ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಡರಾತ್ರಿಯ ಧಾರಾಕಾರ ಮಳೆ, ಜಲಾವೃತವಾದ ಬೆಂಗಳೂರು ರಸ್ತೆಗಳು

|
Google Oneindia Kannada News

ಬೆಂಗಳೂರು,ಆಗಸ್ಟ್‌. 4: ಬುಧವಾರ ರಾತ್ರಿ ಸುರಿದ ಮಳೆಗೆ ಬೆಂಗಳೂರಿನ ಹಲವು ಬಡಾವಣೆ ರಸ್ತೆಗಳು ಜಲಾವೃತವಾಗಿದ್ದವು. ನಗರದ ಹಲವು ಕೆರೆಗಳು ತುಂಬಿ ಕೋಡಿ ಬಿದ್ದು ಅಕ್ಕಪಕ್ಕದ ಬಡಾವಣೆಗಳಿಗೆ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ತವಾಯಿತು.

ರಾತ್ರಿ ನಗರದಲ್ಲಿ ಸುಮಾರು 104 ಮಿ. ಮೀ.ನಷ್ಟು ಮಳೆಯಾಗಿದೆ. ಹಲವಾರು ಪ್ರದೇಶಗಳಲ್ಲಿ ಮೊಣಕಾಲು ಆಳದ ನೀರು ತುಂಬಿತ್ತು. ಎಡೆಬಿಡದೇ ಸುರಿದ ಮಳೆಯಿಂದ 1,000ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಶುದ್ಧ ಕುಡಿಯುವ ನೀರಿಗೂ ಕೊರತೆ ಉಂಟಾಗಿದೆ. ಅಲ್ಲದೇ ನಾಗರಿಕರಿಗೆ ಸರಣಿ ಸಂಕಟಗಳನ್ನು ಉಂಟುಮಾಡಿದೆ.

ಮದ್ದೂರು ಕೆರೆ ಕೋಡಿ ಒಡೆದು ಪ್ರವಾಹ; ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ಮದ್ದೂರು ಕೆರೆ ಕೋಡಿ ಒಡೆದು ಪ್ರವಾಹ; ಬೆಂಗಳೂರು-ಮೈಸೂರು ಹೆದ್ದಾರಿ ಬಂದ್

ಬೆಂಗಳೂರು ನಗರ ವ್ಯಾಪ್ಯಿಯಲ್ಲಿರುವ ಬಹುತೇಕ ಎಲ್ಲಾ 201 ಕೆರೆಗಳು ತುಂಬಿ ಹರಿದಿದ್ದವು. ಹೆಚ್ಚುವರಿಯಾಗಿ ಸುರಿದ ಮಳೆ ನೀರಿನ್ನು ಹೊರಹಾಕಲು ನಗರದ ಚರಂಡಿಗಳು ಅಸಮರ್ಪಕವಾಗಿದ್ದರಿಂದ ಹೆಚ್ಚಿನ ಸಂಖ್ಯೆಯ ರಸ್ತೆಗಳು ಹೊಳೆಗಳಾಗಿ ಮಾರ್ಪಟ್ಟು, ಕೆಲವೆಡೆ ಸಂಚಾರ ಸ್ಥಗಿತಗೊಂಡಿದೆ. ದೀರ್ಘವಾಗಿ ಸುರಿದ ಮಳೆಗೆ ಹಲವಾರು ಮರದ ರೆಂಬೆ, ಕೊಂಬೆಗಳು ಮರಿದಿದ್ದವು ತಕ್ಷಣಕ್ಕೆ ಇವುಗಳ ವಿಲೇವಾರಿಯಾಗಿಲ್ಲ.

ಬಿಬಿಎಂಪಿ ಅಧಿಕಾರಿಗಳು ಹೇಳುವಂತೆ ಸಾಯಿ ಲೇಔಟ್‌ನಲ್ಲಿ 270 ನಿವಾಸಿಗಳು, ಪೈ ಲೇಔಟ್‌ನ 14 ನಿವಾಸಿಗಳು ಮತ್ತು ನಾಗಪ್ಪ ರೆಡ್ಡಿ ಲೇಔಟ್‌ನಲ್ಲಿ 12 ನಿವಾಸಿಗಳ ಮನೆಗಳಿಗೆ ನೀರು ನುಗ್ಗಿದೆ. ಸುಮಾರು 250 ನಿವಾಸಿಗಳು ಇರುವ ಎಚ್‌ಬಿಆರ್ ಲೇಔಟ್‌ನಲ್ಲಿ ಪರಿಸ್ಥಿತಿ ಭಿನ್ನವಾಗಿರಲಿಲ್ಲ.

