ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುರ್ತು ಸೌಲಭ್ಯಕ್ಕೆ 'ಆಕ್ಸಿಜನ್ ಆನ್ ವೀಲ್ಸ್' ಬಸ್ ಸೇವೆಗೆ ಬಿಎಂಟಿಸಿ ಚಾಲನೆ

|
Google Oneindia Kannada News

ಬೆಂಗಳೂರು, ಮೇ 13: ರಾಜ್ಯದಲ್ಲಿ ಕೊರೊನಾ ವೈರಸ್ 2ನೇ ಅಲೆ ಜೋರಾಗಿದ್ದು, ಇದರಿಂದ ರಾಜಧಾನಿ ಬೆಂಗಳೂರು ನಗರದಲ್ಲಿ ಹೆಚ್ಚು ಸಾವು-ನೋವು ಸಂಭವಿಸುತ್ತಿವೆ.

Recommended Video

ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ 'ಮೊಬೈಲ್‌ ಆಕ್ಸಿಜನ್‌ ಘಟಕ'... ಇದು ಹೇಗೆ ಕಾರ್ಯನಿರ್ವಹಿಸುತ್ತೇ? ಇಲ್ಲಿದೆ ಡೀಟೈಲ್ಸ್‌ | Oneindia Kannada

ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರಿಂದ, ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮತ್ತು ವೆಂಟಿಲೇಟರ್ ಸಮಸ್ಯೆಗಳು ಎದುರಾಗುತ್ತಿವೆ.

ಆದರೆ, ಬೆಂಗಳೂರು ನಗರ ಸೋಂಕಿತರಿಗೆ ಆಕ್ಸಿಜನ್ ಸಮಸ್ಯೆ ನೀಗಿಸಲು ಆಕ್ಸಿಜನ್ ಬಸ್ ಬಂದಿದೆ. ತುರ್ತು ಸಂದರ್ಭದಲ್ಲಿ ತಕ್ಷಣವೇ ಸೋಂಕಿತರ ಜೀವ ಉಳಿಸಲಿದೆ. ಅದರಂತಯೇ "ಆಕ್ಸಿಜನ್ ಆನ್ ವೀಲ್ಸ್' ಎಂಬ ವಿನೂತನ ಯೋಜನೆಯನ್ನು ಬಿಎಂಟಿಸಿ ಜಾರಿಗೆ ತಂದಿದೆ.

Oxygen On Wheels Bus Service Launches To An Emergency Oxygen Facility In Bengaluru

ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಕೊರತೆ ನೀಗಿಸಲು ಫೌಂಡೇಶನ್ ಆಫ್ ಇಂಡಿಯಾ ಎಂಬ ಸ್ವಯಂ ಸೇವಾ ಸಂಸ್ಥೆಯ ಸಹಭಾಗಿತ್ವದಲ್ಲಿ, ಬಿಎಂಟಿಸಿ ಸಂಸ್ಥೆಯು ಪ್ರಾಯೋಗಿಕವಾಗಿ, ಬಸ್ಸಿನಲ್ಲಿ 'ಆಕ್ಸಿಜನ್ ಆನ್ ವೀಲ್ಸ್' ಎಂಬ ಹೆಸರಿನಲ್ಲಿ ಮೊಬೈಲ್ ಆಕ್ಸಿಜನ್ ಘಟಕವನ್ನು ಇಂದಿನಿಂದ (ಗುರುವಾರ) ಪ್ರಾರಂಭಿಸಿದೆ. ಕೋವಿಡ್ ರೋಗಿಗಳಿಗೆ ಈ ಬಸ್ಸಿನಲ್ಲಿ ಆಕ್ಸಿಜನ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.

Oxygen On Wheels Bus Service Launches To An Emergency Oxygen Facility In Bengaluru

ಆಕ್ಸಿಜನ್ ಬಸ್ಸಿನಲ್ಲಿ ಏನೆಲ್ಲಾ ಇರುತ್ತದೆ

ಆಕ್ಸಿಜನ್ ಆನ್ ವೀಲ್ಸ್' ಎಂಬ ಹೆಸರಿನ ಬಸ್ಸಿನಲ್ಲಿ ಭರ್ತಿಯಾದ ಸಿಲಿಂಡರ್ ಇದ್ದು, ಅದಕ್ಕೆ ಬೇಕಾದ ಉಪಕರಣಗಳಿವೆ. ಬಸ್ಸಿನ ಸೀಟಿನಲ್ಲಿ ಸೋಂಕಿತ ಆರಾಮವಾಗಿ ಕುಳಿತುಕೊಳ್ಳಲು ಒಂದು ದಿಂಬು ಇಡಲಾಗಿದೆ.

Oxygen On Wheels Bus Service Launches To An Emergency Oxygen Facility In Bengaluru

ಕೊರೊನಾ ಸೋಂಕಿತರು ಬಂದ ತಕ್ಷಣ ನೀಡಲು ಫೇಸ್ ಶಿಲ್ಡ್ (ಮಾಸ್ಕ್) ಅನ್ನು ಸಹ ಬಸ್ಸಿನಲ್ಲಿ ಇರುತ್ತದೆ. ಬಿಎಂಟಿಸಿಯ ಈ ಬಸ್ಸಿನಲ್ಲಿ ಒಂದೇ ಬಾರಿಗೆ ಹತ್ತಕ್ಕೂ ಹೆಚ್ಚು ಜನ ಸೋಂಕಿತರು ಕುಳಿತುಕೊಳ್ಳಬಹುದು. ಪ್ರತಿ ಸೀಟಿಗೂ ಸಣ್ಣ ಸಣ್ಣ ಸಿಲಿಂಡರ್ ಅಳವಡಿಸಿದ್ದು, ಅಲ್ಲಿ ಆಕ್ಸಿಜನ್ ಅವಶ್ಯವಿದ್ದರೆ ಅದರ ಬಳಕೆ ಮಾಡಿಕೊಳ್ಳಬಹುದು.

English summary
BMTC has implemented an innovative project called 'Oxygen on Wheels' that will instantly save the lives of the Covid-19 patients in an emergency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X