ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಯುಸಿ ಪ್ರವೇಶ: ಈ ಬಾರಿ ಕಾಮರ್ಸ್‌ಗೆ ಡಿಮ್ಯಾಂಡ್‌

By Ashwath
|
Google Oneindia Kannada News

ಬೆಂಗಳೂರು, ಮೇ.14: ಎಸ್‌ಎಸ್‌ಎಲ್‌ಸಿಯಲ್ಲಿ ಶೇ.85ಕ್ಕಿಂತ ಕಡಿಮೆ ಅಂಕಗಳಿಸಿ ಪಿಯುಸಿಯಲ್ಲಿ ವಾಣಿಜ್ಯ ವಿಭಾಗವನ್ನು ಪ್ರಖ್ಯಾತ ಕಾಲೇಜು‌ಗಳಲ್ಲಿ ಆರಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದ ವಿದ್ಯಾರ್ಥಿ‌ಗಳು ಕೂಡಲೇ ಮೂರು ನಾಲ್ಕು ಕಾಲೇಜುಗಳಲ್ಲಿ ಪ್ರವೇಶಕ್ಕೆ ಅರ್ಜಿ‌ ಪಡೆಯುವುದು ಒಳ್ಳೇಯದು.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಎರಡು ದಿನ ಹಿಂದೆ ಪ್ರಕಟಗೊಂಡಿದ್ದು ಕಾಲೇಜು‌ಗಳು ಪಿಯು ಪ್ರವೇಶ ಅರ್ಜಿ‌ಯನ್ನು ವಿತರಿಸಲು ಆರಂಭಿಸಿವೆ. ಬಹುತೇಕ ಕಾಲೇಜುಗಳು ಸೋಮವಾರದಿಂದಲೇ ಅರ್ಜಿ‌ ವಿತರಣೆ ಮಾಡುತ್ತಿದ್ದು ಕಳೆದ ವರ್ಷ‌ದಂತೆ ಈ ಬಾರಿ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಬರತೊಡಗಿದೆ.

ಈ ಹಿಂದಿನ ವರ್ಷ‌ಗಳಲ್ಲಿ ಕಾಲೇಜುಗಳು ವಿಜ್ಞಾನ ಪ್ರವೇಶಕ್ಕೆ ಮಾಡಲಾಗುತ್ತಿದ್ದ ಅಂಕ ಕಟ್‌ ಆಫ್‌ ಪ್ರಕ್ರಿಯೆಯನ್ನು ಈ ಬಾರಿ ವಾಣಿಜ್ಯ ವಿಭಾಗಕ್ಕೂ ಅನ್ವಯಿಸುವ ಸಾಧ್ಯತೆಯಿದೆ. ಹೀಗಾಗಿ ಇನ್ನು ಮೂರು ನಾಲ್ಕು ದಿನಗಳಲ್ಲಿ ಪ್ರವೇಶ ಅರ್ಜಿ‌ ವಿತರಣೆ ಕಾರ್ಯ‌ ಮುಗಿಯಲಿದ್ದು ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ವಾಣಿಜ್ಯ ವಿಭಾಗದಲ್ಲಿ ಪ್ರವೇಶ ಸಿಗಲು ಕಷ್ಟ ಎಂದು ಭಾವಿಸುವವರು ಹೆಚ್ಚುವರಿಯಾಗಿ ಬೇರೆ ಕಾಲೇಜುಗಳಲ್ಲಿ ಅರ್ಜಿ‌ ಪಡೆಯುವುದು ಉತ್ತಮ.

puc admission

ವಾಣಿಜ್ಯ ವಿಭಾಗಕ್ಕೆ ಬೇಡಿಕೆ ಹೆಚ್ಚಾಗಲು ಕಾರಣವೇನು?
ಮೂರು ನಾಲ್ಕು ವರ್ಷ‌ಗಳ ಹಿಂದೆ ವಿಜ್ಞಾನ ವಿಭಾಗಕ್ಕೆ ಭಾರೀ ಬೇಡಿಕೆ ಇತ್ತು. ಈಗಲೂ ವಿಜ್ಞಾನಕ್ಕೆ ಬೇಡಿಕೆ ಇದ್ದರೂ ಈ ಹಿಂದಿನಂತಿದ್ದ ಬೇಡಿಕೆ ಇಲ್ಲ. ಪ್ರಸ್ತುತ ಕಾಮರ್ಸ್‌‌ಗೆ ಈ ವರ್ಷ‌ ವಿಪರೀತ ಬೇಡಿಕೆ ಹೆಚ್ಚಿದ್ದು, ಮಧ್ಯಮ ವರ್ಗದ ಪೋಷಕರು ಎಸ್‌ಎಸ್‌ಎಲ್‌ಸಿಯಲ್ಲಿ ಶೇ.90ರಷ್ಟು ಅಂಕಗಳಿಸಿದ ವಿದ್ಯಾರ್ಥಿ‌ಗಳನ್ನು ಕಾಮರ್ಸ್‌ಗೆ ಸೇರಿಸಲು ಮುಂದಾಗುತ್ತಿದ್ದಾರೆ.[ಹಳ್ಳಿ ಡಾಕ್ಟರ್‌ ಆಗಬೇಕೆಂದರೆ ಏನು ಮಾಡ್ಬೇಕು?]