ಅಕಾಲಿಕ ಮಳೆ; ಈಶಾನ್ಯ ಪ್ರದೇಶದ ಕೃಷಿಯ ಮೇಲೆ ಪರಿಣಾಮಅಕಾಲಿಕ ಮಳೆ; ಈಶಾನ್ಯ ಪ್ರದೇಶದ ಕೃಷಿಯ ಮೇಲೆ ಪರಿಣಾಮ

ನಗರದಲ್ಲಿ ಸುರಿಯುತ್ತಿರುವ ಮಳೆ ಟ್ರಾಫಿಕ್ ಸಮಸ್ಯೆಗೆ ಸಹ ಕಾರಣವಾಗಿದೆ. ಅಲ್ಲಲ್ಲಿ ನೀರು ನಿಲ್ಲುವುದು, ನಿರಂತರ ಮಳೆ ಮತ್ತು ಹದಗೆಟ್ಟ ರಸ್ತೆಗಳಿಂದಾಗಿ ನಿಧಾನವಾಗಿ ಚಲಿಸುವ ವಾಹನಗಳಿಂದಾಗಿ ಜನರಿಗೆ ತೊಂದರೆಯಾಗಿದೆ. ಬಹುತೇಕರು ಹಲವಾರು ಗಂಟೆಗಳ ಕಾಲ ರಸ್ತೆಯಲ್ಲಿ ಕಳೆಯಬೇಕಾಯಿತು.

ಅಗರ ಮತ್ತು ಕೆಆರ್ ಪುರಂ ನಡುವಿನ ಹೊರವರ್ತುಲ ರಸ್ತೆ, ಸರ್ಜಾಪುರ ರಸ್ತೆಗೆ ಹೋಗುವ ಹರಳೂರು ಬಳಿ, ಎಂಜಿ ರಸ್ತೆಯ ಟ್ರಿನಿಟಿ ವೃತ್ತದ ಬಳಿ, ದೊಡ್ಡಕನ್ನೆಹಳ್ಳಿ ಮುಂತಾದ ಕಡೆ ವಾಹನಗಳು ಸಂಪೂರ್ಣ ನಿಂತೆ ಹೋಗಿದ್ದವು.

ಸರ್ಜಾಪುರ ರಸ್ತೆಯ ರೇನ್‌ಬೋ ಡ್ರೈವ್‌ನ ನಿವಾಸಿ ಕೆ. ಸಿ. ಸಿಂಗ್, ತಮ್ಮ ಮನೆಯ ರಸ್ತೆ ಜಲಾವೃತಗೊಂಡಿದ್ದರಿಂದ ತಮ್ಮ ಮನೆಯ ಹಾಗೂ ಅಕ್ಕಪಕ್ಕದ ನಿವಾಸಿಗಳನ್ನು ಕರೆದುಕೊಂಡು ಹೋಗಲು ಟ್ರ್ಯಾಕ್ಟರ್ ಅನ್ನು ನಿಯೋಜಿಸಿದರು.

ಸದ್ಯ ಈಗ ಮಳೆಯಾಗುತ್ತಿಲ್ಲ, ಆದರೆ ತುಂಬಿರುವ ನೀರನ್ನು ಹೊರಹಾಕಲು ನಾವು ಇನ್ನೂ ಹೆಣಗಾಡುತ್ತಿದ್ದೇವೆ ಎಂದು ಅವರು ಬುಧವಾರ ಹೇಳಿದರು. ನೀರು ಮೊಣಕಾಲು ಆಳವಾಗಿದ್ದರಿಂದ ನಾವು ಸಂಚಾರಕ್ಕೆ ಟ್ರ್ಯಾಕ್ಟರ್ ಬಳಸಬೇಕಾಯಿತು. ಟ್ರಾಕ್ಟರ್ ಅನ್ನು ಶಾಲಾ ಬಸ್‌ಗಳಿಂದ ಇಳಿದ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಸಹ ಬಳಸಲಾಗುತ್ತಿತ್ತು.

ಪ್ರವಾಹದಂತಹ ಪರಿಸ್ಥಿತಿಗಳನ್ನು ಯಾವಾಗಲೂ ಅನುಭವಿಸುವ ಪ್ರದೇಶಗಳಲ್ಲಿ ವಾಸಿಸುವ ಕೆಲವು ನಿವಾಸಿಗಳು, ಜಲಾವೃತ ರಸ್ತೆಗಳಲ್ಲಿ ನಡೆಯುವಾಗ ತಮ್ಮ ಬಟ್ಟೆಗಳು ಒದ್ದೆಯಾಗದಂತೆ ನೋಡಿಕೊಳ್ಳಲು ಹೆಚ್ಚುವರಿ ಶಾರ್ಟ್ಸ್ ಅನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದರು.

