ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾರ್ಕಿಂಗ್ ಶುಲ್ಕ ವಸೂಲಿಗೆ ಬಿಬಿಎಂಪಿ ಒಪ್ಪಿಗೆ

|
Google Oneindia Kannada News

ಬೆಂಗಳೂರು ಸೆ.19 : ಐಟಿ ಸಿಟಿ ಬೆಂಗಳೂರಿನಲ್ಲಿ ಎಂಟು ವರ್ಷಗಳ ಬಳಿಕ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ. ಬುಧವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ದೊರಕಿದ್ದು, ಮುಂದಿನ ಮೂರು ತಿಂಗಳಿನಲ್ಲಿ ವ್ಯವಸ್ಥೆ ಜಾರಿಯಾಗಲಿದೆ.

ನಗರದ ಹಳೆಯ ಭಾಗದ ಆಯ್ದ 85 ರಸ್ತೆಗಳಲ್ಲಿ ಶುಲ್ಕ ಪಾವತಿಸಿ ವಾಹನ ನಿಲುಗಡೆ ವ್ಯವಸ್ಥೆ ಜಾರಿಗೆ ಬರಲಿದೆ. ಕಡ್ಡಾಯವಾಗಿ ಈ ಯೋಜನೆ ಜಾರಿಗೊಳಿಸಬೇಕೆಂಬ ರಾಜ್ಯ ಸರ್ಕಾರದ ಸೂಚನೆಯನ್ನು ಬಿಬಿಎಂಪಿ ಯಾವುದೇ ಪ್ರತಿರೋಧವಿಲ್ಲದೆ ಒಪ್ಪಿಕೊಂಡಿದೆ.

ಮಹಾನಗರ ಪಾಲಿಕೆ ಮನವಿ ಮೇರೆಗೆ ನಗರ ಭೂಸಾರಿಗೆ ನಿರ್ದೇಶನಾಲಯ, ಪ್ರಾಥಮಿಕ ಹಂತದಲ್ಲಿ ಹಲಸೂರಿನಿಂದ ಸಿರ್ಸಿ ವೃತ್ತ ಹಾಗೂ ಲಾಲ್‌ಬಾಗ್ ಮುಖ್ಯರಸ್ತೆಯಿಂದ ಅರಮನೆ ರಸ್ತೆವರೆಗೆ ವಾಹನ ನಿಲುಗಡೆಗೆ ಲಭ್ಯವಿರುವ ಸ್ಥಳಾವಕಾಶ ಹಾಗೂ ಭವಿಷ್ಯದ ಬೇಡಿಕೆ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ದಪಡಿಸಿದೆ.

ವರದಿಯಂತೆ ನಗರದಲ್ಲಿನ ಕೇಂದ್ರ ಪ್ರದೇಶದ ಪ್ರಮುಖ ರಸ್ತೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಷ್ಠಿತ ರಸ್ತೆಗಳಲ್ಲಿ 'ಪ್ಯಾಕೇಜ್- ಎ' ಅಡಿಯಲ್ಲಿ 'ಪ್ರೀಮಿಯಮ್ ಪಾರ್ಕಿಂಗ್', ವಾಣಿಜ್ಯ ಪ್ರದೇಶದ ರಸ್ತೆಗಳಲ್ಲಿ 'ಪ್ಯಾಕೇಜ್-ಬಿ' ಅಡಿ 'ಬಿಸಿನೆಸ್ ಪಾರ್ಕಿಂಗ್' ಹಾಗೂ ಪ್ರಮುಖ ರಸ್ತೆಗಳಲ್ಲಿ 'ಪ್ಯಾಕೇಜ್-ಸಿ' ಅಡಿ 'ಸಾಮಾನ್ಯ ಪಾರ್ಕಿಂಗ್'ಗೆ ಅವಕಾಶ ಕಲ್ಪಿಸಲಿದೆ. ಪಾರ್ಕಿಂಗ್ ಬಗ್ಗೆ ಮತ್ತಷ್ಟು ಮಾಹಿತಿ.

ಸಮಯ ಆಧಾರದಂತೆ ಶುಲ್ಕ

ಸಮಯ ಆಧಾರದಂತೆ ಶುಲ್ಕ

ಸಮಯದ ಆಧಾರದ ಮೇಲೆ ಪಾರ್ಕಿಂಗ್ ಶುಲ್ಕ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ. ಅದರರಂತೆ, ಮೊದಲ ಗಂಟೆಗೆ ದ್ವಿಚಕ್ರ ವಾಹನಕ್ಕೆ 5ರೂ. ಹಾಗೂ ಕಾರುಗಳಿಗೆ 15 ರೂ. ಕನಿಷ್ಠ ಶುಲ್ಕ ವಿಧಿಸಲಾಗಿದೆ. 'ಪೀಕ್ ಅವರ್', ಸಾಮಾನ್ಯ ಅವಧಿ ಹಾಗೂ ರಜಾದಿನ/ ಸಾಮಾನ್ಯ ದಿನಗಳಲ್ಲಿ ಏಕ ರೂಪದ ಶುಲ್ಕ ವಿಧಿಸಲಾಗುತ್ತದೆ.

