ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರೀನ್‌ವುಡ್ ಶಾಲೆಯ ರೆಕಾರ್ಡೆಡ್ ಆನ್‌ಲೈನ್ ಕ್ಲಾಸ್‌ಗೆ ಪೋಷಕರ ವಿರೋಧ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ಎಲ್ಲಾ ಶಾಲೆಗಳಲ್ಲಿ ಆನ್‌ಲೈನ್ ಹಾಗೂ ಆಫ್‌ಲೈನ್ ತರಗತಿ ಎರಡನ್ನೂ ನಡೆಸಬಹುದು ಎಂದು ಹೇಳಿರುವ ರಾಜ್ಯ ಸರ್ಕಾರದ ಸೂಚನೆ ಕೆಲವು ಗೊಂದಲಗಳನ್ನು ಸೃಷ್ಟಿಸಿದೆ.

ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆ ಅಥವಾ ಮನೆಯಲ್ಲಿಯೇ ಪಾಠ ಕೇಳಿಸಬೇಕೆ ಎಂಬುದು ಪೋಷಕರಿಗೆ ಬಿಟ್ಟಿದ್ದು. ವಿದ್ಯಾರ್ಥಿಗಳು ಶಾಲೆಗೂ ಹಾಜರಾಗಬಹುದು, ಮನೆಯಲ್ಲಿಯೂ ಪಾಠ ಕೇಳುವ ವ್ಯವಸ್ಥೆ ಕಲ್ಪಿಸಲಾಗಿದೆ.

ಆದರೆ ಸರ್ಜಾಪುರ ರಸ್ತೆಯಲ್ಲಿರುವ ಗ್ರೀನ್‌ವುಡ್ ಹೈಸ್ಕೂಲ್ ವಿದ್ಯಾರ್ಥಿಗಳ ಪೋಷಕರ ಆಕ್ರೋಶಕ್ಕೆ ಕಾರಣವಾಗಿರುವುದು ಬೇರೊಂದು ವಿಷಯ, ಶಾಲೆಗೆ ಬಾರದ ಮಕ್ಕಳಿಗೆ ಆನ್‌ಲೈನ್‌ನಲ್ಲಿ ನೇರ ಪಾಠವನ್ನು ಮಾಡುವುದಾಗಿ ಹೇಳಲಾಗಿತ್ತು. ಆದರೆ ಇದೀಗ ರೆಕಾರ್ಡೆಡ್ ವಿಡಿಯೋಗಳನ್ನು ಕಳುಹಿಸಲಾಗುತ್ತಿದೆ.

Parents Opposes Greenwood High School Offers Online Classes Through Recorded Sessions

ಪೋಷಕರ ಬಳಿ ಚರ್ಚಿಸದೇ ಶಾಲೆಯು ಈ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ, ಏಕಾಏಕಿ ಪ್ರಾಂಶುಪಾಲರಾದ ಅಲಾಯ್ಸಿಯಸ್ ರೆಕಾರ್ಡಿಂಗ್ ತರಗತಿಗಳನ್ನು ಶುರು ಮಾಡುವ ಕುರಿತು ಪೋಷಕರಿಗೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಪಾಠವನ್ನು ಕಲಿಯಲು ರೆಕಾರ್ಡೆಡ್ ತರಗತಿಗಳು ಉತ್ತಮ ಮಾಧ್ಯಮವಲ್ಲ ಎಂದು 500ಕ್ಕೂ ಹೆಚ್ಚು ಪೋಷಕರು ಹೈಸ್ಕೂಲ್ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.

ಪೋಷಕರು ಹೇಳುವುದೇನು?
-ಆನ್‌ಲೈನ್ ತರಗತಿಗಳಲ್ಲಿ ಮಕ್ಕಳನ್ನು ಮ್ಯೂಟ್‌ನಲ್ಲಿ ಇರಿಸಲಾಗುತ್ತದೆ. ತರಗತಿಯಲ್ಲಿ ಭಾಗವಹಿಸಲು ಅವಕಾಶವನ್ನು ಕೂಡ ನೀಡುವುದಿಲ್ಲ, ಮಕ್ಕಳು ಪ್ರತಿ ಶಿಕ್ಷಕರನ್ನು ಅನ್‌ಮ್ಯೂಟ್ ಮಾಡಲು ವಿನಂತಿಸಬೇಕಾಗುತ್ತದೆ

-ಕೇವಲ ಆಫ್‌ಲೈನ್‌ಲ್ಲಿ ಮಾತ್ರ ಮಕ್ಕಳ ಹಾಜರಾತಿ ತೆಗೆದುಕೊಳ್ಳಲಾಗುತ್ತಿದೆ, ಆನ್‌ಲೈನ್‌ನಲ್ಲಿ ಹಾಜರಾತಿ ತೆಗೆದುಕೊಳ್ಳುವುದಿಲ್ಲ

-ಆನ್‌ಲೈನ್‌ನಲ್ಲಿ ಮಕ್ಕಳು ಬ್ಲ್ಯಾಕ್‌ಬೋರ್ಡ್ ನೋಡಲು ಸಾಧ್ಯವಾಗುತ್ತಿಲ್ಲ

-ತರಗತಿಗಳಲ್ಲಿ ಶಿಕ್ಷಕರು ಮಾಸ್ಕ್‌ ಇಲ್ಲದೆ ಬರುವ ಕಾರಣ ಮಕ್ಕಳಿಗೆ ಅಪಾಯವನ್ನು ಹೆಚ್ಚಿಸುತ್ತದೆ ಹೀಗಾಗಿ ಆನ್‌ಲೈನ್ ತರಗತಿಗೆ ಕಳುಹಿಸುತ್ತಿದ್ದೇವೆ.

ಪೋಷಕರ ಒತ್ತಾಯವೇನು?
-ಆನ್‌ಲೈನ್ ತರಗತಿಗಳನ್ನು ಪುನರಾರಂಭಿಸಿ, ಹೈಬ್ರಿಡ್ ಮಾದರಿ ಅಭಿವೃದ್ಧಿಪಡಿಸಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಿ.

-ಆಫ್‌ಲೈನ್ ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್ ವಿದ್ಯಾರ್ಥಿಗಳು ಭಾಗವಹಿಸುವಂತೆ ನೋಡಿಕೊಳ್ಳಬೇಕು
-ಮಕ್ಕಳಿಗೆ ಲಸಿಕೆ ಸಿಗುವವರೆಗೂ ಆನ್‌ಲೈನ್ ತರಗತಿಗಳನ್ನು ನಡೆಸಬೇಕು

-ಮಕ್ಕಳನ್ನು ಒಂದೇ ರೀತಿ ನೋಡಿ, ಶಾಲೆಗೆ ಬರುವವರು ಅಥವಾ ಆನ್‌ಲೈನ್ ತರಗತಿ ಕೇಳುವವರು ಇಬ್ಬರನ್ನೂ ಒಂದೇ ರೀತಿ ನೋಡಿ.

-ಮಕ್ಕಳು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹ ನೀಡಿ ಎಂದು ಕೇಳಿದ್ದಾರೆ.

Recommended Video

ಡೊಳ್ಳು ಹೊಟ್ಟೆ ಇರೋ ಪೊಲೀಸರಿಗೆ ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ | Oneindia Kannada

English summary
Greenwood High school in Sarjapur the parents are up in arms after the school decided to conduct online classes through recorded sessions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X