ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸೋಂಕಿತರ ಸುಲಿಗೆ ಮಾಡುವ ದಂಧೆಗೆ ಬ್ರೇಕ್ ಹಾಕಲಿದೆಯೇ ಓಯೊ ಕೇರ್?

|
Google Oneindia Kannada News

ಬೆಂಗಳೂರು, ಮೇ. 07: ಕೊರೊನಾ ಎರಡನೇ ಅಲೆ ನಾನಾ ಅವಾಂತರ ಸೃಷ್ಟಿಸಿದೆ. ದಿನಕ್ಕೆ 50 ಸಾವಿರ ಕೊರೊನಾ ಪಾಸಿಟೀವ್ ಪ್ರಕರಣಗಳು ವರದಿಯಾಗುತ್ತಿವೆ. ಇನ್ನು ಕೊರೊನಾ ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ. ಆಕ್ಸಿಜನ್ ಲಭ್ಯವಿಲ್ಲ. ಐಸಿಯು ವೆಂಟಿಲೇಟರ್ ಕೇಳುವಂತೆಯೇ ಇಲ್ಲ. ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಬಹುತೇಕ ಖಾಸಗಿ ಆಸ್ಪತ್ರೆಗಳು ಸಾಮಾನ್ಯ ಕೊವಿಡ್ ಪಾಸಿಟಿವ್ ರೋಗಿಗಳಿಂದಲೂ ಲಕ್ಷಾಂತರ ಸುಲಿಗೆ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿವೆ.

ಇಂಥ ಸಂಕಷ್ಟ ಸಂದರ್ಭದಲ್ಲಿ ಓಯೋ ಮಹತ್ವದ ನಿರ್ಧಾರ ಪ್ರಕಟಿಸಿದೆ. ಕೊವಿಡ್ ಪಾಸಿಟಿವ್ ಸೋಂಕಿತರಿಗೆ ಅತಿ ಕಡಿಮೆ ದರದಲ್ಲಿ ಪ್ರತಿಷ್ಠಿತ ಹೋಟೆಲ್‌ಗಳಲ್ಲಿಯೇ "ಕೋವಿಡ್ ಕೇರ್ ಕ್ವಾರೆಂಟೈನ್ ರೂಮ್" ಸೌಲಭ್ಯ ಕಲ್ಪಿಸಿದೆ. ಐಸಲೋಷನ್‌ಗೆ ಒಳಗಾಗುವ ರೋಗಿಗಳಿಗೆ ಮೂರು ಹೊತ್ತಿನ ಊಟದ ಜತೆಗೆ ಪ್ರಾಥಮಿಕ ಚಿಕಿತ್ಸೆ ಸೌಲಭ್ಯ ಕಲ್ಪಿಸಿದೆ.

ಕರ್ನಾಟಕದಲ್ಲಿ ಲಾಕ್‌ಡೌನ್, ಜಿಲ್ಲೆಯಿಂದ ಜಿಲ್ಲೆಗೆ ಓಡಾಟ ನಿಷೇಧ: ಯಡಿಯೂರಪ್ಪ ಕರ್ನಾಟಕದಲ್ಲಿ ಲಾಕ್‌ಡೌನ್, ಜಿಲ್ಲೆಯಿಂದ ಜಿಲ್ಲೆಗೆ ಓಡಾಟ ನಿಷೇಧ: ಯಡಿಯೂರಪ್ಪ

ಲಾಕ್ ಡೌನ್ ನಿಯಮ ಜಾರಿಯಿಂದಾಗಿ ಹೋಟೆಲ್ ಗಳು ಕೂಡ ನಷ್ಟ ಅನುಭವಿಸುತ್ತಿವೆ. ಖಾಲಿಯಿರುವ ಹೋಟೆಲ್‌ಗಳ ಬೆಡ್‌ಗಳನ್ನು ಕೋವಿಡ್ ಕೇರ್ ಬೆಡ್‌ಗಳನ್ನಾಗಿ ಪರಿವರ್ತಿಸಿ ಓಯೋ ಸಂಸ್ಥೆ ಇದೀಗ ಕೋವಿಡ್ ರೋಗಿಗಳಿಗೆ ಕ್ವಾರೆಂಟೈನ್ ಬೆಡ್ ಸೌಲಭ್ಯ ಒದಗಿಸಿದೆ. ಇದಕ್ಕಾಗಿ ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿ ಮತ್ತಿತರ ನಗರಗಳಲ್ಲಿ ಹೋಟೆಲ್ ಗಳನ್ನೇ ಕೋವಿಡ್ ಕೇರ್ ಸೆಂಟರ್‌ಗಳನ್ನಾಗಿ ಪರಿವರ್ತಿಸಿದೆ.