ಯಾವುದಕ್ಕೆ ವಿನಾಯಿತಿ

ಯಾವುದಕ್ಕೆ ವಿನಾಯಿತಿ

ನಗರದ ಹೃದಯ ಭಾಗದ ರಸ್ತೆಗಳಲ್ಲಿ ಖಾಸಗಿ ಟ್ರಕ್, ಬಸ್ ನಿಲುಗಡೆಗೆ ಅವಕಾಶವಿಲ್ಲ. ನಿಲುಗಡೆ ಅನಿವಾರ್ಯವಾದರೆ ಕಾರ್ ನಿಲುಗಡೆಗೆ ವಿಧಿಸುವ ಶುಲ್ಕದ ಮೂರರಷ್ಟು ಶುಲ್ಕ ಪಾವತಿ ಮಾಡಬೇಕಿದೆ. ಸರ್ಕಾರಿ / ಪಾಲಿಕೆ ವಾಹನ, ಬಿಎಂಟಿಸಿ/ ಕೆಎಸ್‌ಆರ್ ಟಿಸಿ ಬಸ್‌ಗಳಿಗೆ ಪಾರ್ಕಿಂಗ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ತಂತ್ರಜ್ಞಾನದ ಪ್ರಯೋಗ

ತಂತ್ರಜ್ಞಾನದ ಪ್ರಯೋಗ

ಪಾರ್ಕಿಂಗ್ ವ್ಯವಸ್ಥೆ ನಿರ್ವಹಿಸಲು 24 ಗಂಟೆ ಕಾರ್ಯನಿರ್ವಹಿಸುವ ಅತ್ಯಾಧುನಿಕ ಕೇಂದ್ರ ಸ್ಥಾಪಿಸಲು ಉದ್ದೇಶಿಸಿಸಲಾಗಿದೆ. ಈ ಕೇಂದ್ರ ಎಲ್ಲ ಪಾರ್ಕಿಂಗ್ ಸ್ಥಳಗಳ ಮೇಲ್ವಿಚಾರಣೆಯನ್ನು ಒಂದೇ ಕಡೆ ನಡೆಸಲಿದೆ. ಪಾರ್ಕಿಂಗ್ ಜಾಗಗಳಲ್ಲಿ ಸ್ಥಳಾವಕಾಶ ಕುರಿತ ಮಾಹಿತಿ ಪಡೆಯಲು 'ಡಿಜಿಟಲ್ ಡಿಸ್‌ಪ್ಲೇ ಬೋರ್ಡ್' ಅಳವಡಿಕೆ ಮಾಡಲು ಚಿಂತಿಸಲಾಗಿದೆ.

ಪಾರ್ಕಿಂಗ್ ಶುಲ್ಕದ ಪ್ರತಿ ಗಂಟೆಗೆ

ಪಾರ್ಕಿಂಗ್ ಶುಲ್ಕದ ಪ್ರತಿ ಗಂಟೆಗೆ

ನಗರದ ವಿವಿಧ ಪ್ರದೇಶದಲ್ಲಿ ಗಂಟೆಗಳ ಲೆಕ್ಕದಲ್ಲಿ ವಾಹನಗಳಿಗೆ ವಿಧಿಸುವ ಪಾರ್ಕಿಂಗ್ ಶುಲ್ಕಗಳ ವಿವರ ಹೀಗಿದೆ. ದ್ವಿಚಕ್ರ ವಾಹನಗಳಿಗೆ 15, 10, 5 ರೂ. ಮತ್ತು ಕಾರುಗಳಿಗೆ 30, 20, 15 ರೂ. ಶುಲ್ಕ ವಿಧಿಸಲಾಗಿದೆ. ಆದರೆ ಸೈಕಲ್ ಗಳಿಗೆ ಪಾರ್ಕಿಂಗ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಪ್ಯಾಕೇಜ್ ಎ ರಸ್ತೆಗಳು

ಪ್ಯಾಕೇಜ್ ಎ ರಸ್ತೆಗಳು

ಎಂ.ಜಿ.ರಸ್ತೆ, ಅವೆನ್ಯೂ ರಸ್ತೆ, ಎಸ್.ಸಿ.ರಸ್ತೆ, ರೇಸ್‌ಕೋರ್ಸ್ ಲೂಪ್ ರಸ್ತೆ, ರೇಸ್‌ಕೋರ್ಸ್ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ರಾಜಾರಾಂ ಮೋಹನ್ ರಾಯ್ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಕಸ್ತೂರಬಾ ರಸ್ತೆ, ರೆಸಿಡೆನ್ಸಿ ರಸ್ತೆ, ಲಾಲ್‌ಬಾಗ್ ರಸ್ತೆ, ಎನ್.ಆರ್.ರಸ್ತೆ.

