ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನಿಲ್ದಾಣಗಳ ಹೋಟೆಲ್‌, ಅಂಗಡಿಗಳಿಗೆ ಬೀಗ

|
Google Oneindia Kannada News

ಬೆಂಗಳೂರು, ಜುಲೈ 9: ರಾಜ್ಯದಲ್ಲಿ ಇರುವ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನಿಲ್ದಾಣಗಳ ಹೋಟೆಲ್‌, ಅಂಗಡಿಗಳಿಗೆ ಬೀಗ ಹಾಕಲಾಗುತ್ತಿದೆ. ಈ ಮಾಹಿತಿಯನ್ನು ಕರ್ನಾಟಕ ಹೊಟೇಲ್ ಮತ್ತು ರೆಸ್ಟೋರೆಂಟ್ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ತಿಳಿಸಿದ್ದಾರೆ.

Recommended Video

WHO ಹಾಡಿ ಹೊಗಳಿದ ಚೀನಾ | Oneindia Kannada

ಕೊರೊನಾ ಲಾಕ್‌ಡೌನ್‌ನಿಂದ ಅಂಗಡಿ ಹಾಗೂ ಹೋಟೆಲ್‌ ಮಾಲೀಕರಿಗೆ ಬಹಳ ನಷ್ಟವಾಗಿದೆ. ಬಸ್‌ಗಳ ಸಂಖ್ಯೆ ಕಡಿಮೆಯಾಗಿದೆ. ಪ್ರಯಾಣಿಕರು ಸಂಖ್ಯೆ ಸಹ ಇಳಿದಿದೆ. ಇದರಿಂದ ಬಿಎಂಟಿಸಿ ನಿಲ್ದಾಣಗಳ ಹೋಟೆಲ್‌ ಹಾಗೂ ಅಂಗಡಿಗಳ ವ್ಯಾಪಾರ ಕುಸಿದಿದೆ.

ಬಿಎಂಟಿಸಿಯ 32 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕುಬಿಎಂಟಿಸಿಯ 32 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು

ವ್ಯಾಪಾರ ಇಲ್ಲದೆ, ಬಾಡಿಗೆ ಕಟ್ಟಲು ಕಷ್ಟವಾಗಿದ್ದು, ಮಾಲೀಕರು ಕಂಗಾಲಾಗಿದ್ದಾರೆ. ಹೀಗಾಗಿ, ತಮ್ಮ ಅಂಗಡಿಗಳಿಗೆ ಮುಚ್ಚಲು ನಿರ್ಧಾರ ಮಾಡಿದ್ದಾರೆ. ''ಸರ್ಕಾರ ಎರಡು ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ಬಾಡಿಗೆ ಸಂಗ್ರಹಕ್ಕೆ ವಿನಾಯಿತಿ ನೀಡಿತ್ತು. ಆದರೆ ಈಗ ಅವರು ಬಾಡಿಗೆಗೆ ಒತ್ತಾಯಿಸುತ್ತಿದ್ದಾರೆ'' ಎಂದು ಕರ್ನಾಟಕ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ನ ಖಜಾಂಚಿ ರಾಘವೇಂದ್ರ ಕೆ ತಿಳಿಸಿದ್ದಾರೆ.

Owners Decided To Shut Shops Hotels At Ksrtc And Bmtc Bus Stations

ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಸಾರಿಗೆ ಕ್ಷೇತ್ರದ ಸದಸ್ಯರೊಂದಿಗೆ ಸಭೆ ನಡೆಸಿದ್ದು, ಯಾವುದೇ ಪ್ರಯೋಜನ ಆಗಿಲ್ಲವಂತೆ. ಹೀಗಾಗಿ, ಮಾಲೀಕರು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನಿಲ್ದಾಣಗಳಲ್ಲಿ ಇರುವ ಹೋಟೆಲ್‌, ಅಂಗಡಿಗಳನ್ನು ಮುಚ್ಚುತ್ತಿದ್ದಾರೆ.

English summary
Owners decided to shut shops hotels at KSRTC and BMTC bus station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X