OYO care service : OYO Launched Covid care bed facilities in Hotels

ದಿನಕ್ಕೆ 2 ಸಾವಿರ ರೂ. ಗೆ ರೂಮ್ ಜತೆಗೆ ಮೂರು ಹೊತ್ತು ಗುಣಮಟ್ಟದ ಊಟದ ಜತೆಗೆ, ವೈದ್ಯರ ಮತ್ತು ನರ್ಸ್‌ಗಳಿಂದ ಪ್ರಾಥಮಿಕ ಆರೈಕೆ ಕೂಡ ಸಿಗದಿದೆ. ಆದರೆ, ಇದು ಆಕ್ಸಿಜನ್, ವೆಂಟಿಲೇಟರ್ ಅಗತ್ಯ ಇರುವವರಿಗೆ ಇಲ್ಲಿ ಬೆಡ್ ನೀಡಲಾಗುವುದಿಲ್ಲ. ಕೇವಲ ಪಾಸಿಟಿವ್ ಕಾಣಿಸಿಕೊಂಡು "ಕ್ವಾರೆಂಟೈನ್ " ಮೂಲಕ ಚೇತರಿಸಿಕೊಳ್ಳುವವರಿಗೆ ಅಷ್ಟೇ ಇಲ್ಲಿ ಬೆಡ್ ನೀಡಲಾಗುತ್ತಿದೆ ಎಂದು ಓಯೋ ಸಂಸ್ಥೆಯ ಪ್ರತಿನಿಧಿ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಓಯೋ ಸಂಸ್ಥೆ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಒದಗಿಸಲು, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಗೀವ್ ಇಂಡಿಯಾ ಸಂಸ್ಥೆ ಆನ್‌ಲೈನ್‌ನಲ್ಲಿ ದೇಣಿಗೆ ಸಂಗ್ರಹಿಸುವ ಅಭಿಯಾನ ಸಂಗ್ರಹಿಸಿತ್ತು. ಇದರೊಂದಿಗೂ ಕೈ ಜೋಡಿಸಿರುವ ಓಯೋ ಸಂಸ್ಥೆ ತನ್ನ ಗ್ರಾಹಕರಿಂದ ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕೊರೊನಾ ಸೋಂಕಿತರ ಕ್ಷೇಮಾಭಿವೃದ್ಧಿಗಾಗಿ ಕಳೆದ ಒಂದು ವರ್ಷದಿಂದ 220 ಕೋಟಿ ರೂ. ದೇಣಿಗೆ ಸಂಗ್ರಹಿಸಿರುವ ಗೀವ್ ಇಂಡಿಯಾ ಸಂಸ್ಥೆ ಮುಂಚೂಣಿಯಲ್ಲಿದೆ.