ಬಿ ಪ್ಯಾಕೇಜ್ ರಸ್ತೆಗಳು

ಬಿ ಪ್ಯಾಕೇಜ್ ರಸ್ತೆಗಳು

ಎಸ್.ಪಿ.ರಸ್ತೆ, ಧನ್ವಂತ್ರಿ ರಸ್ತೆ, ನೃಪತುಂಗ ರಸ್ತೆ, ಕಸ್ತೂರ ಬಾ ರಸ್ತೆ, ಅರಮನೆ ರಸ್ತೆ, ಎಸ್.ಸಿ.ರಸ್ತೆ, ಶೇಷಾದ್ರಿ ರಸ್ತೆ, ಡಿಸ್ಟ್ರಿಕ್ಟ್ ಆಫೀಸ್ ರಸ್ತೆ, ಕಾಳಿದಾಸ ಮಾರ್ಗ ರಸ್ತೆ, ಲಿಂಕ್ ರಸ್ತೆ, ರಾಮಚಂದ್ರ ರಸ್ತೆ, ರೈಲ್ವೆ ಸಮಾನಾಂತರ ರಸ್ತೆ, ಅರಮನೆ ಕ್ರಾಸ್ ರಸ್ತೆ, ಮೇನ್ ಗಾರ್ಡ್ ಕ್ರಾಸ್ ರಸ್ತೆ, ಲೇಡಿ ಕರ್ಜನ್ ರಸ್ತೆ, ಕ್ರೆಸೆಂಟ್ ರಸ್ತೆ, ಮಿಲ್ಲರ್ಸ್‌ ರಸ್ತೆ, ಮಿಲ್ಲರ್ಸ್‌ ಟ್ಯಾಂಕ್ ಬಂಡ್ ರಸ್ತೆ, ಅಲಿ ಅಸ್ಗರ್ ರಸ್ತೆ, ಸೇಂಟ್ ಜಾನ್ಸ್ ಚರ್ಚ್ ರಸ್ತೆ, ವೀರಪಿಳ್ಳೈ ರಸ್ತೆ, ಡಿಸ್ಪೆನ್ಸರಿ ರಸ್ತೆ, ಗಂಗಾಧರ ಚೆಟ್ಟಿ ರಸ್ತೆ, ವುಡ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ ಮುಂತಾದವು

ಪ್ಯಾಕೇಜ್ ಸಿ ರಸ್ತೆಗಳು

ಪ್ಯಾಕೇಜ್ ಸಿ ರಸ್ತೆಗಳು

ಬಿ.ವಿ.ಕೆ.ಅಯ್ಯಂಗಾರ್ ರಸ್ತೆ, ಚಿಕ್ಕಪೇಟೆ ಮುಖ್ಯರಸ್ತೆ, ಎ.ಎಸ್.ಚಾರ್ ಸ್ಟ್ರೀಟ್, ಬಳೇಪೇಟೆ ಮುಖ್ಯರಸ್ತೆ, ಬನ್ನಪ್ಪ ಪಾರ್ಕ್ ರಸ್ತೆ, ಕಬ್ಬನ್‌ಪೇಟೆ ಮುಖ್ಯರಸ್ತೆ, ಹಾಸ್ಪಿಟಲ್ ರಸ್ತೆ, ಕೆ.ವಿ.ಟೆಂಪಲ್ ಸ್ಟ್ರೀಟ್, ಕಿಲಾರಿ ಸ್ಟ್ರೀಟ್, ನಗರ್ತಪೇಟೆ ರಸ್ತೆ, ಪೊಲೀಸ್ ಸ್ಟೇಷನ್ ರಸ್ತೆ, ಆರ್.ಟಿ.ಸ್ಟ್ರೀಟ್, ಸುಲ್ತಾನ್‌ಪೇಟೆ ಮುಖ್ಯರಸ್ತೆ, ಸ್ಯಾಂಕಿ ರಸ್ತೆ, 8ನೇ ಮುಖ್ಯರಸ್ತೆ, ಜಸ್ಮಾದೇವಿ ಭವನ ರಸ್ತೆ, ಎಡ್ವರ್ಡ್ ರಸ್ತೆ, ಯೂನಿಯನ್ ಸ್ಟ್ರೀಟ್, ಅಣ್ಣಸ್ವಾಮಿ ರಸ್ತೆ, ತಿಮ್ಮಯ್ಯ ರಸ್ತೆ, ಬ್ರಾಡ್ ವೇ ರಸ್ತೆ, ಸೇಂಟ್ ಜಾನ್ಸ್ ರಸ್ತೆ, ಆಸ್ಬರ್ನ್ ರಸ್ತೆ, ಶಿವಾಜಿ ರಸ್ತೆ, ಚಿಕ್ಕಬಜಾರ್ ರಸ್ತೆ.

English summary
Parking fees are likely to be back in three months. The Bruhat Bengaluru Mahanagara Palike (BBMP) plans to charge Rs 15, Rs 10 and Rs 5 for two-wheelers on roads categorized as A, B and C, while cars will have to pay Rs 30, Rs 20 and Rs 10, respectively. The proposal will be discussed at the council meeting on Wednesday, September 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X