ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಸ್ಥಾನಕ್ಕೆ ಪಟ್ಟು: ಸಿಎಂ ಮನೆ ಮುಂದೆ ಆಕಾಂಕ್ಷಿಗಳ ಪರೇಡ್

|
Google Oneindia Kannada News

ಬೆಂಗಳೂರು, ಜನವರಿ 17: ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಕೊನೆಯ ಹಂತದ ಕಸರತ್ತು ಆರಂಭವಾಗಿದೆ.

ಜನವರಿ 18ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕಕ್ಕೆ ಆಗಮಿಸುತ್ತಿರುವ ಕಾರಣ ಕಸರತ್ತು ಮುಂದುವರೆದಿದೆ.

ಕೊನೆಯ ಕಸರತ್ತು: ಸಿಎಂ ಭೇಟಿ ಬಳಿಕ ತ್ಯಾಗದ ಬಗ್ಗೆ ಎಂಟಿಬಿ ಮಾತುಕೊನೆಯ ಕಸರತ್ತು: ಸಿಎಂ ಭೇಟಿ ಬಳಿಕ ತ್ಯಾಗದ ಬಗ್ಗೆ ಎಂಟಿಬಿ ಮಾತು

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಈ ಬಾರಿಯಾದರೂ ತಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.

ಸಿಎಂ ನಿವಾಸಕ್ಕೆ ಉಮೇಶ್ ಕತ್ತಿ, ಚಂದ್ರಪ್ಪ, ಎಂಟಿಬಿ ಭೇಟಿ

ಸಿಎಂ ನಿವಾಸಕ್ಕೆ ಉಮೇಶ್ ಕತ್ತಿ, ಚಂದ್ರಪ್ಪ, ಎಂಟಿಬಿ ಭೇಟಿ

ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ನಿವಾಸಕ್ಕೆ ಹೊಳಲ್ಕೆರೆ ಶಾಸಕರಾದ ಚಂದ್ರಪ್ಪ , ಉಮೇಶ್ ಕತ್ತಿ, ಮಾಜಿ ಸಚಿವ ಎಂಟಿಬಿ ನಾಗರಾಜ್ ಸೇರಿದಂತೆ ಮತ್ತಿತರರು ಭೇಟಿ ನೀಡಿದ್ದಾರೆ. ಅಮಿತ್ ಶಾ ಅನುಮತಿ ನೀಡಿದರೆ ಯಾವುದೇ ಸಂದರ್ಭದಲ್ಲಾದರೂ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇರುವುದರಿಂದ ಸಂಪುಟಕ್ಕೆ ಸೇರ್ಪಡೆಯಾಗಲು ಹಲವರು ನಾನಾ ಕಸರತ್ತು ನಡೆಸುತ್ತಿದ್ದಾರೆ.

ಕೊನೆಯ ಕ್ಷಣದಲ್ಲಿ ಅವಕಾಶ ಕೈತಪ್ಪಿತ್ತು

ಕೊನೆಯ ಕ್ಷಣದಲ್ಲಿ ಅವಕಾಶ ಕೈತಪ್ಪಿತ್ತು

ಮೊದಲನೇ ಬಾರಿ ಸಂಪುಟ ವಿಸ್ತರಣೆಯಾದಾಗ ಕೆಲವರಿಗೆ ಕೊನೆ ಕ್ಷಣದಲ್ಲಿ ಕೈ ತಪ್ಪಿದ್ದರ ಹಿನ್ನೆಲೆಯಲ್ಲಿ 2ನೇ ಬಾರಿಯ ವಿಸ್ತರಣೆಯಲ್ಲಾದರೂ ತಮಗೆ ಅವಕಾಶ ಸಿಗಬಹುದೇ ಎಂದು ಕಾದು ಕುಳಿತಿದ್ದಾರೆ.

ಚುನಾವಣೆಯಲ್ಲಿ ಗೆದ್ದವರಿಗೆ ಶಾಸಕ ಸ್ಥಾನ

ಚುನಾವಣೆಯಲ್ಲಿ ಗೆದ್ದವರಿಗೆ ಶಾಸಕ ಸ್ಥಾನ

ಉಪಚುನಾವಣೆಯಲ್ಲಿ ಗೆದ್ದಿರುವ 12 ಶಾಸಕರ ಪೈಕಿ 11 ಮಂದಿಗಾದರೂ ಸಚಿವ ಸ್ಥಾನ ಕಲ್ಪಿಸಲು ಬಿಎಸ್‍ವೈ ಪಣ ತೊಟ್ಟಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲೇಬೇಕೆಂದು ಹಠಕ್ಕೆ ಬಿದ್ದಿರುವ ಅವರು ಯಾವುದೇ ಕಾರಣಕ್ಕೂ ವಚನಭ್ರಷ್ಟನಾಗಲಾರೆ ಎಂದ ಕಡ್ಡಿ ಮುರಿದಂತೆ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಸಂಪುಟ ವಿಸ್ತರಣೆಗೆ ಪ್ರಯತ್ನ

ಸಂಪುಟ ವಿಸ್ತರಣೆಗೆ ಪ್ರಯತ್ನ

ಶತಾಯಗತಾಯ ಭಾನುವಾರದೊಳಗೆ ಸಂಪುಟ ವಿಸ್ತರಣೆ ಮಾಡಬೇಕೆಂದು ಬಿಎಸ್‍ವೈ ಹಠಕ್ಕೆ ಬಿದ್ದಿದ್ದಾರೆ. ನಾಳೆ ಅಮಿತ್ ಷಾ ಮಾತುಕತೆಗೆ ಸಮಯ ನಿಗದಿಪಡಿಸಿದರೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಇಲ್ಲದಿದ್ದರೆ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಲಿರುವ ಜೆ.ಪಿ.ನಡ್ಡ ಅವರು ಅಧಿಕಾರ ಸ್ವೀಕರಿಸಿದ ಬಳಿಕವೇ ಈ ಪ್ರಕ್ರಿಯೆ ಆರಂಭವಾಗಲಿದೆ.

English summary
Parade of Minister Aspirants Infront Of CM House has begun, Umesh Katti, MBT Nagaraj Meet CM Yediyurappa Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X