ಬಳಿ ಕಂಡು ಬಂದಿದ್ದ ದೃಶ್ಯ ಈಗ ಮತ್ತೆ ಸೋಮವಾರ ಪುನರಾವರ್ತನೆಯಾಗಿದೆ. ಸಂಡೆ ಕರ್ಫ್ಯೂ ಬಳಿಕ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಪಾರ್ಕ್ ಗಳು ಮತ್ತೆ ಓಪನ್ ಆಗಿವೆ.

Recommended Video

ಬೆಂಗಳೂರಲ್ಲಿ ಸರಗಳ್ಳತನ ಮಾಡ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು ನೋಡಿ | Lalbagh

ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯ ಪಾರ್ಕ್ ಗಳು ಓಪನ್ ಆಗಿವೆ. 57 ದಿನಗಳ ನಂತರ ಪಾರ್ಕ್ ಗಳನ್ನು ತೆರೆಯಲು ಗ್ರೀನ್ ಸಿಗ್ನಲ್ ಕೊಟ್ಟಿದ್ದ ಸರ್ಕಾರ, ಬೆಳಗ್ಗೆ 7 ರಿಂದ 9 ಹಾಗೂ ಸಂಜೆ 5 ರಿಂದ 7 ಗಂಟೆವರೆಗೂ ವಿಹಾರಕ್ಕೆ ಅನುಮತಿ ನೀಡಿತ್ತು. ಆದರೆ, ನಡಿಗೆದಾರರ ಸಂಘದವರು ಇನ್ನು ಒಂದು ಗಂಟೆ ಅವಧಿ ವಿಸ್ತರಣೆ ಮಾಡುವಂತೆ ಕಳೆದ ವಾರವೇ ಮನವಿ ಮಾಡಿದ್ದರು.

ಸೋಮವಾರ(ಮೇ 25) ಸರತಿ ಸಾಲಿನಲ್ಲಿ ನಿಂತಿರೋ ವಾಕರ್ಸ್ ಗಳಿಗೆ ಸರ್ಕಾರ ಶುಭ ಸುದ್ದಿ ನೀಡಿದ್ದು, 3 ಗಂಟೆ ವಾಕ್ ಮಾಡೋಕೆ ಅನುಮತಿ ನೀಡಿದೆ. 1 ಗಂಟೆ ಹೆಚ್ಚು ಸಮಯವನ್ನು ನಿಗದಿ ಮಾಡಿರೋ ಸರ್ಕಾರ, ಲಾಲ್ ಬಾಗ್ ಬೆಳಗ್ಗೆ 7 ರಿಂದ 10 ಗಂಟೆವರೆಗೆ ಓಪನ್ ಆಗಿರುತ್ತದೆ ಎಂದು ಹೇಳಿದೆ.

Parks in Bengaluru now open for three hours

ಲಾಲ್ ಬಾಗ್ ಪ್ರವೇಶಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ನಿಯಮ ಮಾಡಲಾಗಿದೆ. ಹ್ಯಾಂಡ್ ಸ್ಯಾನಿಟೈಸರ್ ಬಳಸಿ ಕೈ ತೊಳೆದುಕೊಂಡ ಬಳಿಕ ಉದ್ಯಾವನವಕ್ಕೆ ಎಂಟ್ರಿ ನೀಡಲಾಗುತ್ತಿದೆ. ಜೊತೆಗೆ ಪ್ರವೇಶ ದ್ವಾರದ ಬಳಿಕ ಟೆಂಪರೇಚರ್ ಚೆಕ್ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಪ್ರತಿನಿತ್ಯ ಇಲ್ಲಿಗೆ ಬರುವ ನಡಿಗೆದಾರರು ಈ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಮುಂಜಾನೆ ಬೇಗ ಬಂದು ಸರತಿ ಸಾಲಿನಲ್ಲಿ ನಿಂತು ನಂತರ ಒಳಪ್ರವೇಶಿಸುತ್ತಿದ್ದಾರೆ.

ಕೊರೊನಾ: ಪಾರ್ಕ್‌ಗೆ ಹೋಗುವವರಿಗೆ ಬಿಬಿಎಂಪಿ ಕಮಿಷನರ್ ಮನವಿಕೊರೊನಾ: ಪಾರ್ಕ್‌ಗೆ ಹೋಗುವವರಿಗೆ ಬಿಬಿಎಂಪಿ ಕಮಿಷನರ್ ಮನವಿ

ಬಿಬಿಎಂಪಿ ವ್ಯಾಪ್ತಿಯ ಇತರೆ ಪಾರ್ಕ್ ಗಳಲ್ಲಿ ಅಳವಡಿಸಲಾಗಿರುವ ಜಿಮ್ ಸಾಧನಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ಪಾರ್ಕ್‌ನ ಒಳಗಿನ ಜಿಮ್ ಉಪಕರಣಗಳ ಬಳಕೆಯನ್ನು ನಿಷೇಧಿಸಲಾಗಿದ್ದು, ಆ ಉಪಕರಣಗಳನ್ನು ಬಳಸುವ ಮೂಲಕ, ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಪಾರ್ಕ್ ಬಳಕೆ ಮಾಡುವಂತೆ ಬಿಬಿಎಂಪಿ ಅಧಿಕಾರಿ ಸೂಚಿಸಿದ್ದಾರೆ.

English summary
Parks in Bengaluru now open after Sunday Curfew. Now Park will be open for three hours in the morning instead of two hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X