ಎರಡು ಕಾರುಗಳಿಗೆ ಸಂಪೂರ್ಣ ಹಾನಿ

ಎರಡು ಕಾರುಗಳಿಗೆ ಸಂಪೂರ್ಣ ಹಾನಿ

ಹೊರಮಾವು ಮುಖ್ಯರಸ್ತೆಯ ಪ್ರೇರಣಾ ಟ್ರ್ಯಾಂಕ್ವಿಲ್ ಅಪಾರ್ಟ್‌ಮೆಂಟ್‌ನ ನಿವಾಸಿ ಶ್ರೀನಾಥ್, ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ ನೀರಿನಿಂದ ಜಲಾವೃತಗೊಂಡಿದ್ದರಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಮೇ ತಿಂಗಳಲ್ಲಿ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿದಾಗ ಎರಡು ಕಾರುಗಳು ಸಂಪೂರ್ಣ ಹಾನಿಗೀಡಾಗಿದ್ದವು. ಈ ಬಾರಿ ನೀರು ಹರಿದು ಬರಲಾರಂಭಿಸಿದ್ದರಿಂದ ಕಾರುಗಳನ್ನು ಹೊರತೆಗೆಯಲಾಗಲಿಲ್ಲ ಎಂದು ಖಚಿತಪಡಿಸಿಕೊಂಡಿದ್ದೇವೆ. ನಮಗೆ ಈಗ ಶುದ್ಧಕುಡಿಯುವ ನೀರು ಲಭ್ಯವಿಲ್ಲ ಎಂದು ಅವರು ಹೇಳಿದರು.

ಸೆಪ್ಟೆಂಬರ್ ವೇಳೆಗೆ ಕಾಮಗಾರಿ

ಸೆಪ್ಟೆಂಬರ್ ವೇಳೆಗೆ ಕಾಮಗಾರಿ

ಸಾಯಿ ಲೇಔಟ್ ನಿವಾಸಿಗಳು ಮತ್ತು ಹೊರಮಾವು ಅಕ್ಕಪಕ್ಕದ ಬಡಾವಣೆಗಳು ಮುಂದಿನ ಮಳೆಗಾಲದಲ್ಲಿ ಪ್ರವಾಹದ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ರೈಲ್ವೆ ವೆಂಟ್ ಅನ್ನು ಅಗಲಗೊಳಿಸಲು ನಾವು ಕಾರ್ಯಾದೇಶವನ್ನು ನೀಡಿದ್ದೇವೆ. ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಮುಂದಿನ ವರ್ಷದ ವೇಳೆಗೆ ಪರಿಸ್ಥಿತಿ ಸುಧಾರಿಸಲಿದೆ ಎಂದರು.

ಒತ್ತುವರಿ ತೆರವುಗೊಳಿಸಲು ಸೂಚನೆ

ಒತ್ತುವರಿ ತೆರವುಗೊಳಿಸಲು ಸೂಚನೆ

ಪ್ರತಿ ಬಾರಿ ಮನೆಗೆ ನೀರು ನುಗ್ಗಿದಾಗ ಬಿಬಿಎಂಪಿ 10,000 ರೂಪಾಯಿ ಪರಿಹಾರ ನೀಡುವುದನ್ನು ಮುಂದುವರಿಸಲಿದೆ. ನಾವು ಚರಂಡಿಗಳನ್ನು ಮರುರೂಪಿಸುವ ಮೊದಲು ಒತ್ತುವರಿ ತೆರವುಗೊಳಿಸಲು ಎಂಜಿನಿಯರ್‌ಗಳಿಗೆ ಸೂಚಿಸಿದ್ದೇವೆ. ದಿನನಿತ್ಯವೂ ಪ್ರಮುಖ ಚರಂಡಿಗಳ ಹೂಳು ತೆಗೆಯುತ್ತಿದ್ದೇವೆ ಎಂದು ಹೇಳಿದರು.

ನಮ್ಮ ಚರಂಡಿಗಳು ಅಸಮರ್ಪಕವಾಗಿವೆ

ನಮ್ಮ ಚರಂಡಿಗಳು ಅಸಮರ್ಪಕವಾಗಿವೆ

ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ನಗರದ ಚರಂಡಿಗಳು ಮತ್ತು ಕೆರೆಗಳು ಕೇವಲ 75 ಮಿ. ಮೀ. ಮಳೆಯನ್ನು ನಿಬಾಯಿಸಬಲ್ಲವು. ಆದರೆ ಬೆಂಗಳೂರಿನಲ್ಲಿ 100 ಮಿ.ಮೀ ಗಿಂತ ಹೆಚ್ಚು ಮಳೆ ದಾಖಲಾಗಿದೆ. ಅಂತಹ ಪ್ರಮಾಣದ ನೀರನ್ನು ನಿರ್ವಹಿಸಲು ನಮ್ಮ ಚರಂಡಿಗಳು ಅಸಮರ್ಪಕವಾಗಿವೆ. ಖಾಸಗಿ ಮತ್ತು ಸಾರ್ವಜನಿಕ ಕಟ್ಟಡಗಳ ಮೇಲೆ ಮಳೆ ನೀರು ಕೊಯ್ಲು ಕ್ರಮಗಳನ್ನು ಅಳವಡಿಸುವ ಮೂಲಕ ಹರಿದು ಹೋಗುವುದನ್ನು ತಪ್ಪಿಸುವುದು ಮುಖ್ಯ ಎಂದು ಅವರು ಹೇಳಿದರು.

Recommended Video

Nancy Pelosi ಅವರ ತೈವಾನ್ ಭೇಟಿಯಿಂದ ಕೆಂಡಾಮಂಡಲವಾದ ಚೀನಾ !! *World | OneIndia Kannada

English summary
Many roads in Bengaluru city were completely waterlogged due to the rain on Wednesday night. Many of the city's lakes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X