ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗಶಂಕರದಲ್ಲಿ ಬುಧವಾರ 'ಪಂಪಭಾರತ ನಾಟಕ'

|
Google Oneindia Kannada News

ಬೆಂಗಳೂರು, ಮಾರ್ಚ್ 06: ಸಮುದಾಯ ಬೆಂಗಳೂರು 'ಪಂಪ ಭಾರತ' ನಾಟಕವನ್ನು ಮಾರ್ಚ್ 7 ರಂದು ರಂಗ ಶಂಕರದಲ್ಲಿ ಪ್ರಸ್ತುತ ಪಡಿಸುತ್ತಿದೆ.

ಆದಿಕವಿ ಪಂಪನ ಶಾಸನ ಹುಡುಕ ಹೊರಟ ಸಂಶೋಧಕರ ಸತ್ಯ ಶೋಧನೆಗೆ ಸೆಡ್ಡು ಹೊಡೆದಂತೆ ಸಂಘಪರಿವಾರದವರು ಎದುರಾಗಿ ಪ್ರತಿರೋಧ ಒಡ್ಡುತ್ತಾರೆ. ಹೀಗೆ ವರ್ತಮಾನದಲ್ಲಿ ನಿಂತು ಮಾತನಾಡುವ ಪಾತ್ರಗಳ ಮಧ್ಯೆ ಭೂತಕಾಲದ ಪಾತ್ರಗಳು ಶಾಸನಗಳಿಂದ ಎದ್ದು ಬಂದು ಪ್ರಸ್ತುತ ಸಾಮಾಜಿಕ, ರಾಜಕೀಯ, ಧಾರ್ಮಿಕ ಸಾಂಸ್ಕೃತಿಕ ಒಳನೋಟಗಳನ್ನು ಭೇದಿಸುತ್ತಾ ಹೋಗುತ್ತವೆ.

ರಂಗಶಂಕರದಲ್ಲಿ ತುಘಲಕ್- ನಾಟಕದ್ದೇ ಕಾರುಬಾರುರಂಗಶಂಕರದಲ್ಲಿ ತುಘಲಕ್- ನಾಟಕದ್ದೇ ಕಾರುಬಾರು

ಸಾವಿರಾರು ವರ್ಷಗಳ ಹಿಂದೆ ಬ್ರಾಹ್ಮಣನಾಗಿದ್ದ ಪಂಪ ಕವಿ ಜೈನ ಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ಅರಸನಾದ ಅರಕೇಸರಿಯ ಹಂಗಿನ ಆಶ್ರಯ ಪಡೆದು ಮಹಾಭಾರತದಂಥ ಪುರಾಣ ಕಾವ್ಯವನ್ನು ಪುನರ್ವಿಮರ್ಶಿಸಿ ಅರ್ಜುನನ್ನು ಅರಿಕೇಸರಿಗೆ ಸಮೀಕರಿಸಿ ಚಿತ್ರಿಸುತ್ತಾನೆ. ಕರ್ಣ ಸುಯೋಧನರ ಮಿತ್ರತ್ವಕ್ಕೆ ಹೊಸ ಮೌಲ್ಯ ಪ್ರತಿಷ್ಠಾಪಿಸುತ್ತಾನೆ. ಇಂತಹ ಪ್ರಸಂಗಗಳುಳ್ಳ ನಾಟಕ ಕನ್ನಡ ರಂಗಭೂಮಿಯಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Pampa Bharatha kannada play at Rangashankara

ಕೆವೈ ನಾರಾಯಣಸ್ವಾಮಿ ರಚಿತ, ಪ್ರಮೋದ್ ಶಿಗ್ಗಾಂವ್ ನಿರ್ದೇಶನದ ಪಂಪಭಾರತ ನಾಟಕವು ರಂಗಶಂಕರಲ್ಲಿ ಮತ್ತೊಮ್ಮೆ ಪ್ರದರ್ಶನ ಕಾಣುತ್ತಿದೆ. ಸಮುದಾಯ ತಂಡವು ಮಾರ್ಚ್ 7 ರಂದು ಸಂಜೆ 7.30 ಕ್ಕೆ ಪ್ರದರ್ಶಿಸುತ್ತಿದೆ.

ನಾಟಕ : ಪಂಪ ಭಾರತ
ರಚನೆ : ಡಾ. ಕೆ.ವೈ. ನಾರಾಯಣ ಸ್ವಾಮಿ
ನಿರ್ದೇಶನ : ಪ್ರಮೋದ್ ಶಿಗ್ಗಾಂವ್
ದಿನಾಂಕ, ಸಮಯ : ಮಾರ್ಚ್ 07, ಸಂಜೆ 7.30
ಸ್ಥಳ-ರಂಗಶಂಕರ

English summary
Bengaluru Samudaya is presenting 'Pampa Bharata' play at Rangashankara, Bangalore on march 7, at 7.30pm
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X