ಈ ವರ್ಷ ಸಿಇಟಿ ಗೊಂದಲ ಆರಂಭವಾಗಿದೆ, ಮುಂದಿನ ವರ್ಷ‌ ಸರ್ಕಾರ ಖಾಸಗಿಯವರ ಒತ್ತಡಕ್ಕೆ ಮಣಿದು ಏನಾದರೂ ಹೊಸ ರೀತಿಯ ಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಜಾರಿಗೆ ತಂದರೆ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಯಾಗಲಿದೆ. ಒಂದೊಂದು ಕಾಲೇಜುಗಳು ಒಂದೊಂದು ಕೋರ್ಸ್‌ಗಳಿಗೆ ಬೇರೆ ಬೇರೆ ರೀತಿಯ ಶುಲ್ಕವನ್ನು ನಿಗದಿ ಪಡಿಸಲಿರುವುದನ್ನು ಮನಗಂಡಿರುವ ಪೋಷಕರು ವಿಜ್ಞಾನ ವಿಭಾಗಕ್ಕೆ ಮಕ್ಕಳನ್ನು ಸೇರಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.[ಸಿಇಟಿ ಹೊಸ ಕಾಯ್ದೆ ಬಂದರೆ ಯಾರಿಗೆ ಲಾಭ? ಯಾರಿಗೆ ನಷ್ಟ?]

ನಮ್ಮ ಕಾಲೇಜಿನಲ್ಲಿ ಕಳೆದ ವರ್ಷದಿಂದ ವಾಣಿಜ್ಯ ವಿಭಾಗಕ್ಕೆ ಸೇರುವ ವಿದ್ಯಾರ್ಥಿ‌ನಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವರ್ಷ‌ವು ಬಹಳಷ್ಟು ಸಂಖ್ಯೆ ಪೋಷಕರು ತಮ್ಮ ಮಕ್ಕಳನ್ನು ವಾಣಿಜ್ಯ ವಿಭಾಗಕ್ಕೆ ಸೇರಿಸಲು ಮುಂದಾಗುತ್ತಿದ್ದಾರೆ. ಇನ್ನು ಮೂರು ದಿನದಲ್ಲಿ ಸಂಪೂರ್ಣ‌‌ ಚಿತ್ರಣ ಸಿಗಲಿದೆ ಎಂದು ಜಯನಗರದ ಎನ್‌ಎಂಕೆ.ಆರ್‌ವಿ ಕಾಲೇಜಿನ ಆಡಳಿತ ವಿಭಾಗದ ಅಧಿಕಾರಿ ಕೆ.ಎಸ್‌ ಇಂದ್ರಕುಮಾರ್‌ ಒನ್‌ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಬೆಂಗಳೂರು ಹೊರತುಪಡಿಸಿ ದಕ್ಷಿಣ ಕನ್ನಡ, ಮೈಸೂರಿನ ಕಾಲೇಜು‌ಗಳಲ್ಲೂ ವಾಣಿಜ್ಯ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಕೆಲವು ವಿದ್ಯಾರ್ಥಿ‌‌ಗಳ ಪೋಷಕರಿಗೆ ಅರ್ಜಿ‌ ವಿತರಿಸುತ್ತಿರುವ ಕಾಲೇಜು ಅಧಿಕಾರಿಗಳು ಅಲ್ಲೇ ಬೇರೆ ಕಾಲೇಜಿನಲ್ಲೂ ವಾಣಿಜ್ಯ ವಿಭಾಗಕ್ಕೆ ಅರ್ಜಿ‌ ಹಾಕಿ ಎಂದು ಸಲಹೆ ನೀಡುತ್ತಿದ್ದಾರೆ.

English summary
Parents seek interested to join their childrens in to commerce section .Less demand in science. More and more students being interested in a career in economics and accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X