ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಲಿ ನಿವೇಶನದೊಳಗಿನ ತ್ಯಾಜ್ಯ ಕ್ಲೀನ್ ಮಾಡಲು 15 ದಿನಗಳ ಗಡುವು

|
Google Oneindia Kannada News

ಬೆಂಗಳೂರು, ಮೇ 17: ಬೆಂಗಳೂರಿನ ಖಾಲಿ ನಿವೇಶನದಲ್ಲಿ ಬಿದ್ದಿರುವ ತ್ಯಾಜ್ಯವನ್ನು ಇನ್ನು 15 ದಿನದೊಳಗೆ ಕ್ಲೀನ್ ಮಾಡದಿದ್ದರೆ ದಂಡ ಕಟ್ಟಲು ಸಿದ್ಧರಾಗಿ ಎಂದು ಬಿಬಿಎಂಪಿಯು ನಿವೇಶನ ಮಾಲಿಕರಿಗೆ ಎಚ್ಚರಿಕೆ ನೀಡಿದೆ.

ಬೆಂಗಳೂರಲ್ಲಿ ಒಟ್ಟು 2,98,017 ಖಾಲಿ ನಿವೇಶನಗಳಿವೆ. ಇದನ್ನು ಖರೀದಿ ಮಾಡಿರುವ ಮಾಲೀಕರು, ಅವುಗಳನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲ. ಇದರಿಂದ ಅವು ಕಸದ ಗುಮಡಿಗಳಾಗಿ ಮಾರ್ಪಟ್ಟಿದ್ದು ಸೊಳ್ಳೆಗಳ ಉತ್ಪತ್ತಿಯಾಗುತ್ತಿವೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಹಸಿರು ನ್ಯಾಯಾಧೀಕರಣ ಪೀಠದ ನಿರ್ದೇಶನದಂತೆ ರಚಿತವಾಗಿರುವ ರಾಜ್ಯ ಮಟ್ಟದ ಸಭೆಯಲ್ಲಿ ಖಾಲಿ ನಿವೇಶನ, ಕಸ, ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿ ಶುಚಿತ್ವ ಕಾಪಾಡಿಕೊಳ್ಳದ ಮಾಲೀಕರಿಗೆ ಬಿಬಿಎಂಪಿ ದಂಡ ವಿಧಿಸುಔಮತೆ ಸೂಚಿಸಲಾಗಿತ್ತು.

ಶಿವಾಜಿನಗರದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಒತ್ತುವರಿ ತೆರವುಶಿವಾಜಿನಗರದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಒತ್ತುವರಿ ತೆರವು

ಖಾಲಿ ನಿವೇಶನ ಹೊಂದಿರುವ ಮಾಲೀಕರು 15 ದಿನಗಳೊಳಗೆ ಕಸ, ಅನುಪಯುಕ್ತ ಗಿಡಗಳನ್ನು ತೆರವುಗೊಳಿಸಬೇಕು. ನೋಟಿಸ್ ಅನ್ನು ನೋಂದಾಯಿತ ಸ್ವೀಕೃತಿ ಅಂಚೆ ಮೂಲಕ ರವಾನಿಸಲಾಗುತ್ತದೆ.

Owners must maintain vacant sites, or pay penalty

ಜೊತೆಗೆ ಒಂದು ಪ್ರತಿಯನ್ನು ಸ್ವತ್ತಿನ ಮೇಲೆ ಅಂಟಿಸಿ ಮಹಜರು ಮಾಡಿ ಫೋಟೊ ತೆಗೆಯಲಾಗುತ್ತದೆ. ಸ್ವತ್ತಿನ ಮಾಲೀಕರು ನೋಟಿಸ್‌ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿದ್ದಲ್ಲಿ ಪೌರ ಕಾರ್ಮಿಕರು, ಸಿಲ್ಟ್ ಆಂಡ್ ಟ್ರಾಕ್ಟರ್‌ಗಳಿಂದ ಗಿಡಗಂಟಿಗಳನ್ನು ಒಮ್ಮೆ ತೆರವುಗೊಳಿಸುತ್ತಾರೆ. ಇದಕ್ಕೆ ತಗಲುವ ವೆಚ್ಚ 25 ಸಾವಿರ ರೂವನ್ನು ದಂಡದ ರೂಪದಲ್ಲಿ ಸ್ವೀಕರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Owners of vacant sites, who have allowed the dumping of mixed waste and construction debris on the premises, will now have to pay a penalty for their apathy and lack of civic sense.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X