ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಕ್ ಪರ ಘೋಷಣೆ; ಅಮೂಲ್ಯ ತಂದೆ-ತಾಯಿ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಬೆಂಗಳೂರಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೂಗಿರುವ ಯುವತಿ ಅಮೂಲ್ಯ ಲಿಯೋನಾಳನ್ನು ಅವಳ ತಂದೆ ತಾಯಿ ವಿರೋಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಿವಪುರ ಬಳಿ ಅಮೂಲ್ಯಳ ತಂದೆ ತಾಯಿ ವಾಸವಿದ್ದಾರೆ. ಈ ಕುರಿತು ಖಾಸಗಿ ಸುದ್ದಿವಾಹಿನಿಗಳ ಜೊತೆ ಮಾತನಾಡಿರುವ ಅವಳ ತಂದೆ, 'ಮಗಳನ್ನು ಹೊಡೆದು ಕೈ ಕಾಲು ಮುರಿಯಿರಿ, ಅವಳು ಮಾಡಿದ್ದು ತಪ್ಪು. ಜಾಮೀನು ನೀಡಬೇಡಿ' ಎಂದು ತೀವ್ರವಾಗಿ ಖಂಡಿಸಿದ್ದಾರೆ.

Breaking ಬೆಂಗಳೂರಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದ ಯುವತಿBreaking ಬೆಂಗಳೂರಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದ ಯುವತಿ

ಅವರ ತಾಯಿ ಲವೀನಾ ಅವರು ಕೂಡ ಮಗಳ ಘೋಷಣೆಯನ್ನು ವಿರೋಧಿಸಿದ್ದು, 'ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಅವಳು ಭಾರತದ ಪರ ವಹಿಸಿ ಮಾತನಾಡಿ, ಏನೋ ಹೇಳುವಾಗ ಆ ರೀತಿ ಹೇಳಿರಬಹುದು' ಎಂದು ಗೊಂದಲದ ಹೇಳಿಕೆ ನೀಡಿದ್ದಾರೆ.

ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅಮೂಲ್ಯ ತಂದೆ ವ್ಹಾಜಿ
ಕೆಲ ವರ್ಷಗಳ ಹಿಂದೆ ನಡೆದ ಅಪ್ಪಿಕೊ ಚಳವಳಿಯಲ್ಲಿ ಭಾಗಿಯಾಗಿದ್ದರು.
ಮಲೆನಾಡಿನಲ್ಲಿ ನಡೆದ ಅಪ್ಪಿಕೋ ಚಳವಳಿ ಯಲ್ಲಿ ಭಾಗಿಯಾಗಿದ್ದರು.

Parents Reaction On Pakistan Zindabadh Sloganist Amulya Leona

ಅಮೂಲ್ಯಳ ವಾಜಿ ಮನೆಗೆ ಕೆಲ ಹಿಂದೂ ಸಂಘಟನೆಗಳು ನುಗ್ಗಿ ತಂದೆ ತಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಅವಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದು, ಕೆಲಕಾಲ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ನಂತರ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

English summary
Parents Reaction On Pakistan Zindabadh Sloganist Amulya Leona. Left Party Member Amulya Leona Said this slogan infront ao mp owaisi at freedom park bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X