OYO care service : OYO Launched Covid care bed facilities in Hotels


ಉಚಿತ ಬೆಡ್ ಸೌಲಭ್ಯ ? ದೇಶದ ಪ್ರಮುಖ ನಗರಗಳಲ್ಲಿ ಓಯೋ ಕೇರ್ ಸೆಂಟರ್ ತೆರೆಯಲಾಗಿದ್ದು, ಬಡವರಿಗೆ ಉಚಿತವಾಗಿ ಬೆಡ್ ಸೌಲಭ್ಯ ಸಿಗಲಿದೆ. ಕೊರೊನಾ ಸೋಂಕಿಗೆ ಒಳಗಾಗುವ ಬಡವರಿಗೆ ಉಚಿತವಾಗಿ ಓಯೋ ಕೇರ್‌ನಲ್ಲಿ ಸೌಲಭ್ಯ ಕಲ್ಪಿಸುವ ಸಂಬಂಧ ಗೀವ್ ಇಂಡಿಯಾ ಸಂಸ್ಥೆ ಈಗಾಗಲೇ ಹತ್ತು ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಲು ಮುಂದಾಗಿದೆ. ಈ ಕುರಿತು ಓಯೋ ಕೇರ್ ಪ್ರಾಪರ್ಟಿಸ್ ಜತೆ ಗೀವ್ ಇಂಡಿಯಾ ಒಡಂಬಡಿಕೆ ಮಾಡಿಕೊಂಡಿದೆ. ಗೀವ್ ಇಂಡಿಯಾ ಸಂಗ್ರಹ ಮಾಡುತ್ತಿರುವ ಹತ್ತು ಕೋಟಿ ರೂ. ದೇಣಿಗೆ ಹಣದಲ್ಲಿ ಬಡವರಿಗೆ ಓಯೋ ಕೇರ್ ಕ್ವಾರೆಂಟೈನ್ ಬೆಡ್ ಸೌಲಭ್ಯ ಕಲ್ಪಿಸುವುದಾಗಿ ಪ್ರಕಟಿಸಿದೆ.

OYO care service : OYO Launched Covid care bed facilities in Hotels

ಓಯೋ ಕೇರ್‌ಗೆ ಕರೆ ಮಾಡಿ ಒನ್ಇಂಡಿಯಾ ಖಚಿತ ಪಡಿಸಿಕೊಂಡಿತು. ಪ್ರತಿ ದಿನಕ್ಕೆ 2 ಸಾವಿರ ರೂ. ಮೊತ್ತಕ್ಕೆ ಮೂರು ಹೊತ್ತು ಊಟದ ಜತೆಗೆ, ಐಸಲೋಟೆಟ್ ಬೆಡ್‌ನ್ನು ಸಹ ನೀಡಲಾಗುತ್ತದೆ. ಆಸ್ಪತ್ರೆಗಳಿಗೆ ಸಮೀಪ ಇರುವ ಹೋಟೆಲ್‌ಗಳನ್ನು ಮಾತ್ರ ಕೋವಿಡ್ ಕೇರ್ ಸೆಂಟರ್‌ಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. ಸದ್ಯ ಓಯೋ ಕಲ್ಪಿಸಿರುವ ಈ ಸೌಲಭ್ಯ ಆಸ್ಪತ್ರೆಗಳಿಗೆ ಹೋಲಿಸಿದರೆ, ಮಧ್ಯಮ ವರ್ಗದ ಜನರಿಗೆ ತುಂಬಾ ಅನುಕೂಲವಾಗಬಹುದು. ಕೊರೊನಾ ಪಾಸಿಟಿವ್ ಸೋಂಕಿತರಿಗೆ ಭೀತಿ ಹುಟ್ಟಿಸಿ ದಿನಕ್ಕೆ ಸಾವಿರ ಗಟ್ಟಲೇ ಶುಲ್ಕ ವಿಧಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಕೋವಿಡ್ ಕೇರ್ ಸೆಂಟರ್‌ಗಳಿಗೆ ಓಯೋ ಕೇರ್ ಸೆಂಟರ್ ದೊಡ್ಡ ಪೈಪೋಟಿ ನೀಡುವ ಸಾಧ್ಯತೆಯಿದೆ. ಇದರಿಂದ ಸಹಜವಾಗಿ ಖಾಸಗಿ ಆಸ್ಪತ್ರೆಗಳ ಕೋವಿಡ್ ಕೇರ್ ಸೆಂಟರ್‌ಗಳ ಚಿಕಿತ್ಸೆ ವೆಚ್ಚ ಕಡಿಮೆಯಾಗುವ ಸಾಧ್ಯತೆಯಿದೆ.

Recommended Video

' ಜನತಾ ಕರ್ಫ್ಯೂ ಸರಿಯಾದ ರೀತಿಯಲ್ಲಿ ಪಾಲನೆಯಾಗುತ್ತಿಲ್ಲ,' ಸಿಎಂ ಅಸಮಾಧಾನ | Oneindia Kannada

English summary
OYO care properties launched the "oyo care" quarantine bed facilities for covid-19 positive patients in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X