ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಪಾಕಿಸ್ತಾನ್ ಜಿಂದಾಬಾದ್' ಎಂದವಳಿಗೆ ವೇದಿಕೆಯಲ್ಲೇ ಓವೈಸಿ ಪ್ರತಿಕ್ರಿಯೆ ಏನು?

|
Google Oneindia Kannada News

ಬೆಂಗಳೂರು ಫೆಬ್ರವರಿ 20: ಬಹಿರಂಗ ಸಭೆಯಲ್ಲಿ ಎಡಪಂಥೀಯ ಚಿಂತಕಿ ಯುವತಿಯೊಬ್ಬಳು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ಘಟನೆ ಬೆಂಗಳೂರಿನಲ್ಲಿ ಗುರುವಾರ ಸಂಜೆ ನಡೆದಿದೆ. ಈ ವೇಳೆ ಸಭೆಯಲ್ಲಿದ್ದ ಸಂಸದ ಹಾಗೂ ಮುಸ್ಲಿಂ ಮುಖಂಡ ಅಸಾದುದ್ದೀನ್ ಓವೈಸಿ ಆ ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಯುವತಿ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಿದ್ದಳು. ಒಟ್ಟು ಮೂರು ಸಾರಿ ಕೂಗಿದಳು. ಈ ವೇಳೆ ಮದ್ಯಪ್ರವೇಶಿಸಿ ಓವೈಸಿ, ಯುವತಿಯನ್ನು ತಡೆದು, ಏನು ಕೂಗುತ್ತಿರುವೆಯಾ? ನಿಲ್ಲಿಸು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Breaking ಬೆಂಗಳೂರಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದ ಯುವತಿBreaking ಬೆಂಗಳೂರಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದ ಯುವತಿ

ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್ ಆರ್ ಸಿ ವಿರೋಧಿಸಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಹಿಂದೂ-ಮುಸ್ಲಿಂ-ಸಿಖ್- ಈಸಾಯಿ ಫೆಡರೇಷನ್ ಬೆಂಗಳೂರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿವಾದ ಸೃಷ್ಟಿಯಾಗಿದೆ. ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪಾಕಿಸ್ತಾನಕ್ಕೆ ಜಿಂದಾಬಾದ್

ಪಾಕಿಸ್ತಾನಕ್ಕೆ ಜಿಂದಾಬಾದ್

ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ವೇದಿಕೆ ಆಗಮಿಸುತ್ತಿದ್ದಂತೆ ವೇದಿಕೆ ಮೇಲೆ ಆಸನರಾಗಿದ್ದ ಅಮೂಲ್ಯ ಲಿಯೋನ್ ಎಂಬಾಕೆ ಮೈಕ್ ಕೈಗೆತ್ತಿಕೊಂಡು ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು‌ ಮೂರು ಘೋಷಣೆ ಕೂಗುತ್ತಿದ್ದಂತೆ ಕೂಡಲೇ ಒವೈಸಿ‌ ಮೈಕ್ ಕಸಿದುಕೊಳ್ಳಲು ಪ್ರಯತ್ನಿಸಿದರು.

ಬಲವಂತದಿಂದ ಮೈಕ್ ಕಸಿದುಕೊಳ್ಳಲಾಯಿತು

ಬಲವಂತದಿಂದ ಮೈಕ್ ಕಸಿದುಕೊಳ್ಳಲಾಯಿತು

ಇಷ್ಡಾದರೂ ಮಾತನಾಡುವುದನ್ನು‌ ಮುಂದುವರೆಸಿದ ಅಮೂಲ್ಯನನ್ನು ಬಲವಂತದಿಂದ ಮೈಕ್ ಕಸಿದುಕೊಳ್ಳಲಾಯಿತು. ಈ ವೇಳೆ ಸ್ಥಳದಲ್ಲಿ‌ ನುಕು ನುಗ್ಗಲು‌ ಅರಂಭವಾಯಿತು. ತದ ನಂತರ ಪೊಲೀಸರು ಮಧ್ಯಪ್ರವೇಶಿಸಿ ಉದ್ವಿಗ್ನ ವಾತಾವಾರಣಕೆಯನ್ನು ವಶಕ್ಕೆ ಪಡೆದುಕೊಂಡರು. ಸ್ಥಳದಲ್ಲಿ ನಿರ್ಮಾಣವಾಗಿದೆ.

ಸಂಘಟಕರ ವಿರೋಧ

ಸಂಘಟಕರ ವಿರೋಧ

ಕಾರ್ಯಕ್ರಮದಲ್ಲಿ ಯುವತಿ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿಕೆ ನೀಡುತ್ತಿದ್ದಂತೆ ವೇದಿಕೆಯಲ್ಲಿದ್ದ ಇತರ ಮುಸ್ಲಿಂ ಮುಖಂಡರು ತೀವ್ರ ಕೆಂಡ ಕಾರಿದರು. ಯುವತಿಯನ್ನು ತರಾಟೆಗೆ ತೆಗೆದುಕೊಂಡು ವೇದಿಕೆಯಿಂದ ಕೆಳಗಿಳಿಸಿದರು. ನಾವು ಅಮೂಲ್ಯಳನ್ನು ವೇದಿಕೆಗೆ ಕರೆದಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ

ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ

ಇನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಮೂವರು ಯುವಕರು ಘೋಷಣೆ ಕೂಗಿದ್ದರು. ಕೆಎಲ್‌ಇ ಇಂಜನಿಯರಿಂಗ್ ಕಾಲೇಜಿನ ಮೂವರು ಮುಸ್ಲಿಂ ಯುವಕರು ಪಾಕ್ ಪರ ಘೋಷಣೆ ಕೂಗಿದ್ದರು. ಆ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

English summary
Pakistan Jindabadh Slogan In Bengaluru. MP Owaisi Objection. Left Party Member Amulya Leona Said this slogan infront ao mp owaisi at freedom park bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X